More

    ಕನ್ನಡಿಗರಿಗೆ ಉದ್ಯೋಗ ಮೀಸಲು

    ಬೆಂಗಳೂರು: ಸರ್ಕಾರದ ಮಟ್ಟದಲ್ಲಿ ಮತ್ತು ಸಮಾಜದಲ್ಲಿ ಕನ್ನಡವನ್ನು ಅಧಿಕೃತ ಭಾಷೆಯಾಗಿ ಎಲ್ಲ ಹಂತಗಳಲ್ಲಿ ಅನುಷ್ಠಾನಗೊಳಿಸುವುದಕ್ಕೆ ಅಗತ್ಯ ಶಾಸನಾತ್ಮಕ ಬಲ ನೀಡಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಸರ್ಕಾರ ಮಂಡಿಸಿದೆ.

    ವಿಧಾನಸಭೆಯಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕ್ರತಿ ಸಚಿವ ಸುನೀಲ್ ಕುಮಾರ್ ವಿಧೇಯಕ ಮಂಡಿಸಿದ್ದು, ಆಡಳಿತದಲ್ಲಿ ಕನ್ನಡ ಜಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದು ಸೇರಿ ಶಿಸ್ತು ಕ್ರಮಗಳ ಅನುಷ್ಠಾನಕ್ಕಾಗಿ ವಿವಿಧ ಹಂತಗಳಲ್ಲಿ ಜಾರಿ ಪ್ರಾಧಿಕಾರ ರಚನೆ ಮಾಡುವುದಕ್ಕೆ ಅವಕಾಶ ನೀಡುವ ಪ್ರಸ್ತಾಪ ವಿಧೇಯಕದಲ್ಲಿದೆ. ನಾಡಿನ ಭೂಮಿ, ತೆರಿಗೆ ರಿಯಾಯಿತಿ, ಅನುದಾನ ಹಾಗೂ ಇತರೆ ಸೌಲಭ್ಯ ಪಡೆಯುತ್ತಿರುವ ಕೈಗಾರಿಕೆಗಳು, ಕಾರ್ಯ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ಕಾಯ್ದೆಯ ಮೇಲ್ವಿಚಾರಣೆಗೂ ಈ ವಿಧೇಯಕ ಅವಕಾಶ ನೀಡಲಿದೆ.

    ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉನ್ನತ, ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣದಲ್ಲಿ ಮೀಸಲು ಸೌಲಭ್ಯ, ಉನ್ನತ, ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಪರಿಚಯಿಸಿ ಕನ್ನಡ ಕಲಿಕೆಗೆ ಪೋ›ತ್ಸಾಹಿಸುವುದು, ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರ, ಶಾಸನಬದ್ಧ ಸಂಸ್ಥೆಗಳು, ಸಹಕಾರ ಸಂಘಗಳ ನೇಮಕ ಪ್ರಕ್ರಿಯೆಯಲ್ಲಿ ಕನ್ನಡ ಭಾಷಾ ಜ್ಞಾನ ಕಡ್ಡಾಯ ಗೊಳಿಸುವ ಪ್ರಸ್ತಾಪ ಮಾಡಲಾಗಿದೆ. ಅಧೀನ ನ್ಯಾಯಾಲಯ ಹಾಗೂ ನ್ಯಾಯ ಮಂಡಳಿಗಳಲ್ಲಿ ಕನ್ನಡ ಭಾಷಾ ಬಳಕೆ, ಕನ್ನಡದ ಬಳಕೆ ಮತ್ತು ಪ್ರಸಾರಕ್ಕೆ ನೀತಿ, ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಾಂಶದಲ್ಲಿ ಕನ್ನಡ ಬಳಕೆಗೆ ಕ್ರಮ, ರಾಜ್ಯ ಸರಕಾರದಿಂದ ತೆರಿಗೆ ರಿಯಾಯಿತಿ ಹಾಗೂ ಇತರ ಸೌಲಭ್ಯ ಪಡೆದ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಮೀಸಲು ನೀಡುವುದು ಇತರ ಪ್ರಮುಖ ಅಂಶಗಳಾಗಿವೆ. ಉದ್ಯೋಗಕ್ಕಾಗಿ ಪೋರ್ಟಲ್ ಸ್ಥಾಪನೆ, ಅನುಷ್ಠಾನಗಳ ಮೇಲ್ವಿಚಾರಣೆಗೆ ಕಾರ್ಯವ್ಯವಸ್ಥೆ ಸ್ಥಾಪನೆ ವಿಧೇಯಕದಲ್ಲಿರುವ ಇತರ ಸಂಗತಿಗಳು.

    ಇನ್ನು ದಂಡ ವ್ಯವಸ್ಥೆ ಬಗ್ಗೆ ಸಹ ಪ್ರಸ್ತಾಪಿಸಲಾಗಿದೆ. ಕನ್ನಡ ಅನುಷ್ಠಾನ ಉಲ್ಲಂಘನೆ ಮಾಡಿದ ವ್ಯಕ್ತಿ, ಸಂಘ- ಸಂಸ್ಥೆಗಳಿಗೆ ಈ ಕಾಯ್ದೆಯ ಮೂಲಕ ದಂಡ ವಿಧಿಸುವ ಅವಕಾಶ ಪರಿಚಯಿಸಲಾಗುತ್ತಿದೆ. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ ಖಾಸಗಿ ವ್ಯಕ್ತಿ, ಕಾರ್ಖಾನೆ, ಸಂಘಟನೆಗಳಿಗೆ 5000 ರೂ., ಎರಡನೇ ಬಾರಿಗೆ 10,000 ರೂ. ಹಾಗೂ ಮೂರನೇ ಬಾರಿಗೆ ತಪ್ಪೆಸಗಿದವರಿಗೆ 20,000 ರೂ.ವರೆಗೆ ದಂಡ ವಿಧಿಸುವ ಅಧಿಕಾರವನ್ನು ವಿವಿಧ ಹಂತದಲ್ಲಿ ಇರುವ ಜಾರಿ ಪ್ರಾಧಿಕಾರಕ್ಕೆ ನೀಡಲಾಗುತ್ತದೆ. ಸರ್ಕಾರಿ ಅಧಿಕಾರಿಗಳು ಕನ್ನಡ ಜಾರಿ ವಿಚಾರದಲ್ಲಿ ಎಸಗುವ ತಪ್ಪನ್ನು ಕರ್ತವ್ಯ ಲೋಪ ಎಂದು ಪರಿಗಣಿಸಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ. ಇ- ಆಡಳಿತ ಇಲಾಖೆಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಪರಿಣಾಮಕಾರಿ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಸೃಜನಾತ್ಮಕ ಸಲಹೆ ನೀಡುವ ವ್ಯಕ್ತಿಗಳಿಗೆ ಪೋ›ತ್ಸಾಹ ನೀಡುವ ಮೂಲಕ ಜನ ಸಾಮಾನ್ಯರನ್ನೂ ಒಳಗೊಳ್ಳಿಸುವ ಪ್ರಯತ್ನ ಮಾಡಲಾಗಿದೆ. ಈ ಅಂಶ ಸಹ ವಿಧೇಯಕದಲ್ಲಿ ಅಡಕವಾಗಿದೆ.

    ತ್ಯವಶ್ಯಕ ಭಾಷೆ: ರಾಜ್ಯದಲ್ಲಿನ ಸ್ಥಳೀಯ ಪ್ರಾಧಿಕಾರಿಗಳು, ಶಾಸನಬದ್ಧ ಮತ್ತು ಶಾಸನೇತರ ನಿಕಾಯಗಳು, ಸಹಕಾರಿ ಸಂಘ ಗಳು, ಇತರ ಸಂಘಗಳಲ್ಲಿ ಉದ್ಯೋಗ ಪಡೆಯಲು ಕನ್ನಡವನ್ನು ಅತ್ಯವಶ್ಯಕ ಭಾಷೆಯಾಗಿ ಪರಿಚಯಿಸಲು ಬಯಸಲಾಗಿದೆ.

    ಜಾಹಿರಾತು ನಿಯಮ: ಈ ವಿಧೇಯಕದ ಮೂಲಕ ಜಾಹೀರಾತು ವರ್ಗೀಕರಣಕ್ಕಾಗಿ ಅಥವಾ ಪ್ರದರ್ಶಿಸಬೇಕಾದ ಜಾಹೀರಾತುಗಳ ಕನ್ನಡ ಭಾಗದ ಶೇಕಡವಾರು ಪ್ರಮಾಣವನ್ನು ನಿಗದಿಪಡಿಸುವುದಕ್ಕಾಗಿ ನಿಯಮ ರಚಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

    ಇದೊಂದು ಸಮಗ್ರ ಕಾನೂನು: ಕರ್ನಾಟಕ ರಾಜಭಾಷಾ ಅಧಿನಿಯಮ, 1963 (1963ರ ಕರ್ನಾಟಕ ಅಧಿನಿಯಮ 26) ಮತ್ತು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳು (ಅಧಿಕೃತ ಭಾಷೆ) ಅಧಿನಿಯಮ, 1981 (1981ರ ಕರ್ನಾಟಕ ಅಧಿನಿಯಮ 30)- ಇವುಗಳನ್ನು ನಿರಸನಗೊಳಿಸುವ ಮೂಲಕ ಒಂದು ನೂತನ ಸಮಗ್ರ ಕಾನೂನನ್ನು ತರುವ ಉದ್ದೇಶದಿಂದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಸಿದ್ಧಪಡಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಾನೂನು ಆಯೋಗವು ಕನ್ನಡ ಸಂಸ್ಕೃತಿ ಇಲಾಖೆಯ ಸಮನ್ವಯದೊಂದಿಗೆ ಇದು ರೂಪ ತಳೆದಿದೆ. 

    ಆತ್ಮಸಾಕ್ಷಿಗೆ ಬಿಡೋಣವೆಂದ ಸರ್ಕಾರ: ‘ಪೇಸಿಎಂ’ ವಿಷಯ ವಿಧಾನಸಭೆಯಲ್ಲಿ ಅನುರಣಿಸಿತು. ಶೂನ್ಯವೇಳೆಯಲ್ಲಿ ಬಿಜೆಪಿಯ ಕುಡುಚಿ ರಾಜೀವ್ ವಿಷಯ ಪ್ರಸ್ತಾಪಿಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಗದ್ದಲದ ವಾತಾವರಣ ಉಂಟಾಯಿತು. ಕೈ ಶಾಸಕರು ಸಮರ್ಥನೆಗೆ ಮುಂದಾದಾಗ, ಆಡಳಿತ ಪಕ್ಷದ ಶಾಸಕರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು. ಪೇಸಿಎಂ ಪೊಸ್ಟರ್​ನಲ್ಲಿ ಸಿಎಂ ಫೋಟೋ ಬಳಸಿದ್ದಾರೆ. ಏನಾದರೂ ಸಾಕ್ಷಿ ಇದ್ದರೆ ದೂರು ಕೊಡಬಹುದು, ಯಾವ ಆಧಾರದ ಮೇಲೆ ಫೋಟೋ ಬಳಸಿದರು ಎಂದು ರಾಜೀವ್ ಪ್ರಶ್ನಿಸಿದರು.

    ಅಂತಿಮವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಇಂದು ಒಬ್ಬರಿಗೆ, ನಾಳೆ ಇನ್ನೊಬ್ಬರಿಗೆ ಇದೇ ರೀತಿ ಆಗುತ್ತದೆ. ಯಾವುದಾದರೂ ಟೀಕೆ, ಮಾಧ್ಯಮ, ಸಿನಿಮಾದಲ್ಲಿ ರಾಜಕೀಯದವರ ಬಗ್ಗೆ ಚಿತ್ರಿಸುವುದನ್ನು ನೋಡಿದರೆ ನೋವಿನ ಸಂಗತಿ ಎಂದು ಹೇಳಿದರು.

    ಒಬ್ಬ ಮುಖ್ಯಮಂತ್ರಿಯನ್ನು ಈ ಸ್ಥಿತಿಯಲ್ಲಿ ನಿಲ್ಲಿಸುವುದು ದುರ್ದೈವದ ಸಂಗತಿ. 8 ಜನರ ವಿರುದ್ಧ ಪ್ರಕರಣ ದಾಖಲಿಸ ಲಾಗಿದೆ. ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದರು. ಬಹಳ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದೇವೆ. ನಾವೀಗ ತನಿಖೆ ಮಾಡಿಸುತ್ತಿದ್ದೇವೆ. ಇದರ ಹಿಂದೆ ಕಾಂಗ್ರೆಸ್​ನವರಿದ್ದಾರೆ, ಇನ್ನೊಬ್ಬರಿದ್ದಾರೆ ಎಂದು ಹೇಳಲ್ಲ. ಅವರವರ ಆತ್ಮಸಾಕ್ಷಿಗೆ ಬಿಡುತ್ತೇನೆ. ಕೆಸರೆರಚಾಟದಲ್ಲಿ ಅರ್ಥವಿಲ್ಲ, ಇದನ್ನು ಇಲ್ಲಿಗೆ ಮುಗಿಸಬೇಕು. ಹೀಗಾಗಿ ನಮ್ಮ ಶಾಸಕರಲ್ಲಿ ಕೇಳಿಕೊಳ್ಳುತ್ತೇನೆ, ಇದನ್ನು ಆತ್ಮಸಾಕ್ಷಿಗೆ ಬಿಡೋಣ. ಈ ಪಾಪ ಅವರು ಮಾಡಿದ್ದರೆ ಅವರು ಅನುಭವಿಸಲಿ, ನಾವು ಮಾಡಿದ್ದರೆ ನಾವು ಅನುಭವಿಸೋಣ ಎಂದು ತೆರೆ ಎಳೆದರು.

    ಇಂಡಿಯಾ ಟಾಪ್‌ 10 ಹೀರೋಗಳ ಪಟ್ಟಿ ಬಿಡುಗಡೆ: ದಳಪತಿಗೆ ಅಗ್ರಸ್ಥಾನ, ರಾಕಿ ಭಾಯ್‌ಗೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts