More

    ರಾಷ್ಟ್ರೀಯ ಕಬಡ್ಡಿ ಮಹಿಳಾ ಕ್ರೀಡಾಪಟುಗಳಿಂದ ಮತದಾನ ಜಾಗೃತಿ

    ಗದಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಮಹಿಳಾ ಕಬ್ಬಡಿ ಕ್ರೀಡಾಪಟುಗಳು ಭಾಗವಹಿಸಿ ನರೇಗಾ ಕೂಲಿಕಾರರಿಗೆ ಮತದಾನ ಜಾಗೃತಿ ಮೂಡಿಸಿದರು.

    ಚುನಾವಣೆ ರಾಯಭಾರಿಗಳಂತೆ ಮತದಾನ ಜಾಗೃತಿ ಕಾರ್ಯದಲ್ಲಿ ಕಲಕೇರಿ ಗ್ರಾಮದ ರಾಷ್ಟ್ರಮಟ್ಟದ ಕಬ್ಬಡಿ ಮಹಿಳಾ ಕ್ರೀಡಾಪಟುಗಳಾದ ಕುಮಾರಿ ಪ್ರೇಮಾ ಪಾಟೀಲ್, ನಿರ್ಮಲಾ ಪರಮೇಶ್ವರ್ ಮತ್ತು ಮೇಘಾ ಮಳ್ಳಸಿದ್ಧನವರ ಅವರು ಭಾಗವಹಿಸಿ ಕೂಲಿಕಾರರಿಗೆ ಮತದಾನ ಜಾಗೃತಿ ಬಗ್ಗೆ ತಿಳಿ ಹೇಳಿದರು. ಕಲಕೇರಿ ಗ್ರಾಮದ ಮೂವರು ಕ್ರೀಡಾಪಟುಗಳು ನರೇಗಾ ಕಾಮಗಾರಿ ಸ್ಥಳಕ್ಕೆ ಸ್ವಯಂಪ್ರೇರಿತರಾಗಿ ಬರುವುದರ ಮೂಲಕ ಸ್ಥಳದಲ್ಲಿದ್ದ 500 ಕ್ಕೂ ಅಧಿಕ ಕೂಲಿಕಾರರಿಗೆ ಕಡ್ಡಾಯ ಮತದಾನ ಕುರಿತು ಅರಿವು ಮೂಡಿಸಿದರು.

    ಈ ವೇಳೆ ರಾಷ್ಟ್ರಮಟ್ಟದ ಅಂಡರ್ 20 ಜ್ಯೂನಿಯರ್ ಕಬಡ್ಡಿ ಕ್ರೀಡಾಪಟು ಕುಮಾರಿ ಪ್ರೇಮಾ ಪಾಟೀಲ್ ಮಾತನಾಡಿ, ಮೊದಲ ಬಾರಿಗೆ ನಾನು ಲೋಕಸಭೆ ಚುನಾವಣೆಯಲ್ಲಿ ಈ ಭಾರಿ ಮತದಾನ ಮಾಡುತ್ತಿದ್ದೇನೆ. ಮತದಾನ ಮಾಡುತ್ತಿರುವುದು ಖುಷಿಯ ಸಂಗತಿ ಎನಿಸಿದೆ. ಯಾವುದೇ ಮತದಾರರು ಜಾತಿ, ಆಮಿಷಕ್ಕೆ ಒಳಗಾಗದೇ ಸ್ವಂತ ಬುದ್ದಿಯಿಂದ ಆಲೋಚಿಸಿ ಯೋಗ್ಯ ವ್ಯಕ್ತಿಯನ್ನು ಆ0iÉ್ಕು ಮಾಡಬೇಕು. ಕೂಲಿಕಾರರು ಮೇ-07 ರಂದು ಯಾವುದೇ ಕೆಲಸಕ್ಕೆ ತೆರಳದೇ ಅಂದು ಮತದಾನ ಮಾಡಿ ಸಂತಸಪಡಬೇಕೆಂದು ಹೇಳಿದರು.

    ರಾಷ್ಟ್ರಮಟ್ಟದ ಅಂಡರ್ 19 ಸ್ಕೂಲ್ ಗೇಮ್ ಕಬಡ್ಡಿ ಕ್ರೀಡಾಪಟು ಕುಮಾರಿ ನಿರ್ಮಲಾ ಪರಮೇಶ್ವರ ಮಾತನಾಡಿ, ನಮ್ಮೂರಲ್ಲೇ ಎಲ್ಲ ಕೂಲಿಕಾರರಿಗೆ ಪಂಚಾಯತ ವತಿಯಿಂದ ಕೆಲಸ ನೀಡುತ್ತಿದ್ದಾರೆ. ಬೇಸಿಗೆ ಇದೆ ಹೊಲದಲ್ಲಿ ಕೆಲಸ ಇಲ್ಲ ಎಂಬ ಚಿಂತೆ ದೂರವಾಗಿದೆ. ಹೀಗಾಗಿ ಬೇಸಿಗೆ ಮುಗಿಯುವರೆಗೂ ನರೇಗಾ ಕಾಮಗಾರಿ ಕೆಲಸ ಮಾಡಿ ಮೇ-07 ರಂದು ಕಡ್ಡಾಯವಾಗಿ ಮತದಾನ ಮಾಡೋಣ ಎಂದರು.

    ಕ್ರೀಡಾಪಟು ಮೇಘಾ ಮಳ್ಳಸಿದ್ಧನವರ ಅವರು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲ ಕೂಲಿಕಾರರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
    ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದರ್, ವಿ.ಆರ್.ರಾಯನಗೌಡರ, ಹುಣಶೀಕಟ್ಟಿ ಗ್ರಾಮ ಪಂಚಾಯತ ಅಧಿಕಾರಿಗಳು, ಸುರೇಶ್ ಬಾಳಿಕಾಯಿ ಐಇಸಿ ಸಂಯೋಜಕರು, ಬಸವರಾಜ ಚಿಮ್ಮನಕಟ್ಟಿ ಬಿಎಫ್‍ಟಿ, ನರೇಗಾ ಸಿಬ್ಬಂದಿ ಮತ್ತು ಹುಣಶಿಕಟ್ಟಿ ಸಿಬ್ಬಂದಿ ವರ್ಗ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts