More

    ನಿರ್ಲಕ್ಷ್ಯವೇ ಕರೊನಾ ಹರಡುವಿಕೆಗೆ ಕಾರಣ

    ವಿಜಯಪುರ: ವಿಶ್ವದಾದ್ಯಂತ ಕರೊನಾ ಮಾರಿಯಿಂದ ಸಾವಿರಾರು ಜನ ಸಾಯುತ್ತಿದ್ದು, ಲಕ್ಷಾಂತರ ಜನರಿಗೆ ಸೋಂಕು ತಗುಲಿದೆ. ನಮ್ಮ ದೇಶದಲ್ಲಿ ಕೂಡ ಈ ರೋಗ ಹೆಚ್ಚಾಗುತ್ತಿದೆ. ಅದಕ್ಕೆ ಜನರ ನಿರ್ಲಕ್ಷೃವೇ ಕಾರಣ ಎಂದುಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ. ಬೆಳ್ಳಿ ಹೇಳಿದರು.
    ತಾಲೂಕಿನ ಜುಮನಾಳ ಹಾಗೂ ಹಿಟ್ನಳ್ಳಿ ಗ್ರಾಮಗಳಲ್ಲಿ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳಿಂದ ಕರೊನಾ ರೋಗದ ಕುರಿತು ಜಾಗೃತಿ ಹಾಗೂ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಬೆಳೆದಿರುವ ಚಿಕ್ಕು ಹಣ್ಣುಗಳನ್ನು ರಿಯಾಯತಿ ದರದಲ್ಲಿ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಇಲ್ಲಿವರೆಗೆ ಈ ರೋಗ ನಗರದ ಜನರಿಗೆ ತಗುಲಿದ್ದು, ಒಂದುವೇಳೆ ಗ್ರಾಮೀಣ ಭಾಗದ ಜನರಿಗೆ ತಗುಲಿದರೆ ನಿಯಂತ್ರಣ ಅಸಾಧ್ಯ. ಇಡೀ ಗ್ರಾಮಕ್ಕೆ ತಗಲುವ ಸಂಭವವಿದೆ. ಕಾರಣ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೃಷಿ ಚಟುವಟಿಕೆಗಳನ್ನು ನಡೆಸಲು ಸರ್ಕಾರದ ಅನುಮತಿ ನೀಡಿದ್ದು, ರೈತರು ಹೊಲಕ್ಕೆ ಹೋಗುವಾಗ ತಮ್ಮ ಮುಖಕ್ಕೆ ಮಾಸ್ಕ್ ಧರಿಸಬೇಕು. ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಗುಂಪು ಗುಂಪಾಗಿ ಎಲ್ಲರೂ ಸೇರಿ ಕೃಷಿ ಚಟುವಟಿಕೆ ಮಾಡದೇ ಅಂತರ ಕಾಯ್ದುಕೊಳ್ಳಬೇಕು. ರೈತರು ಸುರಕ್ಷಿತರಾದರೆ, ದೇಶ ಸುರಕ್ಷಿತವಾದಂತೆ ಎಂದು ಹೇಳಿದರು.
    ಪ್ರಭಾರಿ ಸಹ ಸಂಶೋಧನಾ ನಿರ್ದೇಶಕ ಡಾ.ಎಂ.ಎಸ್. ಶಿರಹಟ್ಟಿ ಮಾತನಾಡಿ, ಜಿಲ್ಲಾಡಳಿತದ ನಿರಂತರ ಬಿಗಿ ಕ್ರಮಗಳಿಂದ ಸದ್ಯಕ್ಕೆ ನಮ್ಮ ಜಿಲ್ಲೆಯಲ್ಲಿ ಈ ರೋಗ ಹತೋಟಿಯಲ್ಲಿದೆ. ಆದರೂ ಕೂಡ ಜನ ಜಾಗೃತರಾಗಿ ಸ್ವಯಂ ಪ್ರೇರಣೆಯಿಂದ ದಿಗ್ಬಂಧನ ಹಾಕಿಕೊಂಡು ಮನೆಯಲ್ಲೇ ಸುರಕ್ಷಿತವಾಗಿರಬೇಕು ಎಂದು ಹೇಳಿದರು.
    ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ರಾಜಕುಮಾರ ಜೊಳ್ಳಿ ಮಾತನಾಡಿ, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಬೆಳೆದ ಕಾಲಿಪತ್ತಿ ಮತ್ತು ಕ್ರಿಕೆಟ್ ಬಾಲ್ ತಳಿಗಳ ಚಿಕ್ಕು ತಳಿಗಳ ಸಲು ಬಂದಿದೆ. ಅವುಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಗ್ರಾಮೀಣರ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಕಾರ್ಯಕ್ರಮವನ್ನು ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಿಂದ ಪ್ರಥಮ ಬಾರಿಗೆ ಹಮ್ಮಿಕೊಂಡಿದೆ. ಗುರುವಾರ ಜುಮನಾಳ ಹಾಗೂ ಹಿಟ್ಟಿನಹಳ್ಳಿಯಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಇತರೆ ಹಳ್ಳಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಹಳ್ಳಿಗೆ ವಾಹನ ಬಂದಾಗ ಜನತೆ ಮುಗಿಬೀಳದೇ ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ಹರಡದಂತೆ ಮುಂಜಾಗ್ರತೆ ವಹಿಸಬೇಕೆಂದು ತಿಳಿಸಿದರು.
    ಕೀಟ ವಿಜ್ಞಾನಿ ಡಾ.ಎಸ್.ಎಸ್. ಕರಭಂಟನಾಳ ಮಾತನಾಡಿ, ರೈತರು ತಮಗೆ ಬೇಕಾದ ಎರೆಹುಳು ಗೊಬ್ಬರ, ಜೈವಿಕ ಗೊಬ್ಬರ, ಎರೆಜಲ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಲಭ್ಯವಿದ್ದು, ಬೇಕಾದ ರೈತರು ತಮ್ಮನ್ನು ಸಂಪರ್ಕಿಸಲು ಹೇಳಿದರು.
    ಜಿ.ವಿ. ಹಿರೇಗೌಡರ, ವೈ.ಕೆ. ಬಾವಿಕಟ್ಟಿ, ಮಹಾದೇವ ನುಚ್ಚಿ, ಎಲ್. ಎಸ್. ಚಂದುಗೋಳ, ಮಲ್ಲು ಪಡನಾಡ, ಬಸು ಸುಣ್ಣದಗುಡಿ ಇತರರು ಉಪಸ್ಥಿತರಿದ್ದರು.

    ನಿರ್ಲಕ್ಷ್ಯವೇ ಕರೊನಾ ಹರಡುವಿಕೆಗೆ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts