More

    ಕದರಮಂಡಲಗಿ ಕಾಂತೇಶ ಸ್ವಾಮಿ ರಥೋತ್ಸವ

    ಬ್ಯಾಡಗಿ: ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಶ್ರೀ ಕಾಂತೇಶ ಸ್ವಾಮಿ ಜಾತ್ರಾ ಮಹೋತ್ಸವ ಸೋಮವಾರ ಶ್ರದ್ಧೆ-ಭಕ್ತಿಯಿಂದ ಜರುಗಿತು.

    ಕರ್ನಾಟಕದ ಎರಡನೇ ತಿರುಪತಿ ಎಂದೇ ಪ್ರಸಿದ್ಧಿಯಾದ ಇಲ್ಲಿನ ಮಹಾರಥೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ‘ಜೈರಾಮ, ಶ್ರೀರಾಮ ಜೈ ಜೈ ರಾಮ’ ಘೊಷಣೆಯೊಂದಿಗೆ ಆಂಜನೇಯ ದೇವರ ಪಲ್ಲಕ್ಕಿ ಹೊತ್ತು ಭಕ್ತಿ ಮೆರೆದರು.

    ಮಹಾದ್ವಾರ ಪಕ್ಕದ ಚೌಡೇಶ್ವರಿ ದೇವಿ, ಆಂಜನೇಯ ದರ್ಶನಕ್ಕೆ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು. ತಾಲೂಕಾಡಳಿತದ ಸೂಚನೆಯಂತೆ ಕೋವಿಡ್ ನಿಯಮ ಪಾಲನೆಗೆ ದೇವಸ್ಥಾನದಲ್ಲಿ ಒತ್ತು ನೀಡಲಾಗಿತ್ತು. ಗರ್ಭಗುಡಿ ಪ್ರವೇಶಿಸಲು ಗ್ರಿಲ್​ಗಳನ್ನು ಅಳವಡಿಸಿ, ನೂಕು ನುಗ್ಗಲು ನಿಯಂತ್ರಿಸಲು ದೇವಸ್ಥಾನದ ಕಮಿಟಿಯವರು ಮುಂದಾದರು. ಕಾಂತೇಶ ಸ್ವಾಮಿ ದರ್ಶನಕ್ಕಾಗಿ ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಿದ್ದರು. ಭಕ್ತರಿಗಾಗಿ ದೇವಸ್ಥಾನ ಸಮೀಪ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಗ್ರಾಪಂ, ಸ್ಥಳೀಯರು ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts