More

    ಪ್ರತ್ಯಕ್ಷವಾಗಿ ತೋರುವ ಭಗವಂತನೇ ಸದ್ಗುರು: ಕಾಶೀ ಜಗದ್ದರು

    ವಿಜಯವಾಣಿ ಸುದ್ದಿಜಾಲ ಗದಗ
    ಪ್ರತ್ಯಕ್ಷವಾಗಿ ತೋರುವ ಭಗವಂತನೇ ಸದ್ಗುರು ಎಂದು ಶ್ರೀ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
    ಗದಗ ನಗರದ ಕೆ. ಎಚ್​ .ಪಾಟೀಲ ಸಭಾಭವನದಲ್ಲಿ ಆಷಾಢ ಮಾಸದ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಡಾ. ವೀರಯ್ಯ ಹಿರೇಮಠ ಅವರನ್ನು ಆಶಿರ್ವದಿಸಿ ಅವರು ಮಾತನಾಡಿದರು.
    ಭಗವಂತನು ಮಾಯಾಶಕ್ತಿ. ವಿಶಿಷ್ಟನಾಗಿರುವುದರಿಂದ ಅವನು ಯಾರಿಗೂ ಪ್ರತ್ಯಕ್ಷನಾಗುವುದಿಲ್ಲ. ಅದೇ ಭಗವಂತನೇ ನನ್ನ ಮಾಯಾಶಕ್ತಿಯನ್ನು ತೊರೆದು ಜ್ಞಾನ ಶಕ್ತಿ ವಿಶಿಷ್ಟನಾಗಿ ಸದ್ಗುರು ರೂಪದಲ್ಲಿ ಭೂಲೋಕದಲ್ಲಿ ಅವತರಿಸಿದಾಗ ಸರ್ವರಿಗೂ ಪ್ರತ್ಯಕ್ಷನಾಗಿ ಸದ್ಗತಿಯ ಮಾರ್ಗವನ್ನು ಉಪಯೋಗಿಸುತ್ತಾನೆ. ನಮ್ಮ ದೇಶದ ಎಲ್ಲ ಗುರುಪರಂಪರೆಗಳಿಗೆ ಶಿವನೇ ಮೂಲನಾಗಿರುವುದರಿಂದ ಶಿವನಿಗೆ ಆದಿ ಗುರು, ಆದಿ ಜಗದ್ಗುರು ಎಂಬುದಾಗಿ ಕರೆಯುತ್ತಾರೆ. ಈ ವಿಚಾರವನ್ನು ಪತಂಜಲಿ ಮಹಷಿರ್ಗಳು ಸಹ ತಮ್ಮ ಯೋಗ ಸೂತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ಭಗವಂತನು ಗುರು ರೂಪದಲ್ಲಿ ಅವತರಿಸಿರುವ ದಿನವೇ ಗುರುರ್ಪೂಣಿಮೆ. ಜಗತ್ತಿಗೆ 18 ಪುರಾಣಗಳನ್ನು, ಬ್ರಹ್ಮಸೂತ್ರ, ಭಗವದ್ಗೀತೆಗಳನ್ನು ಕೊಟ್ಟಿರುವ ವ್ಯಾಸ ಮಹಷಿರ್ಯು ಸಹ ಗುರುರ್ಪೂಣಿಮೆ ದಿನ ಜನ್ಮಿಸಿರುವ ಕಾರಣ ಇದಕ್ಕೆ ವ್ಯಾಸ ರ್ಪೂಣಿಮೆ ಎಂತಲೂ ಕರೆಯುತ್ತಾರೆ ಎಂದು ಜಗದ್ದುರುಗಳು ಹೇಳಿದರು.
    ಗದಗ ಬೆಟಗೇರಿ ಅವಳಿ ನಗರಗಳಲ್ಲಿ ಕಳೆದು 25 ವರ್ಷಗಳಿಂದ ಈ ಗುರುರ್ಪೂಣಿಮಾ ಮಹೋತ್ಸವ ಆಚರಿಸುತ್ತ ಬಂದಿರುವುದು ಈ ನಗರದ ಒಂದು ವಿಶಿಷ್ಟತೆಯಾಗಿದೆ. ಈ ನಿಮಿತ್ಯವಾಗಿ ಸ್ಥಾಪನೆಗೊಂಡಿರುವ ಶ್ರೀ ಕಾಶೀ ಪೀಠದ ವೇದ ಸಂಸತ ಗುರುಕುಲದಿಂದ ಸಾವಿರಾರು ವಿದ್ಯಾಥಿರ್ಗಳು ವೇದಾಧ್ಯಯನವನ್ನು ಮಾಡಿ ಕರ್ನಾಟಕದದಲ್ಲಿ ಧಾಮಿರ್ಕ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದಾರೆ ಎಂದು ಶ್ರಿಗಳು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts