More

    ಕಾಟೇರ ಚಿತ್ರದ ಪಸಂದಾಗವ್ನೆ ಹಾಡು ರಿಲೀಸ್; ಹೇಗಿದೆ ಹಾಡು?

    ಬೆಂಗಳೂರು; ದರ್ಶನ್ ನಟಿಸಿರುವ ತರುಣ್ ಸುಧೀರ್ ಆ್ಯಕ್ಷನ್-ಕಟ್ ಹೇಳಿರುವ ‘ಕಾಟೇರ’ ಚಿತ್ರದ ರಿಲೀಸ್ ದಿನಾಂಕವನ್ನು ಇತ್ತಿಚೆಗಷ್ಟೇ ಚಿತ್ರತಂಡ ೋಷಣೆ ಮಾಡಿದೆ. ಈ ವರ್ಷದ ಕೊನೆಯ ಶುಕ್ರವಾರ ಅಂದರೆ ಡಿ. 29ರಂದು ಸಿನಿಮಾ ರಿಲೀಸ್ ಆಗಲಿದೆ. ಅಂದು ವರ್ಷದಂತ್ಯದ ಜತೆಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮವಿರಲಿದೆ. ಹಾಗೇ ಸೋಮವಾರ ಜ. 1ರಂದು ರಜೆಯಿರುವ ಕಾರಣ, ಸುದೀರ್ಘ ವೀಕೆಂಡ್ ಸಿಗಲಿರುವ ಕಾರಣ ಅಂದು ಸಿನಿಮಾ ತೆರೆಕಾಣಲಿದೆ.

    ಸದ್ಯ ರಿಲೀಸ್‌ಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಜತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲೂ ಚಿತ್ರತಂಡ ಬಿಜಿಯಾಗಿದೆ. ಇದೇ ತಿಂಗಳು ಸಿನಿಮಾ ರಿಲೀಸ್ ಆಗಲಿದ್ದು, ಟ್ರೇಲರ್ ಯಾವಾಗ ರಿಲೀಸ್ ಆಗಬಹುದು ಎನ್ನುವ ಕುತೂಹಲ ಅಭಿಮಾನಿಗಳಿಗೆ ಕಾಡಿದೆ. ಹೀಗಿರುವಾಗ ಚಿತ್ರತಂಡ ಇಂದು ಅಭಿಮಾನಿಗಳಿಗೆ ವಿಶೇಷ ಸರ್‌ಪ್ರೈಸ್ ನೀಡಲು ರೆಡಿಯಾಗಿದೆ. ಚಿತ್ರದ ಟ್ರೇಲರ್‌ಗೂ ಮುನ್ನ ‘ಪಸಂದಾಗವ್ನೆ’ ಎಂಬ ಹಾಡನ್ನು ಮಧ್ಯಾಹ್ನ 12:30ಕ್ಕೆ ರಿಲೀಸ್ ಮಾಡಿದೆ. ‘ಚೌಕ’ ಮತ್ತು ‘ರಾಬರ್ಟ್’ ಚಿತ್ರಗಳ ಬಳಿಕ ದರ್ಶನ್ ಮತ್ತು ತರುಣ್ ಮತ್ತೆ ಒಂದಾಗಿದ್ದು, ನಟಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿರುವುದು ‘ಕಾಟೇರ’ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳನ್ನು ಹೆಚ್ಚಿಸಿದೆ.

    1970ರ ದಶಕದಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದಿರುವ ಚಿತ್ರವಿದು. ದರ್ಶನ್, ಆರಾಧನ ಜತೆಗೆ ಬಿರಾದರ್, ಶೃತಿ, ಜಗಪತಿ ಬಾಬು, ಕುಮಾರ್ ಗೋವಿಂದ್ ಮುಖ್ಯ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಹರಿಕರಷ್ಣ ಸಂಗೀತ, ಸುಧಾಕರ್ ಛಾಯಾಗ್ರಹಣ ಹಾಗೂ ಕೆ.ಎಂ ಪ್ರಕಾಶ್ ಸಂಕಲನವಿರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts