More

    ಕಳೆದ ವರ್ಷದ ನಿರ್ವಹಣೆ ಮುಂದುವರಿಸಿದರೆ ಪ್ರಶಸ್ತಿ ಉಳಿಸಿಕೊಳ್ಳುವೆವು:ನಾಯಕಿ ಹರ್ಮಾನ್​ಪ್ರೀತ್​ಕೌರ್ ವಿಶ್ವಾಸ

    ಮುಂಬೈ: ಒತ್ತಡ ತೆಗೆದುಕೊಳ್ಳಬೇಡಿ‘, ‘ಎಲ್ಲವನ್ನೂ ಸರಳವಾಗಿಡಿ‘ ಮತ್ತು ನಿಮ್ಮ ಮತ್ತು ಸಹ-ಆಟಗಾರ್ತಿಯರ ಯಶಸ್ಸನ್ನು ಆನಂದಿಸಿ‘, ಇವು ಸಾಮಾನ್ಯವಾಗಿ ಎಲೈಟ್​ ಕ್ರೀಡೆಗಳಲ್ಲಿ ಕೇಳಿಬರುವ ಸರಳ ಮಾತುಗಳು. ಆದರೆ ಇವುಗಳೇ ವುಮೆನ್ಸ್​ ಪ್ರೀಮಿಯರ್ ಲೀಗ್​ನ (ಡಬ್ಲ್ಯುಪಿಎಲ್​) ಉದ್ಘಾಟನಾ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಶಸ್ತಿ ಗೆಲುವಿನ ಅಭಿಯಾನದಲ್ಲಿ ಆಧಾರಸ್ತಂಭ ಆಗಿದ್ದವು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎರಡನೇ ಆವೃತ್ತಿಯ ಮೊದಲ ಪಂದ್ಯ (ಫೆಬ್ರವರಿ 23) ಪ್ರಾರಂಭವಾಗಲು ನಿಖರವಾಗಿ ಒಂದು ವಾರ ಬಾಕಿ ಇರುವಾಗಮುಂಬೈ ಇಂಡಿಯನ್ಸ್ ನಾಯಕಿ ಹರ್ಮಾನ್​ಪ್ರೀತ್ ಕೌರ್ ಮುಂಬೈನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಇದೇ ಮಾತನ್ನು ಪ್ರತಿಧ್ವನಿಸಿದರು.

    ನಾವು ಕಳೆದ ವರ್ಷದ ನಿರ್ವಹಣೆಯನ್ನು ಮುಂದುವರಿಸಲು ಬಯಸುತ್ತೇವೆಎಲ್ಲವನ್ನೂ ಸರಳವಾಗಿ ಇರಿಸಿ ಮತ್ತು ನಮ್ಮ ಕ್ರಿಕೆಟ್ಅನ್ನು ಆನಂದಿಸುತ್ತೇವೆ. ಎಲ್ಲಾ ಆಟಗಾರ್ತಿಯರಿಗೆ ಸ್ಪಷ್ಟ ಪಾತ್ರಗಳನ್ನು ನೀಡಲು ನಾವು ಬಯಸುತ್ತೇವೆ. ಇದರಿಂದ ಅವರು ಮೈದಾನಕ್ಕೆ ಇಳಿದು ತಮ್ಮ ಪ್ರದರ್ಶನವನ್ನು ನೀಡಬಹುದು. ಕಳೆದ ವರ್ಷ ನಾವು ಗೆದ್ದಿದ್ದರಿಂದ ಈ ಬಾರಿ ಬಹಳಷ್ಟು ಕಣ್ಣುಗಳು ನಮ್ಮ ಮೇಲೆ ಇರುತ್ತವೆ ಎಂದು ನನಗೆ ತಿಳಿದಿದೆಆದರೆ ಕಳೆದ ವರ್ಷವೂ ನಾವು ನಮ್ಮ ಮೇಲೆ ಯಾವುದೇ ಒತ್ತಡವನ್ನು ಹಾಕಲಿಲ್ಲ‘ ಎಂದು ಹರ್ಮಾನ್​ಪ್ರೀತ್​ ಕೌರ್​ ಅವರು ಹೇಳಿದರು.

    ನಾವು ಅದೇ ರೀತಿಯ ವಾತಾವರಣವನ್ನು ಈ ಬಾರಿಯೂ ನಿರ್ಮಿಸಲು ಪ್ರಯತ್ನಿಸುತ್ತೇವೆ ಮತ್ತು ಪರಸ್ಪರರ ಯಶಸ್ಸನ್ನು ಆನಂದಿಸುತ್ತೇವೆ ಮತ್ತು ಪರಸ್ಪರರನ್ನು ಬೆಂಬಲಿಸುತ್ತೇವೆ. ಇದು ನಮ್ಮ ತರಬೇತುದಾರರ ಅತ್ಯುತ್ತಮ ವಿಷಯವಾಗಿದೆ. ಅವರ ಬೆಂಬಲವು ದೊಡ್ಡ ಪಾತ್ರವನ್ನು ವಹಿಸುತ್ತದೆ‘ ಎಂದು ಹರ್ಮಾನ್​ಪ್ರೀತ್ ಕೌರ್​ ಹೇಳಿದರು.

    ಎಂಐ ತಂಡದ ಮುಖ್ಯ ಕೋಚ್​ ಆಗಿರುವ ಶಾರ್ಲೆಟ್ ಎಡ್ವರ್ಡ್ಸ್ ಮತ್ತು ಎಂಐ ತಂಡದ ಮೆಂಟರ್​ ಹಾಗೂ ಬೌಲಿಂಗ್​ ಕೋಚ್​ ಆಗಿರುವ ಜೂಲನ್ ಗೋಸ್ವಾಮಿಮಹಿಳಾ ಕ್ರಿಕೆಟ್​ನ ಪ್ರಮಾಣೀಕೃತ ದಂತಕಥೆಗಳಾಗಿದ್ದುಇಬ್ಬರೂ ತಂಡದಲ್ಲಿ ಸಮಾನವಾಗಿ ಅಸಾಧಾರಣ ತರಬೇತಿ ವಾತಾವರಣವನ್ನು ರೂಪಿಸಲು ಕೈಜೋಡಿಸಿದ್ದಾರೆ.

    ನಾವು 12 ತಿಂಗಳ ಹಿಂದೆ ತಂಡವನ್ನು ಆಯ್ಕೆ ಮಾಡಿದ್ದವು ಮತ್ತು ಆಟಗಾರ್ತಿಯರು ಮತ್ತು ಸಹಾಯಕ ಸಿಬ್ಬಂದಿಗೆ ಇದು ಅದ್ಭುತ ಅನುಭವವಾಗಿದೆ. ಆ ರಾತ್ರಿ ಬ್ರಬೋರ್ನ್ ಸ್ಟೇಡಿಯಂನಲ್ಲಿ ಹರ್ಮಾನ್ ಟ್ರೋಫಿಯನ್ನು ಎತ್ತಿ ಹಿಡಿದ ಕ್ಷಣ ನನ್ನ ವೃತ್ತಿಜೀವನದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಹೆಚ್ಚು ಮುಖ್ಯವಾಗಿಎಲ್ಲ ಯುವ ಆಟಗಾರ್ತಿಯರೊಂದಿಗೆ ನಾವು ಮಾಡಿದ ಆ ಸಾಧನೆ ನಿಜಕ್ಕೂ ನಂಬಲಾಗದ ಸಮಯವಾಗಿತ್ತು. ನನ್ನನ್ನು ಅನೇಕ ಬಾರಿ ಔಟ್​ ಮಾಡಿರುವ ಜೂಲನ್​ ಜೊತೆಯಾಗಿ ಕೊನೆಗೂ ಕೆಲಸ ಮಾಡುತ್ತಿರುವುದು ಮತ್ತು ಒಂದೇ ತಂಡದಲ್ಲಿರುವುದು ಅದ್ಭುತ ಅನುಭವವಾಗಿದೆ‘ ಎಂದು ಶಾರ್ಲೆಟ್ ಎಡ್ವರ್ಡ್ಸ್ ಹೇಳಿದರು.

    ಶಾರ್ಲೆಟ್ ಮತ್ತು ನಾನು ಬಹಳಷ್ಟು ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುತ್ತೇವೆ. ನಾವಿಬ್ಬರೂ ಬ್ಯುಜಿಯಾಗಿದ್ದರೂ ಸಹನಾವು ಸಂಪರ್ಕದಲ್ಲಿರಲು ಪ್ರಯತ್ನಿಸುತ್ತೇವೆ. ಅವರು ಸಂಪೂರ್ಣವಾಗಿ ವೃತ್ತಿಪರರುನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ ಮತ್ತು ಅವರೊಂದಿಗೆ ಪ್ರತಿ ಕ್ಷಣವನ್ನು ಆನಂದಿಸುತ್ತೇನೆ. ಪ್ರಾಮಾಣಿಕವಾಗಿ ಹೇಳುವುದಾದರೆಇದು ಬೌಲಿಂಗ್ ಕೋಚ್ ಆಗಿ ನನ್ನ ಮೊದಲ ಜವಾಬ್ದಾರಿಯಾಗಿದೆ ಮತ್ತು ನಾನು ಅವರಿಂದ ಮೈದಾನದೊಳಗೆ ಮತ್ತು ಹೊರಗೆ ಸಾಕಷ್ಟು ಕಲಿತಿದ್ದೇನೆ‘ ಎಂದು ಜೂಲನ್​ ಗೋಸ್ವಾಮಿಎಡ್ವರ್ಡ್ಸ್ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಅನುಭವವನ್ನು ವಿವರಿಸಿದರು.

    ಕಳೆದ ಹಲವಾರು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾಶೋಧನಾ ಪ್ರಕ್ರಿಯೆಯಲ್ಲಿ ಹಲವಾರು ಮಹತ್ವದ ಕ್ರೀಡಾಪ್ರತಿಭೆಗಳು ಹೊರಹೊಮ್ಮಿವೆ. ಇದನ್ನು ಪ್ರತ್ಯಕ್ಷವಾಗಿ ನೋಡಿರುವ ಶಾರ್ಲೆಟ್ಪ್ರಕ್ರಿಯೆ ಮತ್ತು ಕೊಡುಗೆಯ ಬಗ್ಗೆ ತಮ್ಮ ಆಶ್ಚರ್ಯವನ್ನು ತಿಳಿಸಿ ತುಂಬ ಸಂತೋಷಪಟ್ಟಿದ್ದಾರೆ.

    ಮುಂಬೈ ಇಂಡಿಯನ್ಸ್​ನಲ್ಲಿನ ಪ್ರತಿಭಾಶೋಧದ ವ್ಯವಸ್ಥೆಯನ್ನು ನಾನು ಬಹಳ ಮೆಚ್ಚಿದ್ದೇನೆ. ಈ ಪಾತ್ರದ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಎಂಐ ಅದರಲ್ಲಿ ನಿಜವಾಗಿಯೂ ಉತ್ತಮವಾಗಿದೆ ಎಂದು ನನಗೆ ತಿಳಿದಿತ್ತು. ಹರಾಜಿನ ಮುನ್ನವೇ ಪ್ರತಿಭಾಶೋಧ ತಂಡದ ಕಾರ್ಯಪ್ರವೃತ್ತವಾಗಿರುವುದನ್ನು ಮತ್ತು ಅವರ ಕಠಿಣ ಪರಿಶ್ರಮವನ್ನು ನೋಡಿದ್ದೇನೆ. ಅದರಿಂದಾಗಿಯೇ ನಾವು ನಾಲ್ವರು ಹೊಸ ಪ್ರತಿಭಾನ್ವಿತ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಂಡಿದ್ದೇವೆ. ನಾವು ಮುಂದಿನ ಭವಿಷ್ಯದ ತಾರೆಯರನ್ನು ಪತ್ತೆ ಹಚ್ಚಿರುವ ಭರವಸೆ ಇದೆ. ಇದು ಬಹಳ ರೋಮಾಂಚನಕಾರಿಯಾಗಿದೆ‘ ಎಂದು ಶಾರ್ಲೆಟ್ ವಿವರಿಸಿದರು.

    ಅಂತಹ ಇಬ್ಬರು ಯುವ ಆಟಗಾರ್ತಿಯರೆಂದರೆ, 2023ರ ಆವೃತ್ತಿಯ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದ ಯಾಸ್ತಿಕಾ ಭಾಟಿಯಾ ಮತ್ತು ಡಬ್ಲ್ಯುಪಿಎಲ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಆಟಗಾರ್ತಿಯಾಗಿರುವ ಇಸ್ಸಿ ವಾಂಗ್. ಕಳೆದ ವರ್ಷ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಇವರಿಬ್ಬರು ಪ್ರಮುಖ ಪಾತ್ರ ನಿರ್ವಹಿಸಿದ್ದರು.

    ಕಿರಣ್ ಮೋರ್ ತನ್ನ ವೃತ್ತಿಜೀವನದ ಮೇಲೆ ಬೀರಿದ ಪ್ರಭಾವ ಮತ್ತು ಅವರೊಂದಿಗಿನ ತರಬೇತಿಯು ಹೇಗೆ ತಿರುವು ತಂದಿತು ಎಂಬುದರ ಕುರಿತು ಯಾಸ್ತಿಕಾ ಭಾಟಿಯಾ ಭಾವುಕರಾಗಿ ಮಾತನಾಡಿದರು.

    ‘2021ರಲ್ಲಿ ನಾನು ಕಿರಣ್ (ಮೋರೆ) ಸರ್ ಅವರನ್ನು ಭೇಟಿಯಾದಾಗಅದು ನನ್ನ ವೃತ್ತಿಜೀವನದ ಮಹತ್ವದ ತಿರುವು ಆಗಿತ್ತು. ನಾನಾಗ ಕಷ್ಟಪಡುತ್ತಿದ್ದೆ ಮತ್ತು ತಂಡದಿಂದ ಹೊರಗಿದ್ದೆ. ನನಗೆ ಅವಕಾಶ ಸಿಗುವುದು ಹೇಗೆ ಎಂಬ ಅನಿಶ್ಚಿತತೆ ಇತ್ತು. ನಾನು ಅವರನ್ನು ಭೇಟಿಯಾದಾಗ ಮತ್ತು ಅವರು ನನಗೆ 45 ದಿನಗಳವರೆಗೆ ತರಬೇತಿ ನೀಡಿದರು. ಇದು ಕ್ರಿಕೆಟ್ ಮತ್ತು ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಬದಲಾಯಿಸಿತು. ಅವರು ತುಂಬಾ ಧನಾತ್ಮಕ ವ್ಯಕ್ತಿ. ಕಳೆದ ವರ್ಷದ ಡಬ್ಲ್ಯುಪಿಎಲ್ ಟೂರ್ನಿಯನ್ನೂ ನಾನು ಸಂಪೂರ್ಣವಾಗಿ ಆನಂದಿಸಿದೆ ಮತ್ತು ತಂಡದ ಸಹ ಆಟಗಾರ್ತಿಯರು ನನಗೆ ಕುಟುಂಬದವರಂತಿದ್ದರು‘ ಎಂದು ಯಾಸ್ತಿಕಾ ಅವರು ಹೇಳಿದರು.

    ಆಟದಲ್ಲಿ ತುಂಬಾ ಅನುಭವ ಹೊಂದಿರುವ ಆಟಗಾರ್ತಿಯರೊಂದಿಗೆ ಕೆಲಸ ಮಾಡುವ ಅವಕಾಶವನ್ನು ನಾನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ನಿಮಗೆ ಅಂತಹ ಅವಕಾಶಗಳು ಸಿಗುವುದಿಲ್ಲವಿಶೇಷವಾಗಿ ಮಹಿಳಾ ಆಟದಲ್ಲಿ ಸಾಕಷ್ಟು ಅನುಭವ ಹೊಂದಿರುವ ಮಹಿಳಾ ಕೋಚ್‌ಗಳು ಸಿಗುವುದು ಬಲು ಅಪರೂಪ‘ ಎಂದು ಶಾರ್ಲೆಟ್-ಜುಲಾನ್ ಕಾಂಬಿನೇಷನ್​ ಬಗ್ಗೆ ಇಸ್ಸಿ ಹೇಳಿದರು.

    2023ರ ಫೈನಲ್​ನಲ್ಲಿ ಪರಸ್ಪರ ಸೆಣಸಿದ್ದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೆಬ್ರವರಿ 23ರಂದು ಡಬ್ಲ್ಯುಪಿಎಲ್ ಎರಡನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಟೂರ್ನಿಯ ಮೊದಲ ಚರಣದ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದುಎರಡನೇ ಚರಣ ಮತ್ತು ಪ್ಲೇಆಫ್ ಹಂತದ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts