More

    ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ

    ಜಯಪುರ: ತಾಲೂಕು ಕಚೇರಿಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಕೂಡಲೇ ಪಹಣಿ ನೀಡಲು ಕಂದಾಯ ಸಚಿವರ ಸಮ್ಮುಖದಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಹೇಳಿದರು.

    ಸೀಗೋಡಲ್ಲಿ ಸೀಗೋಡು – ದೇವಗೋಡು- ಬರಗಲ್ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಲೆನಾಡಿನ ರೈತರಿಗೆ ಮರಣ ಶಾಸನವಾಗಿರುವ 192ಎ ಲ್ಯಾಂಡ್ ಗ್ರಾಬಿಂಗ್​ಆಕ್ಟ್ ನಿಂದ ಕೃಷಿ ಒತ್ತುವರಿ ಮಾಡಿದ ರೈತರನ್ನು ಹೊರಗಿಡುವುದು. ಫಾರ್ಮ ನಂ. 50, 53, 57 ನಲ್ಲಿ ಅರ್ಜಿ ಸಲ್ಲಿಸಿದ ರೈತರನ್ನು ಹೊರತುಪಡಿಸಿ ಉಳಿದ ರೈತರ ಒತ್ತುವರಿ ಭೂಮಿಯನ್ನು ಲೀಸ್​ಗೆ ನೀಡಬೇಕು. ಕಾಫಿ ಬೆಳೆಗಾರರ 10 ಎಚ್​ಪಿ ವರೆಗಿನ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ನೀಡುವಂತೆ ಕಂದಾಯ ಸಚಿವ ಹಾಗೂ ಮುಖ್ಯಮಂತ್ರಿಗೆ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

    ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ, ಈ ಹಿಂದೆ ಘೊಷಣೆಯಾಗಿರುವ ಹುಲಿಯೋಜನೆಯ ಬಫರ್​ರೆೋನ್, ಗೋಮಾಳವನ್ನು ಡೀಮ್ಡ್​ಫಾರೆಸ್ಟ್ ಆಗಿ ಪರಿವರ್ತಿಸಿರುವುದು ಹಾಗೂ ಕಂದಾಯ ಭೂಮಿಯನ್ನು ಸೆಕ್ಷನ್ 4 ಆಗಿ ಮಾಡಿರುವುದು ಮಲೆನಾಡಿನ ಅಂತ್ಯಕ್ಕೆ ಕಾರಣವಾಗಿದೆ. ಇದನ್ನು ಎಲ್ಲರ ಸಹಕಾರ ಪಡೆದು ಹಂತಹಂತವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.

    ಗೌರಿಗದ್ದೆಯ ಅವಧೂತ ವಿನಯ ಗುರೂಜಿ ಮಾತನಾಡಿ, ಸತ್ಯ, ಪ್ರೀತಿ ಎಲ್ಲಾ ಧರ್ಮಗಳ ಮೂಲವಾಗಿದ್ದು, ಅದರಂತೆ ನಾವು ಬದುಕಬೇಕು. ಅವಧೂತನಾಗಿರುವ ನನಗೆ ಮಾನ-ಅವಮಾನ, ಸ್ಮಶಾನ- ದೇವಸ್ಥಾನ ಎಲ್ಲವೂ ಒಂದೇ, ರಾಜ್ಯದ ಎಲ್ಲಾ ಗ್ರಾಮಗಳ ಅಭಿವೃದ್ಧಿಗಾಗಿ ಡಿಸಿಎಂ ಗೋವಿಂದ ಕಾರಜೋಳರಲ್ಲಿ ಮಾಡಿದ ಮನವಿ ಸ್ಪಂದಿಸಿ ಇಲ್ಲಿನ ರಸ್ತೆ ಅಭಿವೃದ್ಧಿಗೆ 1.5 ಕೋಟಿ ರೂ.ಅನುದಾನ ನೀಡಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts