More

    ಪ್ರಧಾನಿ ಮೋದಿ ಕಾರ್ಯಕ್ರಮ ವರದಿ ಮಾಡಲು ಪತ್ರಕರ್ತರ ಬಳಿ ನಡತೆ ಪ್ರಮಾಣ ಪತ್ರ ಕೇಳಿದ ಜಿಲ್ಲಾಡಳಿತ! ವ್ಯಾಪಕ ಟೀಕೆ

    ಶಿಮ್ಲಾ: ನಾಳೆ ಪ್ರಧಾನಿ ಮೋದಿ ಅವರು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ಕಾರ್ಯಕ್ರಮವನ್ನು ವರದಿ ಮಾಡಲು ಬರುವ ಪತ್ರಕರ್ತರು ಪ್ರವೇಶಾತಿ ಮತ್ತು ಭದ್ರತಾ ಪಾಸ್​ಗಳನ್ನ ಪಡೆಯಲು ನಡತೆ ಪ್ರಮಾಣ ಪತ್ರ ನೀಡುವಂತೆ ಸ್ಥಳೀಯ ಜಿಲ್ಲಾಡಳಿತ ಹೊರಡಿಸಿರುವ ಆದೇಶ ಭಾರಿ ವಿವಾದಕ್ಕೆ ಕಾರಣವಾಗಿದೆ.

    ಎಲ್ಲವು ಅಂದುಕೊಂಡಂತೆ ನಡೆದಿದ್ದರೆ, ಕಳೆದ ಸೆ. 24ರಂದು ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಿಗದಿಯಾಗಿದ್ದ ಕೊನೆಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಬೇಕಿತ್ತು. ಆದರೆ, ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಪ್ರಧಾನಿ ಬರಲು ಸಾಧ್ಯವಾಗಲಿಲ್ಲ. ಇದೀಗ ನಾಳಿನ ಪ್ರಧಾನಿ ಮೋದಿ ಭೇಟಿಯನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.

    ಖಾಸಗಿ ಮಾಲೀಕತ್ವದ ಪ್ರಿಂಟ್​, ಡಿಜಿಟಲ್​ ಮತ್ತು ಟಿವಿ ಮಾಧ್ಯಮ ಪತ್ರಕರ್ತರು ಮಾತ್ರವಲ್ಲದೆ, ಆಲ್​ ಇಂಡಿಯಾ ರೇಡಿಯೋ (ಎಐಆರ್​) ಮತ್ತು ದೂರದರ್ಶನದಂತಹ ರಾಜ್ಯ ಸರ್ಕಾರ ನಡೆಸುವ ಮಾಧ್ಯಮ ಪ್ರತಿನಿಧಿಗಳು ಸಹ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರವೇಶಾತಿ ಮತ್ತು ಭದ್ರತಾ ಪಾಸ್​ಗಳನ್ನು ಪಡೆಯಲು ನಡತೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಕುರಿತು ಪೊಲೀಸರು ಅಧಿಕೃತ ನೋಟಿಫಿಕೇಶನ್​ ಅನ್ನು ಸೆ.29ರಂದು ಹೊರಡಿಸಿದ್ದಾರೆ.

    ಎಲ್ಲಾ ಪತ್ರಿಕಾ ವರದಿಗಾರರು, ಛಾಯಾಗ್ರಾಹಕರು, ವೀಡಿಯೋಗ್ರಾಫರ್‌ಗಳು ಮತ್ತು ದೂರದರ್ಶನ ಮತ್ತು ಆಲ್​ ಇಂಡಿಯಾ ರೇಡಿಯೋ ಪ್ರತಿನಿಧಿಗಳ ಪಟ್ಟಿಯನ್ನು ಅವರ ನಡತೆ ದೃಢೀಕರಣದ ಪ್ರಮಾಣಪತ್ರದೊಂದಿಗೆ ಪೂರೈಸಲು ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ (DPRO) ಅವರನ್ನು ಅಧಿಸೂಚನೆಯಲ್ಲಿ ಕೇಳಿದೆ.

    ನಡತೆ ಪ್ರಮಾಣಪತ್ರವನ್ನು ಅಕ್ಟೋಬರ್ 1ರ ಒಳಗೆ ಬಿಲಾಸ್‌ಪುರದಲ್ಲಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ ಕಚೇರಿಗೆ ಸರಬರಾಜು ಮಾಡಬೇಕು. ಆ ಬಳಿಕ ಸಮಾವೇಶದಲ್ಲಿ ಅಥವಾ ಸಭೆಯೊಳಗೆ ಪತ್ರಕರ್ತರ ಪ್ರವೇಶವನ್ನು ನಿರ್ಧರಿಸಲಾಗುತ್ತದೆ ಎಂದು ನೋಟಿಫಿಕೇಶನ್​ನಲ್ಲಿ ಉಲ್ಲೇಖಿಸಲಾಗಿದೆ.

    ನೋಟಿಫಿಕೇಶನ್​ ಹೊರಡಿಸಿರುವ ಬೆನ್ನಲ್ಲೇ ಹಿಮಾಚಲ ಕಾಂಗ್ರೆಸ್ ಸಮಿತಿಯ ಮುಖ್ಯ ವಕ್ತಾರ ನರೇಶ್ ಚೌಹಾಣ್ ಇದನ್ನು ಖಂಡಿಸಿದ್ದಾರೆ. ಈ ಕ್ರಮವು ಮಾಧ್ಯಮದ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ದೂರಿದ್ದಾರೆ. ಪತ್ರಕರ್ತರಿಗೆ ನಡತೆ ಪ್ರಮಾಣ ಪತ್ರ ನೀಡುವಂತೆ ಕೇಳುವವರು, ಸಮಾವೇಶಕ್ಕೆ ಕರೆತರುವ ಸಾವಿರಾರು ಜನರ ಗುರುತಿನ ಪುರಾವೆ ನೀಡುವ ಅಗತ್ಯವಿಲ್ಲ ಎಂದು ಹೇಳುವುದು ಸರಿಯೇ ಎಂದು ನರೇಶ್​ ಚೌಹಾಣ್​ ವ್ಯಂಗ್ಯವಾಡಿದ್ದಾರೆ.

    ಪ್ರಧಾನಿ ಮೋದಿ ಅವರು ನಾಳೆ ಹಿಮಾಚಲದ ಬಿಲಾಸ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಏಮ್ಸ್ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ. ಬಳಿಕ ಕುಲು ದಸರಾ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. (ಏಜೆನ್ಸೀಸ್​)

    PHOTOS| ಟೂ ಪೀಸ್​ ಧರಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಹಾಟ್​ ಬ್ಯೂಟಿ ಇಲಿಯಾನಾ!

    ಜಮ್ಮು ಕಾಶ್ಮೀರದ ಕಾರಾಗೃಹ ಡಿಜಿಪಿ ಭೀಕರ ಕೊಲೆ: ಹತ್ಯೆಯ ಹೊಣೆ ಹೊತ್ತ PAFF ನಿಂದ ಕೇಂದ್ರ ಸರ್ಕಾರಕ್ಕೆ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts