More

    ಲಾಕ್​ಡೌನ್​ ನಡುವೆಯೂ ಇಬ್ಬರು ನ್ಯಾಯಮೂರ್ತಿಗಳು 2,000 ಕಿ.ಮೀ. ಗೂ ಹೆಚ್ಚು ಪ್ರಯಾಣಿಸಿದ್ದೇಕೆ?

    ನವದೆಹಲಿ: ದೇಶಾದ್ಯಂತ್​ ಲಾಕ್​ಡೌನ್​ ಜಾರಿಯಲ್ಲಿದೆ. ಜನರು ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ವಾಹನಗಳು ರಸ್ತೆಗಿಳಿಯುವಂತೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಬ್ಬರು ನ್ಯಾಯಮೂರ್ತಿಗಳು ಅಂದಾಜು 2,000 ಕಿ.ಮೀ.ಗೂ ಹೆಚ್ಚು ದೂರವನ್ನು ಪ್ರಯಾಣಿಸಿದ್ದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

    ನ್ಯಾಯಮೂರ್ತಿ ದೀಪಂಕರ್​ ದತ್ತಾ ಕೋಲ್ಕತ್ತಾದಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದರೆ, ಇನ್ನೋರ್ವ ನ್ಯಾಯಮೂರ್ತಿ ಬಿಸ್ವನಾಥ್​ ಸೋಮದ್ದೇರ್​ ಅಲಹಾಬಾದ್​ನಿಂದ ಶಿಲ್ಲಾಂಗ್​ಗೆ ಕೋಲ್ಕತ್ತ ಮಾರ್ಗವಾಗಿ ತೆರಳುತ್ತಿದ್ದಾರೆ. ಇಷ್ಟೆಲ್ಲ ವಿವರಗಳು ತಿಳಿದಿವೆ ಎಂದ ಮೇಲೆ ಇದೊಂದು ಅಧಿಕೃತ ಪ್ರವಾಸವೇ ಇರಬೇಕು ಎಂದುಕೊಂಡರೆ ನಿಮ್ಮ ಊಹೆ ಸರಿಯಾಗಿದೆ.

    ನ್ಯಾಮೂರ್ತಿ ದೀಪಂಕರ್​ ದತ್ತಾ ಆವರನ್ನು ಮುಂಬೈ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಅಂತೆಯೇ, ನ್ಯಾಯಮೂರ್ತಿ ಬಿಸ್ವನಾಥ್​ ಮೇಘಾಲಯ ಹೈಕೋರ್ಟ್​ನ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಇವರಿಬ್ಬರೂ ಆ ಹೈಕೋರ್ಟ್​ಗಳ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲು ಕಾರಿನಲ್ಲೇ ಪ್ರಯಾಣ ಬೆಳೆಸಿದ್ದಾರೆ. ವಿಮಾನ, ರೈಲು ಹಾಗೂ ವಿಮಾನ ಹಾರಾಟ ಸ್ಥಗಿತಗೊಂಡಿರುವುದರಿಂದ ,ಇದು ಅನಿವಾರ್ಯವೂ ಆಗಿದೆ.

    ದೀಪಂಕರ್​ ಸೋಮವಾರ ಮಧ್ಯಾಹ್ನದ ವೇಳೆಗೆ ಮುಂಬೈ ತಲುಪಲಿದ್ದರೆ, ಭಾನುವಾರ ಮಧ್ಯಾಹ್ನ ವೇಳೆಗೆ ಬಿಸ್ವನಾಥ್​ ಶಿಲ್ಲಾಂಗ್​ ಸೇರಿಕೊಂಡಿದ್ದಾರೆ. ರಸ್ತೆ ಮಾರ್ಗದಲ್ಲಿ ಒಟ್ಟಾರೆ 2,000ಕ್ಕೂ ಅಧಿಕ ಕಿ.ಮೀ. ಪ್ರಯಾಣ ಇವರದ್ದಾಗಿದೆ.
    ದೀಪಂಕರ್​ ದತ್ತಾ ಮಗನೊಂದಿಗೆ ಸರದಿಯಲ್ಲಿ ಕಾರು ಚಲಾಯಿಸುತ್ತ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಏಕೆಂದರೆ, ಕುಟುಂಬವೂ ಮುಂಬೈಗೆ ಸ್ಥಳಾಂತರಗೊಳ್ಳುತ್ತಿದೆ.

    ಇನ್ನು, ಬಿಸ್ವನಾಥ್​ ಅಲಹಾಬಾದ್​ನಿಂದ ಕಚೇರಿಯ ಕಾರಿನಲ್ಲಿಯೇ ಪತ್ನಿ ಜತೆಗೂಡಿ ಪ್ರಯಾಣ ಆರಂಭಿಸಿದ್ದಾರೆ. ಶನಿವಾರ ಸಂಜೆ ಕೋಲ್ಕತ್ತ ತಲುಪಿದ ನ್ಯಾಯಮೂರ್ತಿಗಳು ಇಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದರು. ಭಾನುವಾರ ಮಧ್ಯಾಹ್ನ ಶಿಲ್ಲಾಂಗ್​ ತಲುಪಿದ್ದಾರೆ.

    ಅಂದಿನ​ ಲಾಕ್​ಡೌನ್​ ವೇಳೆ ಸಹೃದಯತೆ ಮೆರೆದಿದ್ದ ಮೈಸೂರು ಅರಸರು, ಮನೆ ಕಟ್ಟಿಕೊಳ್ಳಲು ವರ್ಷದ ವೇತನ ಮುಂಗಡ ಮಂಜೂರು

    Judges travelled over 2000 km by road amid lockdown to assume charge as HC chief justices

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts