More

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ ವಿಶ್ವಸಂಸ್ಥೆಗೆ ಡಾ.ಕಫೀಲ್ ಖಾನ್ ದೂರು 

    ಜೈಪುರ:  ಎನ್​ಎಸ್​ಎ ಕಾಯ್ದೆಯ ಆರೋಪಗಳಿಂದ ಇತ್ತೀಚೆಗಷ್ಟೆ ಮುಕ್ತಗೊಂಡಿರುವ ಡಾ.ಕಫೀಲ್ ಖಾನ್​  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧದ ಹೋರಾಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಎಳೆದಿದ್ದಾರೆ. ಜೈಪುರದಲ್ಲಿ ವಾಸಿಸುತ್ತಿರುವ ಕಫೀಲ್ ಖಾನ್​, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
    ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಭಾರತ ಸರ್ಕಾರಕ್ಕೆ ಜೂನ್ 26ರಂದು ಪತ್ರ ಬರೆದು ಕಫೀಲ್ ಖಾನ್​, ಶಾರ್ಜೀಲ್ ಇಮಾಮ್ ಪ್ರಕರಣವೂ ಸೇರಿ 11 ಪ್ರಕರಣಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಗಂಭೀರ ಆರೋಪದ ಬಗ್ಗೆ ಗಮನಸೆಳೆದಿತ್ತು. ಮಾನವಹಕ್ಕುಗಳ ಉಲ್ಲಂಘನೆಯಾಗದಂತೆ ಗಮನಿಸಲು ಭಾರತ ಸರ್ಕಾರಕ್ಕೆ ಮನವಿ ಮಾಡಿದ ಈ ಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದ ಕಫೀಲ್ ಖಾನ್​, ಸಿಎಎ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರನ್ನು ಹತ್ತಿಕ್ಕಲು ನ್ಯಾಷನಲ್ ಸೆಕ್ಯೂರಿಟಿ ಆ್ಯಕ್ಟ್, ಯುಎಪಿಎ ಮುಂತಾದ ಕಾನೂನುಗಳನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಇದು ಈಗಲೂ ಮುಂದುವರಿದಿದೆ ಎಂದು ಪತ್ರದಲ್ಲಿ ದೂರಿದ್ದಾರೆ.
    ಇದಲ್ಲದೆ, 2017ರ ಆಗಸ್ಟ್ 10ರಂದು ಗೋರಖಪುರ ಬಾಭಾ ರಾಘವ ದಾಸ್ ಮೆಡಿಕಲ್ ಕಾಲೇಜಿನಲ್ಲಿ ಮಕ್ಕಳು ಪ್ರಾಣ ಕಳೆದುಕೊಂಡ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಆಕ್ಸಿಜನ್ ಪೂರೈಸುವಲ್ಲಿ ಸರ್ಕಾರ ವಿಫಲವಾದ ಕಾರಣ ಈ ಮರಣ ಸಂಭವಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. 2018ರ ಏಪ್ರಿಲ್ 25ರಂದು ಹೈಕೋರ್ಟ್ ಕೂಡ ಆಕ್ಸಿಜನ್ ಟೆಂಡರ್ ಪ್ರಕ್ರಿಯೆಯಲ್ಲಿ ಕಫೀಲ್ ಖಾನ್ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿತ್ತು ಎಂಬುದನ್ನೆಲ್ಲ ಅವರು ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್)

    ಬಾಂಗ್ಲಾ ಗಡಿಯಲ್ಲಿ ಮ್ಯಾಪ್ ಹಿಡ್ಕೊಂಡು ಸಂದೇಹಾಸ್ಪದವಾಗಿ ಅಡ್ಡಾಡುತ್ತಿದ್ದವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts