More

    10 ರೂಪಾಯಿ ಕೊಟ್ರೆ ಸಾಕು, ಲುಂಗಿ, ಧೋತಿ, ಸೀರೆ ಕೊಡುತ್ತೆ ಜಾರ್ಖಂಡ್ ಸರ್ಕಾರ!

    ರಾಂಚಿ: ಬಡವರು ಕೇವಲ ಹತ್ತೇ ಹತ್ತು ರೂಪಾಯಿ ಕೊಟ್ರೆ ಸಾಕು. ಲುಂಗಿ, ಧೋತಿ ಮತ್ತು ಸೀರೆ ಕೊಡೋದಕ್ಕೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ರಾಜ್ಯದಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರಿಗಾಗಿ ಈ ಯೋಜನೆಯನ್ನು ಅಂಗೀಕರಿಸಿರುವ ಸರ್ಕಾರ, ವರ್ಷಕ್ಕೆ ಎರಡು ಬಾರಿ ಈ ಕೊಡುಗೆ ನೀಡಲಿದೆ.

    ಮುಖ್ಯಮಂತ್ರಿ ಹೇಮಂತ ಸೊರೇನ್​ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆ ಈ ತೀರ್ಮಾನ ತೆಗೆದುಕೊಂಡಿದೆ. ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ ಮತ್ತು ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳು ಇದಕ್ಕೂ ಫಲಾನುಭವಿಗಳಾಗಿರುತ್ತಾರೆ.

    ಇದನ್ನೂ ಓದಿ: ವೈದ್ಯರು ಮನೆಯಲ್ಲಿ ಪೂಜೆ ಮಾಡ್ತಾರೋ ಇಲ್ವೋ ಗೊತ್ತಿಲ್ಲ, ಹರಕೆಯಂತೂ ಕಟ್ಟಿಕೊಳ್ತಾರೆ !

    ಈ ಹಣಕಾಸು ವರ್ಷದಲ್ಲಿ ಒಂದು ಸಲ ಈ ಕೊಡುಗೆ ಕೊಡುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ತನ್ನ ಪ್ರಣಾಳಿಕೆಯಲ್ಲಿ ಈ ಆಶ್ವಾಸನೆಯನ್ನು ಕೊಟ್ಟಿತ್ತು. ಅದು ಈಗ ಜಾರಿಗೊಳ್ಳುತ್ತಿದೆ. (ಏಜೆನ್ಸೀಸ್)

    PHOTOS| ಮೈಸೂರು ದಸರಾ 2020ರ ಉದ್ಘಾಟನಾ ಸಮಾರಂಭದ ಚಿತ್ರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts