More

    ಶೋಷಿತ ಸಮಾಜಗಳಿಗೆ ಒದಗಿಸಿದ್ದಾರೆ ನ್ಯಾಯ

    ಮದ್ದೂರು: ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ದಮನಿತರ ಧ್ವನಿಯಾಗುವ ಮೂಲಕ ಶೋಷಿತ ಸಮಾಜಗಳಿಗೆ ನ್ಯಾಯ ಒದಗಿಸಿದ್ದಾರೆ ಎಂದು ನಿವೃತ್ತ ಜಿಲ್ಲಾಧಿಕಾರಿ ಡಿ.ಸಿ.ಕೃಷ್ಣೇಗೌಡ ಹೇಳಿದರು.

    ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕೋರೆಂಗಾವ್ ವಿಜಯೋತ್ಸವ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತ ವರ್ಗಗಳಿಗೆ ಶಾಶ್ವತ ಶಕ್ತಿಯಾಗಿದ್ದಾರೆ. ಸಂವಿಧಾನವೆಂಬ ಮಹಾ ಗ್ರಂಥವನ್ನು ರಚಿಸುವ ಮೂಲಕ ತಲೆತಲಾಂತರಗಳಿಂದ ರೂಢಿಯಲ್ಲಿದ್ದ ಶೋಷಣೆಯನ್ನು ತಪ್ಪಿಸಿ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ತಳ ಸಮುದಾಯಗಳಿಗೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಾವಿರಾರು ಪೇಶ್ವೆಗಳ ವಿರುದ್ಧ ಮಹರ್ ಸೈನಿಕರು ಸಿಡಿದೆದ್ದು ಯುದ್ಧ ಮಾಡಿ ಜಯ ಸಾಧಿಸುವ ಮೂಲಕ ದೀನ-ದಲಿತರಿಗೆ ಮತ್ತು ಹಿಂದುಳಿದವರಿಗೆ ಬಲದೊಂದಿಗೆ ಸ್ವಾಭಿಮಾನ ತಂದುಕೊಟ್ಟರು. ಕೋರೆಂಗಾವ್ ವಿಜಯೋತ್ಸವವನ್ನು ಭವಿಷ್ಯಕ್ಕೂ ಕೊಂಡ್ಯೊಯುವ ಹಾಗೂ ಮಕ್ಕಳಿಗೂ ಕೋರೆಂಗಾವ್ ಯುದ್ಧದ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಅಂಬೇಡ್ಕರ್ ಅವರ ಮಾತನ್ನು ನಾವು ಸತ್ಯ ಮಾಡಬೇಕಾದರೆ ಮೊದಲು ಇತಿಹಾಸವನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಅಭಿನಂದಿಸಲಾಯಿತು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಸಲ್ಲಿಸಲಾಯಿತು.
    ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ತರೀಕೆರೆ ಕಾಲನಿ ರಮಾನಂದ, ಮಂಡ್ಯ ನಗರಸಭಾ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಗ್ರಾಪಂ ಅಧ್ಯಕ್ಷ ಪ್ರೇಮಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೇಶವ, ಕಾರ್ಯದರ್ಶಿ ಚೆಲುವಯ್ಯ, ಖಚಾಂಚಿ ಶಿವಕುಮಾರ್, ಪದಾಧಿಕಾರಿಗಳಾದ ಸುರೇಶ್, ಲೋಕೇಶ್, ಚಂದ್ರು, ಚೆನ್ನಪ್ಪ, ಆನಂದ್, ಪಶುಪಾಲನಾ ಇಲಾಖೆಯ ಪ್ರಕಾಶ್ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts