10 ಕೆಜಿ ದಾಳಿಂಬೆಗೆ 2100 ರೂ.

blank
blank

ಕಲಾದಗಿ: ಉತ್ಕೃಷ್ಟವಾದ ದಾಳಿಂಬೆ ಬೆಳೆಯಲು ಹೆಸರುವಾಸಿಯಾದ ಕಲಾದಗಿ ಗ್ರಾಮದಲ್ಲಿ ಬುಧವಾರ ದಾಳಿಂಬೆ ಮಾರಾಟದ ಇತಿಹಾಸದಲ್ಲಿ ಅಪರೂಪ ದಾಖಲೆ ನಿರ್ಮಾಣವಾಯಿತು.

ಗ್ರಾಮದ ಯಾಕೂಬ್ ಸೌದಾಗರ ತಮ್ಮ ತೋಟದಲ್ಲಿ ಬೆಳೆದಿದ್ದ ದಾಳಿಂಬೆ 10 ಕೆಜಿಗೆ 2,100 ರೂ. ದಾಖಲೆ ಬೆಲೆಗೆ ಮಾರಾಟವಾಗಿದೆ. ಒಟ್ಟು 12 ಕ್ವಿಂಟಾಲ್ ದಾಳಿಂಬೆ ಮಾರಾಟ ಮಾಡಿದ್ದು, ಈ ಭಾಗದ ದಾಳಿಂಬೆ ಬೆಳೆಗಾರರಲ್ಲಿ ಹುಮ್ಮಸ್ಸು ಮೂಡಿಸಿದೆ.

ದಾಖಲೆ ನಿರ್ಮಾಣ
4 ವರ್ಷಗಳ ಹಿಂದೆ 10 ಕೆಜಿಗೆ 1,600 ರೂ., 1,700 ರೂ. ಮಾರಾಟವಾಗಿದ್ದ ದಾಖಲೆ ಈ ವರ್ಷ ಪುಡಿಗಟ್ಟಿತು. ಗುಣಮಟ್ಟದ ದಾಳಿಂಬೆ ಬೆಳೆದಿರುವುದು ಹಾಗೂ ಇತ್ತೀಚಿನ ವಾತಾವರಣದಲ್ಲಾದ ಏರುಪೇರಿನಿಂದಾಗಿ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಗುಣಮಟ್ಟದ ದಾಳಿಂಬೆ ಲಭ್ಯವಿರದೆ ಇರುವುದು ಈ ದಾಖಲೆ ಬೆಲೆಗೆ ಕಾರಣ ಎಂದು ಬೆಳೆಗಾರರು ವಿಶ್ಲೇಷಿಸುತ್ತಿದ್ದಾರೆ.

ಹೈದರಾಬಾದ್ ಮಾರುಕಟ್ಟೆ
ಈ ಭಾಗದಲ್ಲಿ ರೈತರಿಂದ ಬೆಳೆದ ದಾಳಿಂಬೆ ಖರೀದಿ ಮಾಡಿ ಹೈದರಾಬಾದ್ ಮಾರುಕಟ್ಟೆಗೆ ಕಳಿಸುವ ಕೆಎಸ್‌ಸಿ ಕಂಪನಿ ಬುಧವಾರ ಯಾಕೂಬ್ ಅವರಿಂದ ದಾಖಲೆ ಬೆಲೆಗೆ ದಾಳಿಂಬೆಯನ್ನು ಖರೀದಿ ಮಾಡಿತು.

ಯುವ ರೈತನಿಗೆ ಸನ್ಮಾನ
ಸ್ಥಳೀಯ ಬಾಗವಾನ ಫ್ರೂಟ್ಸ್ ಮರ್ಚಂಟ್ಸ್ ಸಂಘದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಯಾಕೂಬ್ ಸೌದಾಗರ ಅವರನ್ನು ಸತ್ಕರಿಸಲಾಯಿತು. ಸಂಘದ ಅಧ್ಯಕ್ಷ ಎಚ್.ಎಂ. ಹೊಸಕೋಟಿ, ಕೆಎಫ್‌ಸಿ ಕಂಪನಿಯ ಶಕೀಲ್ ಭಾಯಿ, ರೈತ ಮುಖಂಡರಾದ ಎಂ.ಬಿ. ಸೌದಾಗರ, ಪರಪ್ಪ ಕಡೆಮನಿ, ಸುನೀಲ ಬಾಗೇವಾಡಿ, ದಾದಾ ಬೀಳಗಿ, ಬಿ.ಎಸ್.ಸೌದಾಗರ, ರಿಯಾಜ್ ಮುಜಾವರ, ಇಬ್ರಾಹಿಂ ಸೋಲ್ಜರ್, ಬಂದೇನವಾಜ್ ಸೌದಾಗರ, ಎಸ್.ಡಿ. ಅಂಕಲಗಿ, ಸೈಯದ್ ಚೌದರಿ, ಭೀಮಶಿ ಮಾದರ ಇದ್ದರು.





Share This Article

ಸಂಜೆ 7 ಗಂಟೆಯೊಳಗೆ ಊಟ ಮಾಡಿದರೆ ನಿಮ್ಮ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..? Dinner

Dinner: ನಿಮ್ಮ ದೇಹವು ಸಿರ್ಕಾಡಿಯನ್ ಲಯ ಎಂದು ಕರೆಯಲ್ಪಡುವ ಆಂತರಿಕ ಗಡಿಯಾರವನ್ನು ಹೊಂದಿದೆ ಮತ್ತು ಇದು…