More

    ಮಹಿಳೆಯರನ್ನು ನಾವೆಲ್ಲ ಸದಾ ಗೌರವಿಸಬೇಕು: ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ

    ಶಿವಮೊಗ್ಗ: ಸರ್ವ ರೀತಿಯಲ್ಲಿ ಸಮರ್ಥಳಾದ, ಕುಟುಂಬದ ಬೆನ್ನೆಲುಬಾದ ಮಹಿಳೆಯರನ್ನು ನಾವೆಲ್ಲ ಸದಾ ಗೌರವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಹೇಳಿದರು.
    ಆಲ್ಕೊಳದ ಚೈತನ್ಯ ಸಭಾಂಗಣದಲ್ಲಿ ಸೋಮವಾರ ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯ್ ಸರ್ವಿಸ್ ಸೊಸೈಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
    ಮಹಿಳೆ ಪುರುಷರಿಗಿಂತ ಹೆಚ್ಚು ಶಕ್ತಿವಂತಳು. ಇಡೀ ಕುಟುಂಬವನ್ನು ತಿದ್ದಿ ತೀಡಿ ದಾರಿಗೆ ತರುವ ಸಾಮರ್ಥ್ಯ ಮತ್ತು ಹೊಣೆಗಾರಿಕೆ ಉಳ್ಳವಳು. ಇಂತಹ ಮಹಿಳೆಯನ್ನು ನಾವೆಲ್ಲರೂ ಸದಾ ಗೌರವಿಸಬೇಕು. ಹಿಂದೆ ಹೆಣ್ಣು-ಗಂಡು ಎಂಬ ತಾರತಮ್ಯ ಬಹಳ ಇತ್ತು. ದೈಹಿಕವಾಗಿ ಮಹಿಳೆ ದುರ್ಬಲಳು, ಗಂಡಿಗೆ ಸಮಾನವಾಗಿ ದುಡಿಯಲಾರಳು ಹಾಗೂ ಹೆರಿಗೆ, ಇತರೆ ಆರೋಗ್ಯ ಸಮಸ್ಯೆಗಳ ಕಾರಣ ಸಂಬಳ ಮತ್ತು ರಜೆಯಲ್ಲಿ ಸಹ ತಾರತಮ್ಯ ಮಾಡಲಾಗುತ್ತಿತ್ತು. ಸುಮಾರು 1911ರಿಂದ ಈ ಬಗ್ಗೆ ಹೋರಾಟ ನಡೆಸಿದ ಫಲವಾಗಿ 1976ರಲ್ಲಿ ಇದಕ್ಕೆ ಮುಕ್ತಿ ದೊರಕಿ ಸಮಾನ ಸಂಬಳ, ಇತರೆ ಸೌಲಭ್ಯ ದೊರೆತವು ಎಂದರು.
    ಅಧ್ಯಕ್ಷತೆ ವಹಿಸಿದ್ದ ಎಸ್‌ಎಂಎಸ್‌ಎಸ್ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ ಮಾತನಾಡಿದರು.
    ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದ ರಕ್ಷಿತಾ ಹಾಗೂ ಸಿಂಧು ಸೆಬಾಸ್ಟಿನ್, ಸಮಾಜ ಸೇವೆಯಲ್ಲಿ ಅನಿತಾ ಮೇರಿ, ಉದ್ಯಮ ಕ್ಷೇತ್ರದಲ್ಲಿ ಸೌಮ್ಯಾ ಗುರುರಾಜ್ ಮತ್ತು ಅಂಗವಿಕಲ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆ.ವಿ.ಪ್ರೇಮಾ ಇವರನ್ನು ಅಭಿನಂದಿಸಲಾಯಿತು.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಜಿ.ಜಿ.ಸುರೇಶ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಿ.ಎಂ.ರೇಖಾ, ಸಿಡಿಪಿಒಗಳಾದ ಎನ್.ಚಂದ್ರಪ್ಪ, ಶಶಿರೇಖಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts