More

    ಗೋಪಿಚಂದ್‌ಗೆ ಸೆಡ್ಡು, ಸ್ವಂತ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭಿಸಿದ ಜ್ವಾಲಾ ಗುಟ್ಟಾ

    ಹೈದರಾಬಾದ್: ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹಲವು ತಾರಾ ಆಟಗಾರರನ್ನು ರೂಪಿಸಿ ಪ್ರಾಬಲ್ಯ ಮೆರೆದಿರುವ ಪುಲ್ಲೇಲಾ ಗೋಪಿಚಂದ್ ಅವರಿಗೆ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಸೆಡ್ಡು ಹೊಡೆದಿದ್ದಾರೆ. ಹೈದರಾಬಾದ್‌ನಲ್ಲಿ ಈಗ ತಮ್ಮದೇ ಆದ ಸ್ವಂತ ಬ್ಯಾಡ್ಮಿಂಟನ್ ಅಕಾಡೆಮಿಯೊಂದನ್ನು ಆರಂಭಿಸಿರುವ ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಚಾಂಪಿಯನ್‌ಷಿಪ್ ಮತ್ತು ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತೆ ಜ್ವಾಲಾ ಗುಟ್ಟಾ, ತಮ್ಮ ಗುರುವಿನ ವಿರುದ್ಧವೇ ಬಂಡಾಯ ಎದ್ದಿದ್ದಾರೆ.

    ಹೈದರಾಬಾದ್ ಹೊರವಲಯದ ಮೋಯಿನಾಬಾದ್‌ನಲ್ಲಿ ಜ್ವಾಲಾ ಗುಟ್ಟಾ ಸ್ಪೋರ್ಟ್ಸ್ ಅಕಾಡೆಮಿ ಸ್ಥಾಪನೆಯಾಗಿದ್ದು, ಸೋಮವಾರ ಇದರ ಉದ್ಘಾಟನಾ ಸಮಾರಂಭವೂ ನಡೆದಿದೆ. ಬ್ಯಾಡ್ಮಿಂಟನ್ ವೃತ್ತಿಜೀವನದ ವೇಳೆ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪಿ. ಗೋಪಿಚಂದ್ ನೀತಿಯ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರುತ್ತಿದ್ದ ಜ್ವಾಲಾ ಗುಟ್ಟಾ, ಅವರಿಂದಾಗಿ ಕೆಲ ಪ್ರತಿಭಾನ್ವಿತ ಆಟಗಾರರು ನಿರ್ಲಕ್ಷ್ಯಕ್ಕೂ ಒಳಗಾಗುತ್ತಿದ್ದಾರೆ ಎಂದು ದೂರಿದ್ದರು.

    55 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಜ್ವಾಲಾ ಗುಟ್ಟಾ ಅಕಾಡೆಮಿಯಲ್ಲಿ 14 ಕೊರ್ಟ್‌ಗಳು ಮತ್ತು ಒಂದು ಈಜುಕೊಳವಿದೆ. ‘ಈ ಅಕಾಡೆಮಿಯಿಂದ ನನ್ನ ಬಲ ವೃದ್ಧಿಸಲಿದೆ. ನಾನು ಕೂಡ ಇನ್ನು ಆಯ್ಕೆ ಸಮಿತಿ ಸಭೆಗೆ ಹಾಜರಾಗಬಹುದಾಗಿದೆ. ಶೇ. 90ರಷ್ಟು ಷಟ್ಲರ್‌ಗಳು ಕೇವಲ ಒಂದೇ ಅಕಾಡೆಮಿಯಿಂದ ಆಯ್ಕೆಯಾಗುವುದನ್ನು ತಪ್ಪಿಸಬಹುದು. ನಾನೀಗ ಉಳಿದ ಶೇ. 10 ಜನರ ಪರ ನಿಲ್ಲಬಹುದಾಗಿದೆ. ದೇಶದ ಪ್ರತಿಭಾನ್ವಿತ ಷಟ್ಲರ್‌ಗಳಿಗೆ ಈಗ ಎರಡನೇ ಆಯ್ಕೆಯೂ ಲಭ್ಯವಿದೆ’ ಎಂದು 37 ವರ್ಷದ ಜ್ವಾಲಾ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts