More

    ಜಿಲ್ಲಾ ಕಸಾಪ ರಥಕ್ಕೆ ನಾಗೇಶ್ ಸಾರಥಿ: 2ನೇ ಬಾರಿ ಗದ್ದುಗೆಗೆ ಯೋಗೇಶ್ ಚಕ್ಕೆರೆ

    ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಬಿ.ಟಿ. ನಾಗೇಶ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಜಿದ್ದಾಜಿದ್ದಿನ ಸ್ಫರ್ಧೆಯಲ್ಲಿ ಕಸಾಪ ಮತದಾರರನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
    ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಜಿಲ್ಲಾ ಕಸಾಪ ತೇರನ್ನು ಎಳೆಯಲು ಈ ಬಾರಿ ಸಾಕಷ್ಟು ಪೈಪೋಟಿ ನಡೆದಿತ್ತು. ಕಸಾಪ ವಾಜಿ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ಶಿಕ್ಷಣ ಸಂಯೋಜಕ, ಯುವಸಾಹಿತಿ ಯೋಗೇಶ್‌ಚಕ್ಕೆರೆ, ಯುವ ಸಾಹಿತಿ ಸಂದೇಶ್‌ಕುಂಬಾರ್, ವಾಗಡಿ ಕಸಾಪ ತಾಲೂಕು ಅಧ್ಯಕ್ಷೆ ಕಲ್ಪನಾ ಶಿವಣ್ಣ, ಸಾಹಿತಿ ಪಾರ್ವತೀಶ್ ಬಿಳದಾಳೆ, ರಾಮನಗರ ಮೂಲದ ಡಿ. ಕೃಷ್ಣಮೂರ್ತಿ ಸೇರಿ 6 ಮಂದಿ ಕಣದಲ್ಲಿದ್ದರು. ಅಂತಿಮವಾಗಿ ಬಿ.ಟಿ. ನಾಗೇಶ್ ಗೆಲುವಿನ ದಡ ಸೇರಿದರು.
    ಕೇಂದ್ರ ಬಿಂದು ಬೊಂಬೆನಾಡಿನಲ್ಲಿ ನೀರಸ ಪ್ರತಿಕ್ರಿಯೆ: ಜಿಲ್ಲೆಯಲ್ಲಿ 9680 ಮತದಾರರಿದ್ದು, ಇಡೀ ಜಿಲ್ಲೆಯಲ್ಲಿ 4342 ಮತದಾರರನ್ನು ಹೊಂದಿರುವ ಬೊಂಬೆನಾಡು ಚನ್ನಪಟ್ಟಣ ಚುನಾವಣೆಯ ಕೇಂದ್ರಬಿಂದುವಾಗಿತ್ತು. ಚುನಾವಣೆಗೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂದಿತು. 4342 ಮತದಾರರ ಪೈಕಿ ಕೇವಲ 2715 ಮಂದಿ ಹಕ್ಕು ಚಲಾಯಿಸಿದರು.

    ತಾಲೂಕಿನಲ್ಲಿ ಮತದಾನಕ್ಕಾಗಿ ಮಳೂರು ನಾಡಕಚೇರಿ, ವಿರುಪಾಕ್ಷಿಪುರ ನಾಡಕಚೇರಿ ಹಾಗೂ ನಗರದ ತಾಲೂಕು ಕಚೇರಿಯಲ್ಲಿ ಒಟ್ಟು ನಾಲ್ಕು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ಬೆಳಗ್ಗೆ ನೀರಸ ಪ್ರತಿಕ್ರಿಯೆ ಕಂಡುಬಂದಿತ್ತು. ಭಾನುವಾರ ಮದುವೆ, ಗೃಹಪ್ರವೇಶ ಸೇರಿ ಇನ್ನಿತರ ಸವಾರಂಭಗಳು ಹೆಚ್ಚಾಗಿದ್ದ ಕಾರಣ, ಮಧ್ಯಾಹ್ನದ ನಂತರ ಮತದಾರರು ಮತಗಟ್ಟೆಯತ್ತ ಧಾವಿಸಿದ್ದು ಕಂಡುಬಂದಿತು.

    ಈ ಬಾರಿಯೂ ಚನ್ನಪಟ್ಟಣದವರೇ: ಈ ಬಾರಿಯೂ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನ ಬೊಂಬೆನಾಡಿಗೆ ಒಲಿದಿದೆ. ರಾಮನಗರ ಜಿಲ್ಲಾ ಕಸಾಪ ರಚನೆಯಾದ ದಿನದಿಂದಲೂ ಚನ್ನಪಟ್ಟಣದವರೇ ಜಿಲ್ಲಾ ಕಸಾಪದ ತೇರು ಎಳೆದಿರುವುದು ವಿಶೇಷವಾಗಿದೆ. ಈ ಬಾರಿಯೂ ಸ್ಪರ್ಧೆಯಲ್ಲಿದ್ದ 6 ಮಂದಿ ಪೈಕಿ ಬಿ.ಟಿ.ನಾಗೇಶ್, ಯೋಗೇಶ್ ಚಕ್ಕೆರೆ ಹಾಗೂ ಸಂದೇಶ್ ಕುಂಬಾರ್ ಚನ್ನಪಟ್ಟಣದವರು. ಈ ಚುನಾವಣೆಯಲ್ಲಿ ತಾಲೂಕಿನ ಅಭ್ಯರ್ಥಿಗಳಾದ ಬಿ.ಟಿ.ನಾಗೇಶ್, ಯೋಗೇಶ್ ಚಕ್ಕೆರೆ ನಡುವೆ ಬಿರುಸಿನ ಪೈಪೋಟಿ ಇತ್ತು.

    ಎರಡನೇ ಬಾರಿ ಆಯ್ಕೆ: ತಾಲೂಕಿನ ಬಿ.ವಿ. ಹಳ್ಳಿ ಗ್ರಾಮದ ಬಿ.ಟಿ. ನಾಗೇಶ್ ವೃತ್ತಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಹಿಂದೆ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈಗ ಮತ್ತೊಮ್ಮೆ ಆಯ್ಕೆಯಾಗುವ ಮೂಲಕ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ತಾಲೂಕಿನ ನಾಲ್ಕು ಮತಗಟ್ಟೆಯಲ್ಲೂ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಅವರು ತಾಲೂಕಿನಿಂದ ಅತಿಹೆಚ್ಚು ಮತ ಪಡೆಯುವ ಮೂಲಕ ಜಯಭೇರಿ ಬಾರಿಸಿದರು.’

    ಬೆಂಬಲಿಗರ ಸಂಭ್ರಮ: ಬಿ.ಟಿ. ನಾಗೇಶ್ ಜಯಭೇರಿ ಬಾರಿಸುತ್ತಲೇ ತಾಲೂಕು ಕಚೇರಿ ಮುಂಭಾಗ ಅಭಿವಾನಿಗಳು ಹಾಗೂ ಹಿತೈಷಿಗಳು ಸಂಭ್ರವಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಮತಗಟ್ಟೆಗಳ ಮುಂಭಾಗ ಸಣ್ಣಪುಟ್ಟ ವಾತಿನ ಚಕಮಕಿ ಹೊರತುಪಡಿಸಿ, ಚುನಾವಣೆ ಶಾಂತಿಯುತವಾಗಿ ನಡೆಯಿತು.

    727 ಮತಗಳ ಅಂತರದ ಗೆಲುವು :  ಜಿಲ್ಲೆಯ 10 ಮತಗಟ್ಟೆಗಳ ಪೈಕಿ 9 ಮತಗಟ್ಟೆಗಳಲ್ಲಿ ಬಿ.ಟಿ. ನಾಗೇಶ್ ಮುನ್ನಡೆ ಕಾಯ್ದುಕೊಂಡು ಯೋಗೀಶ್ ಚಕ್ಕೆರೆ ಅವರನ್ನು 727 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಕನಕಪುರದಲ್ಲಿ ಪಾರ್ವತೀಶ್ 322 ಮತ ಪಡೆದು ಮುನ್ನಡೆ ಪಡೆದಿದ್ದಾರೆ.

    ಜಿಲ್ಲೆಯಲ್ಲಿ ಕನ್ನಡದ ತೇರು ಎಳೆಯುವ ಕೆಲಸಕ್ಕೆ ಮತ ನೀಡಿದ ನಾಲ್ಕು ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ.
    ಬಿ.ಟಿ. ನಾಗೇಶ್

     

    ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿದ ಜಿಲ್ಲೆಯ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸೋಲಿನಿಂದ ಧೃತಿಗೆಡದೆ ಜಿಲ್ಲೆಯ ಹಿರಿಯ, ಕಿರಿಯ ಸಾಹಿತಿಗಳ ಸಹಕಾರದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತೇನೆ.
    ಯೋಗೀಶ್ ಚಕ್ಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts