More

    ಬೃಹತ್ ಉದ್ಯೋಗ ಮೇಳ 28ರಂದು

    ಹುಬ್ಬಳ್ಳಿ: ನ್ಯಾಕ್​ನಿಂದ ಮಾನ್ಯತೆ ಪಡೆದ ನಗರದ ಅಕ್ಷಯ ಕಾಲನಿಯ ಐಬಿಎಂಆರ್ ಕಾಲೇಜ್​ನಲ್ಲಿ ಜು. 28ರಂದು ಬೆಳಗ್ಗೆ 9.30ರಿಂದ ಸಂಜೆ 5 ಗಂಟೆವರೆಗೆ ಪ್ರಗತಿ-2023 ಬೃಹತ್ ಉದ್ಯೋಗ ಮೇಳ ಏರ್ಪಡಿಸಲಾಗಿದೆ ಎಂದು ಕಾಲೇಜ್​ನ ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಬಸರಿ ಹೇಳಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 11 ವರ್ಷಗಳಿಂದ ಉ.ಕ. ಭಾಗದ ವಿದ್ಯಾರ್ಥಿಗಳಿಗಾಗಿ ಪ್ರಗತಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ಏಸ್ಮೆ ಇಂಟಿರಿಯರ್ಸ್ ಪ್ರೈ. ಲಿಮಿಟೆಡ್, ಕ್ವೆಸ್, ಇಎಸ್​ಎಸ್​ವಿಇಇ ರೆಕ್ಯೂ ಟೆಕ್, ಎಚ್​ಸಿಎಲ್ ಟೆಕ್​ಬಿ, ಬಜಾಜ್ ಫೈನಾನ್ಸ್, ಬಾಷ್ ಸಾಫ್ಟ್​ವೇರ್ ಲ್ಯಾಬ್ಸ್, ರಿಲಾಯನ್ಸ್ ಜಿಯೋ ಇನ್ಪೋಕಾಂ, ವಿ5 ಗ್ಲೋಬಲ್ ಸರ್ವಿಸ್ ಸೇರಿ 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ ಎಂದು ತಿಳಿಸಿದರು. ಎಂಬಿಎ, ಎಂ.ಕಾಂ, ಬಿಇ, ಬಿಬಿಎ, ಬಿಸಿಎ, ಬಿ.ಕಾಂ, ಬಿ.ಎಸ್​ಸಿ, ಬಿ.ಎ., ಡಿಪ್ಲೊಮಾ, ಐಟಿಐ, ಪಿಯುಸಿ, ಎಸ್ಸೆಸ್ಸೆಲ್ಸಿ ಆದವರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದರು. ಡಾ. ಸದಾನಂದ ಹಾವಣಗಿ, ಮುರಳೀಧರ ಕುಲಕರ್ಣಿ, ಪ್ರಾಂಶುಪಾಲ ಡಾ. ವಿಕ್ರಮ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts