More

    ಇನ್‌ಸ್ಪೆಕ್ಟರ್ ಟಿಂಗರೀಕರಗೆ ನ್ಯಾಯಾಂಗ ಬಂಧನ

    ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಇನ್‌ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ ಸೋಮವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
    ಯೋಗೀಶಗೌಡ ಹತ್ಯೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಟಿಂಗರೀಕರ ಅವರ ವಿರುದ್ಧ ಜನಪ್ರತಿನಿಽಗಳ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಪ್ರಕರಣದ ತನಿಖೆ ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳ ತಂಡ ಭಾನುವಾರ ನಗರಕ್ಕೆ ಆಗಮಿಸಿತ್ತು. ಇಲ್ಲಿನ ಮಲಪ್ರಭಾನಗರದಲ್ಲಿರುವ ಟಿಂಗರೀಕರ ಮನೆಗೆ ತೆರಳಿದ್ದ ವೇಳೆ ಮನೆಯ ಹಿಂಬಾಗಿಲಿನಿ೦ದ ಪರಾರಿಯಾಗಿದ್ದರು.
    ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸಿಲ್ಲ ಎಂಬ ಕಾರಣದಿಂದ ಟಿಂಗರೀಕರ ವಿರುದ್ಧವೂ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ತಮ್ಮ ವಿರುದ್ಧದ fಐಆರ್‌ಗೆ ತಡೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾಗೊಂಡಿದ್ದರಿ೦ದ ಸಿಬಿಐ ಅಽಕಾರಿಗಳು ಬಂಧನಕ್ಕೆ ಆಗಮಿಸಿದ್ದಾಗ ಪರಾರಿಯಾಗಿದ್ದರು.
    ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾದ ಟಿಂಗರೀಕರ ವಿರುದ್ಧ ನ್ಯಾಯಾಧಿಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಽಕಾರಿಯಾಗಿ ಇಂಥ ವರ್ತನೆ ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ ಎಂದು ತಿಳಿದುಬಂದಿದೆ.
    ಯೋಗೀಶಗೌಡ ಹತ್ಯೆ ಪ್ರಕರಣದ ಆರಂಭಿಕ ತನಿಖೆ ನಡೆಸಿದ್ದ ಪೊಲೀಸರು 6 ಆರೋಪಿಗಳನ್ನು ಬಂಽಸಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಮೊದಲು ಬಂಽಸಲಾಗಿದ್ದ ಆರೋಪಿಗಳು ಕೊಲೆಯಲ್ಲಿ ಪಾಲ್ಗೊಂಡವರಲ್ಲ ಎಂಬುದನ್ನು ಪತ್ತೆ ಹಚ್ಚಿದ್ದ ಸಿಬಿಐ ಅಧಿಕಾರಿಗಳು, ಬೆಂಗಳೂರಿನ 6 ಜನ ಸುಪಾರಿ ಹಂತಕರನ್ನು ಬಂಽಸಿದ್ದರು. ಸಾಕ್ಷ ನಾಶದ ಆರೋಪದಡಿ ಟಿಂಗರೀಕರ ಅವರನ್ನು ಪ್ರಕರಣದ 19ನೇ ಆರೋಪಿಯನ್ನಾಗಿ ಮಾಡಲಾಗಿದೆ.
    ಜನಪ್ರತಿನಿಧಿಗಳ ನ್ಯಾಯಾಲಯವು ಟಿಂಗರೀಕರಗೆ ನ್ಯಾಯಾಂಗ ಬಂಧನ ವಿಽಸಿದ ಬೆನ್ನಲ್ಲೇ ಸಿಬಿಐ ಅಽಕಾರಿಗಳು ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts