More

    ಕಡಲ್ಕೊರೆತ ಸ್ಥಳಗಳ ನಿರ್ಲಕ್ಷ್ಯ, ಕೋಟ, ಕೋಡಿ, ಸಾಲಿಗ್ರಾಮದಲ್ಲಿ ವ್ಯಾಪಕ ಹಾನಿ

    ರವೀಂದ್ರ ಕೋಟ

    ಹಲವು ವರ್ಷಗಳಿಂದ ಕೋಡಿ ಗ್ರಾಪಂ ವ್ಯಾಪ್ತಿಯ ಬೇಂಗ್ರೆ, ಹೊಸಬೇಂಗ್ರೆ, ಕೋಡಿ ತಲೆ, ಕನ್ಯಾಣ, ಕೋಟ, ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಪಡುಕರೆ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಾರಂಪಳ್ಳಿ, ಪಡುಕರೆ ಭಾಗಗಳಲ್ಲಿ ಕಡಲ್ಕೊರತ ತೀವ್ರಗೊಂಡಿದೆ. ಪ್ರತಿವರ್ಷ ಮಳೆಗಾಲದಲ್ಲಿ ಇಲ್ಲಿ ಕಡಲ್ಕೊರೆತ ಸಾಮಾನ್ಯ. ಈ ಬಗ್ಗೆ ಸರ್ಕಾರಗಳು ನಿರ್ಲಕ್ಷೃ ವಹಿಸಿವೆ. ಇತ್ತೀಚೆಗೆ ತೌಕ್ತೆ ಚಂಡಮಾರುತದಿಂದ ಈ ಎಲ್ಲ ವ್ಯಾಪ್ತಿಯ ಕಡಲ ಕಿನಾರೆ ಹಾಗೂ ಮನೆಗಳು ಜಲಾವೃತಗೊಂಡು ಸ್ಥಳೀಯಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು.

    ಕೋಟ ಗ್ರಾಪಂ ವ್ಯಾಪ್ತಿಯ ಮಣೂರು ಫಿಶರ್‌ಮೆನ್ ರಸ್ತೆ ಸಂಪರ್ಕಿಸುವ ಕಡಲ ಕಿನಾರೆಯ ರಸ್ತೆಗಳು ವಿನಾಶದ ಅಂಚಿಗೆ ತಲುಪಿವೆ. ತೌಕ್ತೆ ಚಂಡಮಾರುತದಿಂದ ಇಲ್ಲಿನ ಕಡಲ ಸಮೀಪದ ರಸ್ತೆಗಳು ಅಯೋಮಯ ಸ್ಥಿತಿಯಲ್ಲಿದ್ದು ಮನೆಗಳಿಗೆ ಸಂಚಕಾರ ಎಎದುರಾಗಲಿದೆ ಎಂದು ಜನ ಹೇಳಿದ್ದಾರೆ.
    ತಾತ್ಕಾಲಿಕ ಪರಿಹಾರವೂ ಇಲ್ಲ

    ಪ್ರತಿವರ್ಷ ಕಡಲ್ಕೊರೆತ ಸಂದರ್ಭ ಜನಪ್ರತಿನಿಧಿಗಳು ಆಗಮಿಸಿ ಭರವಸೆ ನೀಡಿ ಹಿಂತಿರುಗುತ್ತಾರೆ. ಶಾಶ್ವತ ತಡಗೋಡೆಯ ಮಾತು ಇರಲಿ, ತಾತ್ಕಾಲಿಕ ತಡೆ ಬಗ್ಗೆಯೂ ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಹಿಂದಿನ ಸರ್ಕಾರ ಕಡಲ ಕಿನಾರೆಯಲ್ಲಿ ರಸ್ತೆ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿತ್ತು. ಅನಂತರ ಕಡಲ್ಕೊರೆತದಿಂದ ಹಾನಿಯಾದ ರಸ್ತೆಗಳನ್ನು ಸರಿಪಡಿಸುವುದಿರಲಿ, ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಬಗ್ಗೆಯೂ ಕ್ರಮ ಕೈಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

    ಬಾರದ ಸಚಿವರು, ಶಾಸಕರು
    ತೌಕ್ತೆ ಚಂಡಮಾರುತದ ಪರಿಣಾಮ ಕೋಡಿ, ಕೋಟ, ಕೋಟತಟ್ಟು, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಡಲ್ಕೊರೆತ ಸ್ಥಳಗಳಿಗೆ ಸ್ಥಳೀಯ ಶಾಸಕರಾಗಲಿ, ಸಂಸದರಾಗಲಿ, ಸಚಿವರಾಗಲಿ ಭೇಟಿ ನೀಡದಿರುವ ಬಗ್ಗೆ ಸ್ಥಳೀಯರು, ಸ್ಥಳೀಯಾಡಳಿತ ಜನಪ್ರತಿನಿಧಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಚಂಡಮಾರುತದ ಪರಿಣಾಮ ಕರಾವಳಿಯ ಹೆಚ್ಚಿನ ಭಾಗಗಳಲ್ಲಿ ಕಡಲ್ಕೊರೆತ ಸಂಭವಿಸಿದೆ. ಸಂಬಂಧಿತ ಇಲಾಖೆಗಳ ಇಂಜಿನಿಯರ್‌ಗಳು ಭೇಟಿ ನೀಡಿದ್ದಾರೆ. ಶಾಶ್ವತ ತಡೆಗೋಡೆ ಅಥವಾ ತಾತ್ಕಾಲಿಕ ಪರಿಹಾರದ ಕ್ರಮ ಈಡೇರಿಲ್ಲ. ಜನ ಸ್ಥಳೀಯಾಡಳಿತದ ಜನಪ್ರತಿನಿಧಿಗಳನ್ನೇ ಗುರಿಯಾಗಿಸುತ್ತಾರೆ. ಆದ್ದರಿಂದ ಶಾಸಕರು, ಸಂಸದರು, ಸಚಿವರು ಈ ಬಗ್ಗೆ ಶೀಘ್ರಗತಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಲಿ.
    ಭುಜಂಗ ಗುರಿಕಾರ, ಸದಸ್ಯರು ಕೋಟ ಗ್ರಾಪಂ

    ಕೋಡಿ ಗ್ರಾಪಂ ವ್ಯಾಪ್ತಿಯ ಸಾಕಷ್ಟು ಕಡಲ ಕಿನಾರೆಗಳಲ್ಲಿ ಪ್ರತಿವರ್ಷ ಕಡಲ್ಕೊರೆತ ಸಂಭವಿಸುತ್ತವೆ. ಶಾಸಕರು, ಸಚಿವರು ಈ ಬಗ್ಗೆ ಗಮನ ಹರಿಸಿ ಅಲ್ಲಲ್ಲಿ ತಾತ್ಕಾಲಿಕ ಪರಿಹಾರ ಕೈಗೊಂಡಿದ್ದು ಸಂತೋಷಕರ. ಮುಂದಿನ ದಿನಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಿದರೆ ಒಂದಿಷ್ಟು ಕುಟುಂಬಗಳು ನಿರಾಳವಾಗುತ್ತದೆ.
    ಅಣ್ಣಪ್ಪ ಕುಂದರ್ ಕೋಡಿ, ಪಂಚಾಯಿತಿ ಮಾಜಿ ಪ್ರತಿನಿಧಿ

    ಕಡಲ್ಕೊರೆತ ಸ್ಥಳಗಳ ಬಗ್ಗೆ ಸರ್ಕಾರ ನಿರ್ಲಕ್ಷೃ ತೋರಿಲ್ಲ. ಸಚಿವ ಅಂಗಾರ ಉಳ್ಳಾಲದಿಂದ ಕಾರವಾರದವರೆಗೆ ಕಡಲ್ಕೊರೆತ ಸ್ಥಳಗಳ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಕಲೆ ಹಾಕಿ ತಾತ್ಕಾಲಿಕ ಅಥವಾ ಶಾಶ್ವತ ತಡೆಗೊಡೆ ನಿರ್ಮಿಸಲು ಕ್ರಮ ಕೈಗೊಂಡಿದ್ದಾರೆ. ಹೆಚ್ಚಿನ ಕಡೆ ಕಾಮಗಾರಿ ಪ್ರಾರಂಭವಾಗಿದೆ. ಇನ್ನು ತುರ್ತು ಅವಶ್ಯಕತೆ ಇರುವ ಸ್ಥಳಗಳಿದ್ದರೆ ಶಾಸಕರು ಅಥವಾ ಸಚಿವರ ಗಮನಕ್ಕೆ ತಂದರೆ ಪರಿಹಾರ ಕೈಗೊಳ್ಳಲಾಗುವುದು.
    ಕೋಟ ಶ್ರೀನಿವಾಸ ಪೂಜಾರಿ, ಸಚಿವರು

    ಕೋಟ.ಜು.1 ಕಡಲ್ಕೊರೆತ , 1,2,


     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts