More

    ತುಳಿತಕ್ಕೊಳಗಾದವರ ಪರ ತುಡಿಯುವ ಸಾಹಿತ್ಯ

    ಕೆ.ಆರ್.ನಗರ: ಸಾಹಿತ್ಯವು ತುಳಿತಕ್ಕೊಳಗಾದವರ ಪರವಾಗಿ ಹೆಚ್ಚು ತುಡಿಯುತ್ತದೆ ಎಂದು ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಪ್ರೊ.ಎನ್.ಕೆ.ಲೋಲಾಕ್ಷಿ ಹೇಳಿದರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಕಾಲೇಜಿನ ಜಾಣ-ಜಾಣೆಯರ ಬಳಗದ ವತಿಯಿಂದ ನನ್ನ ಮೆಚ್ಚಿನ ಪುಸ್ತಕ ಸ್ಪರ್ಧೆ ಕಾರ್ಯಕ್ರಮದಡಿ ಗುರುವಾರ ಆಯೋಜಿಸಿದ್ದ ಕುವೆಂಪು ನಾಟಕ ಸಾಹಿತ್ಯವನ್ನು ಆಧರಿಸಿ ವಿದ್ಯಾರ್ಥಿ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

    ಸಮಕಾಲೀನ ಈ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಸಾಹಿತ್ಯವನ್ನು ಕೇವಲ ವಿಷಯಕ್ಕಾಗಿ ಅಧ್ಯಯನ ಮಾಡದೆ ಒಳಗಣ್ಣಿನಿಂದ ಅಧ್ಯಯನ ಮಾಡಬೇಕು. ತಾಯಿ ತನ್ನ ಮಕ್ಕಳಲ್ಲಿ ಅಸಮರ್ಥ ಮಕ್ಕಳ ಮೇಲೆ ಗುಲಗಂಜಿಯಷ್ಟು ಪ್ರೀತಿಯನ್ನು ಹೆಚ್ಚಾಗಿ ತೋರಿಸುವಂತೆ ಸಾಹಿತ್ಯವು ಕೂಡ ಸಮಾಜದ ಕಟ್ಟಕಡೆಯ, ನೊಂದವರ ಪರವಾಗಿ ರಚಿತವಾಗುತ್ತದೆ ಎಂದರು.

    ಬೆರಳ್‌ಗೆ ಕೊರಳ್ ನಾಟಕ ಕುರಿತು ಎಸ್.ಸಂಜೀವ, ಶೂದ್ರ ತಪಸ್ವಿ ನಾಟಕ ಕುರಿತು ತಸ್ಮಿಯಾಬಾನು, ಜಲಗಾರ ನಾಟಕ ಕುರಿತು ಅಂಬಿಕಾ, ಸ್ಮಶಾನ ಕುರುಕ್ಷೇತ್ರ ನಾಟಕ ಕುರಿತು ಜೆ.ಕಾವ್ಯಾ ವಿಷಯ ಮಂಡಿಸಿದರು.

    ವಿಚಾರಗೋಷ್ಠಿಗಳ ಅಧ್ಯಕ್ಷತೆಯನ್ನು ಎಂ.ಕಿರಣ್‌ಕುಮಾರ್, ಕೆ.ಸಚಿನ್ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಾದಯ್ಯ, ಪ್ರಾಂಶುಪಾಲ ಪ್ರೊ.ಎಂ.ಪ್ರಸನ್ನಕುಮಾರ್, ಸಂಚಾಲಕ ಪ್ರೊ.ಹರೀಶಗೌಡ, ಡಾ.ಕೆ.ಎಸ್.ಜ್ಯೋತಿ, ಅಧ್ಯಾಪಕರಾದ ಡಾ.ಡಿ.ಸತೀಶ್‌ಚಂದ್ರ, ಕುಮಾರಸ್ವಾಮಿ. ಡಿ.ಎನ್.ಉದಯಕುಮಾರ್, ಸಿ.ಎಸ್.ನಂದಿನಿ. ಜಿಲ್ಲಾ ಜನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts