More

    ಮಾರ್ಗಸೂಚಿ ಪಾಲನೆ ಮಾಡಿ, ಲೋಕಾಯುಕ್ತ ಸಿಪಿಐ ಎಸ್.ಎಂ.ಅವಜಿ ಸೂಚನೆ

    ಕಲಾದಗಿ: ಕರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸೂಚಿರುವ ಮಾರ್ಗಸೂಚಿಗಳನ್ನು ಗ್ರಾಮದ ಶಾಲೆ-ಕಾಲೇಜುಗಳು ಅನುಷ್ಠಾನಗೊಳಿಸುತ್ತಿರುವ ಬಗ್ಗೆ ಬಾಗಲಕೋಟೆಯ ಲೋಕಾಯುಕ್ತ ಸಿಪಿಐ ಎಸ್.ಎಂ.ಅವಜಿ ಪರಿಶೀಲಿಸಿದರು.

    ಗ್ರಾಮದ ಗುರುಲಿಂಗೇಶ್ವರ ಪ್ರೌಢಶಾಲೆ, ಗುರುಲಿಂಗೇಶ್ವರ ಪದವಿ ಪೂರ್ವ ಕಾಲೇಜು, ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಹಾಗೂ ಸರ್ಕಾರಿ ಉರ್ದು ಪ್ರೌಢಶಾಲೆಗಳಿಗೆ ಮಂಗಳವಾರ ಭೇಟಿ ನೀಡಿ ಕೋವಿಡ್ ಮಾರ್ಗಸೂಚಿಗಳು ಪಾಲನೆಯಾಗುತ್ತಿರುವ ಬಗ್ಗೆ ವಸ್ತು ಸ್ಥಿತಿಯನ್ನು ಗಮನಿಸಿದರು.
    ಶಾಲೆ-ಕಾಲೇಜುಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಮಾಡುತ್ತಿರುವ ಬಗ್ಗೆ ಇತರ ಅಗತ್ಯ ಮಾರ್ಗಸೂಚಿಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿ ಆಡಳಿತ ಮಂಡಳಿ, ಮುಖ್ಯಗುರುಗಳು ಹಾಗೂ ಪ್ರಾಂಶುಪಾಲರಿಂದ ಅಗತ್ಯ ಮಾಹಿತಿ ಪಡೆದರು. ಮಾರ್ಗಸೂಚಿಗಳ ಕಾರ್ಯಪಾಲನೆಗೆ ಖಡಕ್ ಸೂಚನೆ ನೀಡಿದರು.

    ಮಕ್ಕಳು ಮಾಸ್ಕ್ ಧರಿಸಿರುವುದನ್ನು, ಪರಸ್ಪರ ಅಂತರದೊಂದಿಗೆ ಇರುವುದನ್ನು ಖುದ್ದಾಗಿ ಪರಿಶೀಲಿಸಿದರು. ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಜಿ.ದೇಶಪಾಂಡೆ, ಮುಖ್ಯಗುರು ಆರ್.ವಿ.ಜಾಧವ, ಆರ್.ಪಿ.ಜೋಶಿ, ಗುರುಲಿಂಗೇಶ್ವರ ಪ್ರೌಢಶಾಲೆಯಲ್ಲಿ ಮುಖ್ಯಗುರು ಬಿ.ಎ.ಬಾಗವಾನ, ಗುರುಲಿಂಗೇಶ್ವರ ಪಪೂ ಕಾಲೇಜಿನಲ್ಲಿ ಪ್ರಾಂಶುಪಾಲ ಶಂಕರ ನಿಂಬರಗಿ, ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಮುಖ್ಯಗುರು ಎಸ್.ಆರ್.ವಾಲಿ ಇತರರಿದ್ದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts