More

    ಡಿಕೆಶಿಗೆ ಖಡ್ಸಲೆ ಉಡುಗೊರೆ ವಿವಾದ

    ಉಡುಪಿ/ಕಾರ್ಕಳ: ಉಡುಪಿಯ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಪಕ್ಷದ ನಾಯಕರೊಬ್ಬರು ದೈವದ ಖಡ್ಸಲೆ ರೂಪದಲ್ಲಿರುವ ಆಕೃತಿ ಉಡುಗೊರೆ ನೀಡಿರುವುದು ವಿವಾದ ಸೃಷ್ಟಿಸಿದೆ.
    ಅಭಿನಂದನೆ ಸಲ್ಲಿಸುವಾಗ ಕಾಂಗ್ರೆಸ್ ಮುಖಂಡರು ದೈವದ ಕಡ್ಸಲೆ ಹೋಲುವ ರೀತಿಯಲ್ಲಿದ್ದ ಸ್ಮರಣಿಕೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದ್ದು, ದೈವದ ಖಡ್ಸಲೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂಬ ವಾದ ಕೇಳಿಬರುತ್ತಿದೆ. ಆದರೆ, ಅದು ನಿಜವಾದ ಕಡ್ಸಲೆ ಅಲ್ಲ. ಆರ್ಟಿಫಿಶಿಯಲ್ ಆಗಿರುವುದರಿಂದ ವಿವಾದದಲ್ಲಿ ಅರ್ಥವಿಲ್ಲ. ದೈವದೇವರಿಗೆ ಸಂಬಂಧಿಸಿದ ಇಂಥ ಹಲವು ಪರಿಕರಗಳನ್ನು ಸ್ಮರಣಿಕೆಯಾಗಿ ನೀಡುವ ಪರಿಪಾಠ ಬೆಳೆದುಬಂದಿರುವಾಗ ಈಗ ಮಾತ್ರ ವಿವಾದವೇಕೆ ಎಂದೂ ಪ್ರಶ್ನಿಸಲಾಗುತ್ತಿದೆ.

    ಸುನೀಲ್ ಕುಮಾರ್ ಕಿಡಿ:ದೈವಗಳು ನುಡಿಕೊಡುವ ಖಡ್ಸಲೆಯನ್ನು ರಾಜಕೀಯ ವೇದಿಕೆಯಲ್ಲಿ ಸ್ಮರಣಿಕೆಯಾಗಿ ಕೊಡುವ ಮೂಲಕ ತುಳುನಾಡಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಕಾರ್ಕಳ ಶಾಸಕ ಸುನೀಲ್‌ಕುಮಾರ್ ಆರೋಪಿಸಿದ್ದಾರೆ.
    ದೈವಗಳು ನುಡಿ ಕೊಡುವ ಖಡ್ಸಲೆಗೆ(ದೈವದ ಖಡ್ಗ) ವಿಶೇಷ ಪ್ರಾಧಾನ್ಯತೆ ಇದ್ದು, ಖಡ್ಸಲೆಯಲ್ಲಿ ಕೊಡುವ ನುಡಿಯನ್ನು ಇಡೀ ತುಳುನಾಡು ಪಾಲಿಸುತ್ತದೆ. ಸ್ಮರಣಿಕೆ ನೀಡಲು ಬೇರೆ ಬೇರೆ ಅವಕಾಶ ಇದ್ದರೂ ದೈವಾರಾಧನೆಯ ಖಡ್ಸಲೆ ನೀಡಿರುವುದು ಖಂಡನೀಯ. ಇದು ಕಾಂಗ್ರೆಸ್‌ನ ದಿವಾಳಿತನವನ್ನು ತೋರಿಸುತ್ತದೆ. ತಕ್ಷಣವೇ ತುಳುನಾಡಿನ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts