More

    ಕಲಾದಗಿಯಲ್ಲಿ ಮಂಗ ಸೆರೆ

    ಕಲಾದಗಿ: ಗ್ರಾಮದಲ್ಲಿ ಭಾನುವಾರ ಸಂಜೆ ಹರಣಶಿಕಾರಿ ಕಾಲನಿಯ ಎರಡು ತಿಂಗಳ ಮಗುವಿನ ಮೇಲೆ ದಾಳಿ ಮಾಡಿದ್ದ ಮಂಗನನ್ನು ಅರಣ್ಯ ಇಲಾಖೆ ಹಾಗೂ ಗ್ರಾಪಂ ಸಿಬ್ಬಂದಿ ಸೋಮವಾರ ಸೆರೆ ಹಿಡಿದಿದ್ದಾರೆ.

    ಮಂಗ ಹಿಡಿಯುವಲ್ಲಿ ಪರಿಣಿತರಾದ ಬಾದಾಮಿ ತಾಲೂಕಿನ ಚೋಳಚಗುಡ್ಡದ ವೀರಯ್ಯ ಸರಗಣಾಚಾರಿ ಅವರೊಂದಿಗೆ ಆಗಮಿಸಿದ ಅರಣ್ಯ ಇಲಾಖೆ ಹಾಗೂ ಗ್ರಾಪಂ ಸಿಬ್ಬಂದಿ ಸ್ಥಳೀಯ ಹಣ್ಣು ಬೆಳೆಗಾರರ ಶಾಲೆ ಆವರಣದ ಮೊಬೈಲ್ ಟವರ್‌ನಲ್ಲಿ ಮಂಗ ಇರುವುದನ್ನು ಪತ್ತೆಹಚ್ಚಿ ಕಾರ್ಯಾಚರಣೆ ಮಾಡಿದರು. ಕೆಲ ಹೊತ್ತಿನಲ್ಲಿ ವಾಹನದ ಪಂಜರದೊಳಗೆ ಮಂಗ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

    ಉಪವಲಯ ಅರಣ್ಯಾಧಿಕಾರಿ ಆರ್.ವಿ. ಮಠ, ಅರಣ್ಯ ರಕ್ಷಕ ಸದಾನಂದ ಮೇಟಿ, ಗ್ರಾಪಂ ನೌಕರ ಎಂ.ಎಸ್. ಶೆಟ್ಟರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತೊಡೆಯ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಗುವಿಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಎನ್ನಲಾಗುತ್ತಿದೆ.

    ಅರಣ್ಯ ಇಲಾಖೆ ಧನ ಸಹಾಯ ನೀಡಲಿ
    ಮಗು ಗುಣಮುಖವಾಗಲು ಸಾಕಷ್ಟು ಹಣ ಖರ್ಚಾಗುತ್ತಿದ್ದು, ಅದನ್ನು ಭರಿಸಲು ಮಗುವಿನ ಪಾಲಕರಿಗೆ ಕಷ್ಟವಾಗುತ್ತಿದೆ. ಅರಣ್ಯ ಇಲಾಖೆ ಮಗುವಿನ ಪಾಲಕರಿಗೆ ಆರ್ಥಿಕ ನೆರವು ನೀಡಿದರೆ ಅನುಕೂಲವಾಗುತ್ತದೆ ಎಂದು ಹರಣಶಿಕಾರಿ ಸಮಾಜದ ಮುಖಂಡ ಶ್ಯಾಮ ಕಾಳೆ ಒತ್ತಾಯಿಸಿದ್ದಾರೆ.

    ಪರಿಹಾರ ಧನಕ್ಕಾಗಿ ವರದಿ ಸಲ್ಲಿಕೆ
    ಈ ರೀತಿಯ ಅಪರೂಪದ ಪ್ರಕರಣಕ್ಕೆ ಇಲಾಖೆಯಿಂದ ಯಾವ ರೀತಿ ಪರಿಹಾರಧನ ಸಿಗುತ್ತದೆ ಪರಿಶೀಲನೆ ಮಾಡಲಾಗುತ್ತದೆ. ಮಗುವಿನ ಪಾಲಕರಿಗೆ ಪರಿಹಾರ ಧನ ನೀಡುವಂತೆ ಕೋರಿ ಅಗತ್ಯ ದಾಖಲೆ, ಮಾಹಿತಿಯನ್ನು ಅರಣ್ಯ ಇಲಾಖೆ ಮೇಲಧಿಕಾರಿಗಳಿಗೆ ಕಳಿಸಲಾಗುವುದು. ಮಾನವೀಯತೆ ಹಿನ್ನೆಲೆಯಲ್ಲಿ ಮೇಲಧಿಕಾರಿಗಳಿಗೆ ಮೌಕಿಕವಾಗಿಯೂ ಮನವರಿಕೆ ಮಾಡಿಕೊಡಲಾಗುವುದು ಎಂದು ಬಾಗಲಕೋಟೆ ತಾಲೂಕು ವಲಯ ಅರಣ್ಯಾಧಿಕಾರಿ ರೂಪಾ ವಿ.ಕೆ. ತಿಳಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts