More

    ಶಾಸ್ತ್ರಕ್ಕಷ್ಟೇ ಬಿಡುಗಡೆ!: ಸಬ್ಸಿಡಿ ಇಲ್ಲ, ಒಟಿಟಿಗೂ ದೂರ; ಟಿವಿ ಹಕ್ಕುಗಳೂ ಇಲ್ಲ…

    ಹೊಸಬರ ಚಿತ್ರಗಳನ್ನು ನೋಡುವುದಕ್ಕೆ ಚಿತ್ರಮಂದಿರಗಳಿಗೆ ಜನ ಬರುವುದು ಕಡಿಮೆ. ಟಿವಿ ಚಾನಲ್​ನವರೂ ಮುಂಚಿನಂತೆ ಈಗ ಹಕ್ಕುಗಳನ್ನು ಖರೀದಿಸುವುದನ್ನು ಬಿಟ್ಟಿದ್ದಾರೆ. ಒಟಿಟಿಯಲ್ಲಿ ಕನ್ನಡ ಚಿತ್ರಗಳಿಗೆ ಡಿಮಾಂಡ್ ಇಲ್ಲ, ಸಬ್ಸಿಡಿ ಸಿಗುತ್ತಿಲ್ಲ, ಪ್ರಶಸ್ತಿ ಬಗ್ಗೆ ಯಾರಿಗೂ ಸುಳಿವಿಲ್ಲ … ಹೀಗಿದ್ದರೂ ಯಾವ ಧೈರ್ಯದ ಮೇಲೆ ಹೊಸ ಚಿತ್ರಗಳು ನಿರ್ಮಾಣವಾಗುತ್ತಿವೆ?

    | ಚೇತನ್ ನಾಡಿಗೇರ್ ಬೆಂಗಳೂರು

    ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಸರ್ಕಾರ ಯಾವಾಗ ಅನುಮತಿ ಕೊಡುತ್ತದೆ? ಯಾವ ದೊಡ್ಡ ಸಿನಿಮಾ ಮೊದಲು ಬಿಡುಗಡೆಯಾಗುತ್ತದೆ? ಯಾವ ಸಿನಿಮಾ ಬಿಡುಗಡೆಯಿಂದ ಚಿತ್ರರಂಗ ಚೇತರಿಸಿಕೊಳ್ಳುವ ಸಾಧ್ಯತೆ ಇದೆ? ಕಳೆದ ಕೆಲವು ದಿನಗಳಿಂದ ಈ ಪ್ರಶ್ನೆಗಳು ಬಹಳ ಕೇಳಿಬರುತ್ತಿವೆ. ಆದರೆ, ಸದ್ಯದ ಮಟ್ಟಿಗೆ ಯಾರಲ್ಲೂ ಇದಕ್ಕೆ ಸೂಕ್ತವಾದ ಉತ್ತರಗಳಿಲ್ಲ. ಅದರಲ್ಲೂ ಶೇ. 100ರಷ್ಟು ಹಾಜರಾತಿಗೆ ಸರ್ಕಾರ ಯಾವಾಗ ಅನುಮತಿ ಕೊಡುತ್ತದೆ ಎಂಬ ಸ್ಪಷ್ಟತೆಯೂ ಇಲ್ಲ. ಇನ್ನೊಂದು ತಿಂಗಳಲ್ಲಿ ಎಲ್ಲವೂ ಸರಿ ಹೋಗಬಹುದು ಎಂಬ ಆಶಾಭಾವನೆಯಿಂದ, ಈಗಾಗಲೇ ದೊಡ್ಡ ಚಿತ್ರಗಳ ನಿರ್ವಪಕರು ಟವಲ್ ಹಾಕಿ, ಬಿಡುಗಡೆ ದಿನಾಂಕವನ್ನು ಬ್ಲಾಕ್ ಮಾಡುತ್ತಿದ್ದಾರೆ. ಒಂದು ಪಕ್ಷ ಕರೊನಾ ಮೂರನೇ ಅಲೆ ಅಥವಾ ಇನ್ಯಾವುದೋ ಕಾರಣದಿಂದ ಶೇ. 100ರಷ್ಟು ಹಾಜರಾತಿ ವಿಳಂಬವಾದರೆ, ಆಗ ಸಹಜವಾಗಿಯೇ ದೊಡ್ಡ ಚಿತ್ರಗಳೆಲ್ಲ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

    ದೊಡ್ಡ ಚಿತ್ರಗಳ ಬಿಡುಗಡೆ ತಡವಾಗುವುದರಿಂದ ಯಾರಿಗೆ ಅನುಕೂಲವೋ, ಅನನುಕೂಲವೋ ಗೊತ್ತಿಲ್ಲ. ಆದರೆ, ಸಣ್ಣ ಮತ್ತು ಮಧ್ಯಮ ಬಜೆಟ್ ಚಿತ್ರಗಳಿಗಂತೂ ಬಹಳ ಒಳ್ಳೆಯ ಸಮಯ ಇದು. ಯಾವುದೇ ಒತ್ತಡ ಅಥವಾ ಭಯವಿಲ್ಲದೆ ಚಿತ್ರಗಳನ್ನು ಬಿಡುಗಡೆ ಮಾಡಬಹುದು. ಆದರೆ, ಇದರಿಂದ ಚಿತ್ರರಂಗಕ್ಕೆ, ಅದರಲ್ಲೂ ಚಿತ್ರಮಂದಿರಗಳಿಗೆ ಏನಾದರೂ ಉಪಯೋಗವಾ? ಎಂದರೆ ಯಾವ ಉಪಯೋಗವೂ ಕಾಣುವುದಿಲ್ಲ. ಏಕೆಂದರೆ, ಈ ಚಿತ್ರಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಬಹಳ ಕಡಿಮೆ. ಬಿಡುಗಡೆ ಆಗಿದೆ ಎಂಬ ಶಾಸ್ತ್ರಕ್ಕೆ ಚಿತ್ರ ಬಿಡುಗಡೆಯಾಗಿರುತ್ತದೇ ಹೊರತು, ಅದರಿಂದ ಚಿತ್ರತಂಡಕ್ಕೂ ಸೇರಿ ಯಾರಿಗೂ ಏನೂ ಪ್ರಯೋಜನವಾಗುವುದಿಲ್ಲ. ಮೂಲಗಳ ಪ್ರಕಾರ, ಈ ವರ್ಷ ಇಲ್ಲಿಯವರೆಗೂ ಒಟ್ಟು 120 ಚಿತ್ರಗಳು ಸೆನ್ಸಾರ್ ಆಗಿವೆಯಂತೆ. ಈ ಪೈಕಿ 80ಕ್ಕೂ ಹೆಚ್ಚು ಚಿತ್ರಗಳು ಹೊಸಬರದ್ದು. ಇದಲ್ಲದೆ, ಇನ್ನೂ 30ಕ್ಕೂ ಹೆಚ್ಚು ಹೊಸಬರ ಚಿತ್ರಗಳು ಸೆನ್ಸಾರ್ ಅಂಗಳದಲ್ಲಿದ್ದು, ಸೆನ್ಸಾರ್​ಗಾಗಿ ಕಾಯುತ್ತಿವೆಯಂತೆ. ಹಳೆಯದು ಬಿಡಿ, ಕಳೆದೊಂದು ತಿಂಗಳಲ್ಲಿ ಸೆನ್ಸಾರ್ ಆಗಿರುವ 30 ಚಿತ್ರಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾದರೆ, ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರಬಹುದಾ? ಚಿತ್ರರಂಗದ ಪರಿಸ್ಥಿತಿ ಸುಧಾರಿಸಬಹುದಾ? ಎಂಬ ಪ್ರಶ್ನೆ ಬರಬಹುದು. ಆದರೆ, ಅದರಿಂದ ಹೆಚ್ಚು ಪ್ರಯೋಜನವಿಲ್ಲ ಎಂದು ಅಂಕಿ-ಅಂಶಗಳು ಹೇಳುತ್ತವೆ.

    ಇದೇ ವರ್ಷದ ಉದಾಹರಣೆ ನೋಡುವುದಾದರೆ, ಈ ವರ್ಷ ಏಪ್ರಿಲ್ ಎರಡನೇ ವಾರದವರೆಗೂ 40 ಪ್ಲಸ್ ಸಿನಿಮಾಗಳು ಬಿಡುಗಡೆಯಾಗಿವೆ. ಪುನೀತ್, ದರ್ಶನ್, ಧ್ರುವ ಸೇರಿ ಕೆಲವು ಸ್ಟಾರ್​ನಟರ ಸಿನಿಮಾಗಳನ್ನು ಹೊರತುಪಡಿಸಿದರೆ ಮಿಕ್ಕಂತೆ ಬಿಡುಗಡೆ ಆಗಿದ್ದೆಲ್ಲ ಹೊಸಬರ ಚಿತ್ರಗಳೇ. ‘ಮಹಿಷಾಸುರ’, ‘ಲಡ್ಡು’, ‘ನಾನು ಮತ್ತು ಜಾನು’, ‘ಮಾಂಜ್ರ’, ‘ಕಲಾವಿದ’, ‘ಅಂಬಾನಿ ಪುತ್ರ’, ‘ಸಾಲ್ಟ್’, ‘ರಕ್ತ ಗುಲಾಬಿ’… ಹೀಗೆ ಪಟ್ಟಿ ಬೆಳೆಯುತ್ತದೆ. ಹೊಸಬರು ಎಂದರೆ ಬರೀ ನಾಯಕ-ನಾಯಕಿಯಷ್ಟೇ ಅಲ್ಲ, ಪೋಷಕ ಕಲಾವಿದರನ್ನು ಹೊರತುಪಡಿಸಿದರೆ, ಮಿಕ್ಕಂತೆ ನಿರ್ದೇಶಕರು, ನಿರ್ವಪಕರು, ತಂತ್ರಜ್ಞರು ಎಲ್ಲರೂ ಹೊಸಬರೇ. ಆ ಚಿತ್ರಗಳೇನೋ ಬಿಡುಗಡೆಯಾದವು. ಆದರೆ, ಅದರಿಂದ ಯಾರಿಗೆ ಉಪಯೋಗವಾಯಿತು. ಹಾಕಿದ ಹಣ ವಾಪಸ್ಸು ಬಂತಾ? ಚಿತ್ರದಲ್ಲಿ ದುಡಿದವರಿಗೆ ಹೊಸ ಅವಕಾಶಗಳೇನಾದರೂ ಸಿಕ್ಕಿದವಾ? ಹಾಗಿದ್ದರೂ ಯಾಕೆ ಸಿನಿಮಾ ಮಾಡಲಾಗುತ್ತಿದೆ? ಮಾಡಿದರೆ ಯಾರು ನೋಡುತ್ತಾರೆ? ಒಂದೊಂದು ಚಿತ್ರದಿಂದ ಎಷ್ಟು ನಷ್ಟವಾಗುತ್ತಿದೆ? ಹೀಗೆ ಪ್ರಶ್ನೆಗಳು ಬೆಳೆಯುತ್ತಲೇ ಹೋಗುತ್ತದೆ. ವರ್ಷದಿಂದ ವರ್ಷಕ್ಕೆ ಚಿತ್ರಗಳ ಸಂಖ್ಯೆಯೇನೋ ಹೆಚ್ಚಾಗುತ್ತಲೇ ಇದೆ. ಆದರೆ, ಆ ಪೈಕಿ ಶೇ. 60ಕ್ಕೂ ಹೆಚ್ಚು ಚಿತ್ರಗಳಿಗೆ ಯಾವುದೇ ಮೂಲದಿಂದಲೂ ದುಡ್ಡು ಬರುತ್ತಿಲ್ಲ. ದುಡ್ಡು ಬರುತ್ತಿಲ್ಲ ಎನ್ನುವುದು ಒಂದೆಡೆಯಾದರೆ, ಎಷ್ಟೋ ಚಿತ್ರಗಳು ಬಿಡುಗಡೆಯೂ ಆಗಿಲ್ಲ. ಆ ಚಿತ್ರಗಳು ಯಾವಾಗ ಬಿಡುಗಡೆಯಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ, ಚಿತ್ರ ನಿರ್ಮಾಣ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಜನ ಯಾಕೆ ಸಿನಿಮಾ ಮಾಡುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ.

    ಬರೀ ಇನ್​ಕಮಿಂಗ್ ಮಾತ್ರ…

    ಮೂಲಗಳ ಪ್ರಕಾರ, 2019ರಲ್ಲಿ ಒಟ್ಟಾರೆ 492 ಚಿತ್ರಗಳು ಸೆನ್ಸಾರ್ ಆಗಿವೆ. ಆ ಪೈಕಿ, ಮರುವರ್ಷ (2020) 100 ಚಿತ್ರಗಳು ಬಿಡುಗಡೆಯಾಗಿರಬಹುದು ಅಷ್ಟೇ. ಕಾರಣ ಲಾಕ್​ಡೌನ್. 2020ರಲ್ಲಿ 287 ಚಿತ್ರಗಳು ಸೆನ್ಸಾರ್ ಆಗಿವೆ. ಅದರಲ್ಲಿ, ಈ ವರ್ಷ ಲಾಕ್​ಡೌನ್ ಎಲ್ಲ ಮುಗಿದು 100 ಚಿತ್ರಗಳು ಬಿಡುಗಡೆಯಾಗಬಹುದು. ಈ ವರ್ಷ ಈಗಾಗಲೇ 150 ಸಿನಿಮಾಗಳು ಸೆನ್ಸಾರ್ ಆಗಿದ್ದು, ಮುಂದಿನ ಐದು ತಿಂಗಳುಗಳಲ್ಲಿ ಇನ್ನೂ 150 ಸಿನಿಮಾಗಳು ಆಗುವ ಸಾಧ್ಯತೆ ಇದೆ. ಅಲ್ಲಿಗೆ ಬಿಡುಗಡೆಗೆ ಸಿದ್ಧವಿರುವ ಚಿತ್ರಗಳ ಸಂಖ್ಯೆ ಎಷ್ಟು? ಇಷ್ಟೊಂದು ಚಿತ್ರಗಳು ತಯಾರಾಗಿ ಎಲ್ಲಿ ಹೋಗುತ್ತಿವೆ? ಎಷ್ಟು ಜನರನ್ನು ತಲುಪುತ್ತಿವೆ?

    ‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

    ಮಾಮೂಲಿ ಕೊಡದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದ ಲೇಡಿ ಇನ್​ಸ್ಪೆಕ್ಟರ್, ಸಬ್​ ಇನ್​ಸ್ಪೆಕ್ಟರ್ ಸೇರಿ ಮೂವರ ಸಸ್ಪೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts