More

    ಫೆ. 24, 25ರಂದು ಕದಂಬೋತ್ಸವ

    ಶಿರಸಿ: ತಾಲೂಕಿನ ಬನವಾಸಿಯಲ್ಲಿ ಫೆ. 24ಹಾಗೂ 25ರಂದು ಕದಂಬೋತ್ಸವ ಆಚರಿಸಲು ನಿರ್ಧರಿಸಲಾಗಿದೆ.

    ತಾಲೂಕಾಡಳಿತ ಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಶಾಸಕರ ಸಮ್ಮುಖದಲ್ಲಿ ಮಂಗಳವಾರ ಆಯೋಜಿಸಿದ್ದ ಕದಂಬೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ನಿರ್ಧರಿಸಲಾಯಿತು.

    ದಿನಾಂಕ ಘೊಷಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಬನವಾಸಿ ನಮ್ಮ ನಾಡಿನ ಹೆಮ್ಮೆ. ಯಾವುದೇ ಗೊಂದಲಗಳಿಲ್ಲದೆ ಪಕ್ಷಾತೀತವಾಗಿ ಕದಂಬೋತ್ಸವ ಆಚರಿಸಲಾಗುವುದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಸರ್ಕಾರದ ಹಲವು ಸಚಿವರು, ಶಾಸಕರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಆದಷ್ಟು ಒಳ್ಳೆಯ ರೀತಿಯಲ್ಲಿ ಎಲ್ಲರಿಗೂ ಗೌರವ ಕೊಡುವುದರ ಜತೆಗೆ ಸಂಪ್ರದಾಯಗಳಿಗೆ ಕಿಂಚಿತ್ತೂ ಅಗೌರವ ಆಗದ ರೀತಿಯಲ್ಲಿ ಈ ಬಾರಿ ಕದಂಬೋತ್ಸವ ಆಚರಿಸೋಣ ಎಂದರು.

    ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಕದಂಬೋತ್ಸವ ವೇದಿಕೆಯಲ್ಲೇ ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ನಡೆಯುತ್ತದೆ. ಪಂಪ ಪ್ರಶಸ್ತಿ ವಿಜೇತರ ಆಯ್ಕೆಗಾಗಿ ಶ್ರೇಷ್ಠ ಸಾಹಿತಿಗಳ ಕಮಿಟಿ ಇದೆ. ಅವರು ಪಂಪ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಈ ಆಯ್ಕೆ ಪ್ರಕ್ರಿಯೆ ಕೆಲಸ ಆದಷ್ಟು ಬೇಗ ಆಗಬೇಕು. ಕದಂಬೋತ್ಸವು ಸಂಪೂರ್ಣ ಸರ್ಕಾರದ ಉತ್ಸವವಾಗಿರುತ್ತದೆ. ಬನವಾಸಿ ಸಮೀಪದ ಗುಡ್ನಾಪುರದಲ್ಲಿರುವ ರಾಣಿ ಅರಮನೆಯಿಂದ ಕದಂಬ ಜ್ಯೋತಿ ಹೊರಟು ಶಿವಮೊಗ್ಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಚಾರ ನಡೆಸಿ ಬನವಾಸಿ ಕದಂಬೋತ್ಸವ ವೇದಿಕೆಗೆ ಬರುವ ಪದ್ಧತಿ ಇದೆ. ಸರ್ಕಾರ ಕದಂಬೋತ್ಸವಕ್ಕೆ ಅನುದಾನ ಬಿಡುಗಡೆ ಮಾಡಿ ಅದ್ದೂರಿಯಾಗಿ ಆಚರಿಸಲು ಸಹಕಾರ ನೀಡಬೇಕು ಎಂದರು.

    ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಉಪವಿಭಾಗಾಧಿಕಾರಿ ಅಪರ್ಣ ರಮೇಶ, ತಹಸೀಲ್ದಾರ್ ಶ್ರೀಧರ ಮುಂದಲಿಮನಿ, ಸಾಮಾಜಿಕ ಕಾರ್ಯಕರ್ತ ಶಿವಾಜಿ ಇತರರು ಇದ್ದರು.

    ಶ್ಲಾಘನೆ

    ಕದಂಬೋತ್ಸವ ಆಚರಣೆಯಲ್ಲಿ ಗೊಂದಲಗಳ ಕುರಿತು ವಿಜಯವಾಣಿ ಡಿ. 21ರಂದು ವಿಸõತ ವರದಿ ಮಾಡಿತ್ತು. ಬನವಾಸಿ ಭಾಗದ ಜನರು ವಿಜಯವಾಣಿ ವರದಿಗೆ ಶ್ಲಾಘನೆ ವ್ಯಕ್ತಪಡಿಸಿದ್ದರು ಎಂಬುದು ಉಲ್ಲೇಖನೀಯ.

    ಫೆ. 24, 25ರಂದು ಕದಂಬೋತ್ಸವ

    ಜಾತ್ರೆ ತಯಾರಿ ಅಚ್ಚುಕಟ್ಟಾಗಿರಲಿ

    ಈ ವರ್ಷ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸಂಖ್ಯೆ ಹೆಚ್ಚಾಳವಾಗುವ ಸಾಧ್ಯತೆ ಇದೆ. ಆದ್ದರಿಂದ ಬಂದ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ ಸೇರಿ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಿರಸಿ ನಗರಸಭೆಯವರು ಜಾತ್ರೆ ಸಮಯದಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನಹರಿಸಬೇಕು ಎಂದರು.

    ಫೆ. 24, 25ರಂದು ಕದಂಬೋತ್ಸವ

    ಜಾತ್ರೆ ಗೆ ಬರಲು ಭಕ್ತಾದಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಬಸ್ ವ್ಯವಸ್ಥೆ ಮಾಡುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣ ಗೊಂಡ ಮಾರಿಕಾಂಬಾ ದೇವಸ್ಥಾನದ ವಸತಿಗೃಹದ ಸಮಸ್ಯೆ ಯನ್ನು ಶೀಘ್ರ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts