More

    ಹಳೇ ನಾಣ್ಯಗಳಲ್ಲಿ ಅರಳಿದ ರಾಮಮಂದಿರ

    ಕಲಘಟಗಿ: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಭಕ್ತರಿಂದ ಶ್ರೀರಾಮನಿಗೆ ಒಂದಿಲ್ಲೊಂದು ವಿಶೇಷ ಗೌರವ ಸಮರ್ಪಣೆ ಕಾರ್ಯ ನಡೆಯುತ್ತಿವೆ. ಪಟ್ಟಣದ ಯುವಕನೊಬ್ಬ ಪುರಾತನ ಕಾಲದ ನಾಣ್ಯಗಳಲ್ಲಿ ಶ್ರೀ ರಾಮಮಂದಿರ ರಚಿಸಿ ಶ್ರೀರಾಮನಿಗೆ ಅರ್ಪಿಸಿದ್ದಾನೆ.
    ನಾಣ್ಯ ಸಂಗ್ರಹದಲ್ಲಿ ಅಪಾರ ಪ್ರೇಮ ಹೊಂದಿರುವ ಪಟ್ಟಣದ ಬಸವೇಶ್ವರ ನಗರದ ಸುನೀಲ ಕಮ್ಮಾರ ಎಂಬುವವರು ತಮ್ಮಲ್ಲಿದ್ದ ಪುರಾತನ ಕಾಲದ ಸುಮಾರು 16 ದೇಶಗಳ 900ಕ್ಕೂ ಅಧಿಕ ನಾಣ್ಯ ಹಾಗೂ ನೋಟುಗಳನ್ನು ಬಳಸಿ ರಾಮ ಮಂದಿರ ಚಿತ್ರಿಸಿದ್ದಾನೆ.

    ಈ ಹಿಂದೆ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಳೆಯ ನಾಣ್ಯಗಳಲ್ಲಿ ಕರ್ನಾಟಕ ನಕಾಶೆಯ ಚಿತ್ರ ರಚಿಸಿದ್ದೆ. ಈಗ ನನ್ನ ಬಳಿ ಇರುವ ಸಾವಿರಕ್ಕೂ ಅಧಿಕ ನಾಣ್ಯಗಳನ್ನು ಬಳಸಿ 6 ತಾಸುಗಳಲ್ಲಿ ಶ್ರೀ ರಾಮ ಮಂದಿರ ನಿರ್ಮಿಸಿದ್ದೇನೆ. ಇದು ನನಗೆ ತುಂಬಾ ಹೆಮ್ಮೆ ತಂದಿದೆ.
    ಸುನೀಲ ಕಮ್ಮಾರ ನಾಣ್ಯ ಸಂಗ್ರಹಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts