More

    ಕಲಬುರಗಿಯಲ್ಲಿ ನ್ಯೂಜಿಲೆಂಡ್ ಮೂಲದ ಮೀನು ಪತ್ತೆ! ಸಂಶೋಧನೆ ಮಾಡುವವರೆಗೂ ಮೀನು ಮಾರದಿರಲು ಸೂಚನೆ

    ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ನಾಗರಾಳ ಜಲಾಶಯದಲ್ಲಿ ವಿಚಿತ್ರ ಹಾಗೂ ಅಪರೂಪದ ಮೀನು ಬಲೆಗೆ ಬಿದ್ದಿದ್ದು, ಅದನ್ನು ಕಣ್ತುಂಬಿಕೊಳ್ಳಲು ಸ್ಥಳೀಯರು ಮುಗಿಬಿದ್ದಿದ್ದಾರೆ.

    ಮೀನುಗಾರ ಈಶ್ವರ್ ಎಂಬುವರ ಬಲೆಗೆ ಈ ವಿಚಿತ್ರ ಮೀನು ಬಿದ್ದಿದೆ. ಸುಮಾರು 6 ಅಡಿ ಉದ್ದದ ಹಾಗೂ 13 ಕೆಜಿಯ ಬೃಹತ್ ಮೀನು ಇದಾಗಿದ್ದು, ನ್ಯೂಜಿಲೆಂಡ್​ ಮೂಲದ್ದು ಎಂದು ಹೇಳಲಾಗಿದೆ. ನೋಡಲು ಬಲು ಅಪರೂಪದಂತಿರುವ ಈ ಮೀನನ್ನು ನೋಡಲು ಅಕ್ಕಪಕ್ಕದ ಊರಿನವರು ಮೀನುಗಾರ ಈಶ್ವರ್​ ಮನೆಗೆ ಧಾವಿಸುತ್ತಿದ್ದಾರೆ.

    ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ಅಪರೂಪದ ಮೀನು ಪತ್ತೆಯಾಗಿದ್ದು, ಇದರ ಕುರಿತು ಸಂಶೋಧನೆ ಮಾಡುವ ತನಕ ಮೀನು ಮಾರದಿರಲು ಮೀನುಗಾರಿಕೆ ಇಲಾಖೆ ಸೂಚನೆಯನ್ನು ನೀಡಿದೆ. ಸದ್ಯಕ್ಕೆ ಮೀನಿನ ಹಿನ್ನೆಲೆ ಮತ್ತು ಅದು ತಿನ್ನಲು ಯೋಗ್ಯವೇ ಎಂಬುದರ ಬಗ್ಗೆ ಸಂಶೋಧಕರು ಸಂಶೋಧನೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಪ್ತಪದಿ ತುಳಿಯೋ ಮುನ್ನವೇ ಸನ್ನಿಧಿಗೆ ಮೋಸ? ಈ ಸಂಗತಿ ಗೊತ್ತಾದ್ರೆ ವೈಷ್ಣವಿಗೆ ಉಗಿದು ಉಪ್ಪಿನಕಾಯಿ ಹಾಕ್ತಾರಂತೆ!

    ಹುಡುಗಿಯರಿಬ್ಬರ ಆಡಿಯೋ ವೈರಲ್​ ಆದ ಬೆನ್ನಲ್ಲೇ ಸಂಬಂಧಕ್ಕೆ ಅಂತ್ಯವಾಡಿದ ಸನ್ನಿಧಿ! ವೈಷ್ಣವಿ ಮಾಡಿದ ಮನವಿ ಹೀಗಿದೆ…

    ಒಟಿಟಿಯಲ್ಲಿ ಬದಲಾದ ‘ವರಾಹ ರೂಪಂ…’ ಹಾಡಿನ ಟ್ಯೂನ್; ಕೇಳುಗರಿಂದ ಮಿಶ್ರ ಪ್ರತಿಕ್ರಿಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts