More

    ವಿಶ್ವ ದಾಖಲೆಗಳ ಸರದಾರ ಭಾರತದ ಈ ಪ್ಯಾರಾಥ್ಲೀಟ್..!

    ನವದೆಹಲಿ: ಭಾರತದ ಅನುಭವಿ ಪ್ಯಾರಾಥ್ಲೀಟ್ ದೇವೇಂದ್ರ ಜಜಾರಿಯಾ, ಜಾವೆಲಿನ್ ಥ್ರೋ ವಿಭಾಗದಲ್ಲಿ ತಮ್ಮದೇ ವಿಶ್ವ ದಾಖಲೆಯನ್ನು ಉತ್ತಮ ಪಡಿಸಿಕೊಳ್ಳುವ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ಬುಧವಾರ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ 40 ವರ್ಷದ ದೇವೇಂದ್ರ ಜಜಾರಿಯಾ 65.71 ಮೀಟರ್ ಎಸೆಯುವ ಮೂಲಕ ಈ ಸಾಧನೆ ಮಾಡಿದರು. ಈ ದೂರ ಎಸೆಯುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಲ್ಲದೆ, ವಿಶ್ವ ದಾಖಲೆಯನ್ನು ಉತ್ತಮಪಡಿಸಿಕೊಂಡರು.

    ಇದನ್ನೂ ಓದಿ: 2ನೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಬದಲಾಗಲಿದೆ ಅಂಕಗಳ ಸ್ವರೂಪ,

    2016ರ ರಿಯೋ ಒಲಿಂಪಿಕ್ಸ್‌ನಲ್ಲಿ 63.97 ಮೀಟರ್ ಎಸೆದು ವಿಶ್ವ ದಾಖಲೆಯೊಂದಿಗೆ ಸ್ವರ್ಣ ಜಯಿಸಿದ್ದರು. ಪುರುಷರ ಎಫ್-46 ವಿಭಾಗದಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಈಗಾಗಲೇ 2 ಸ್ವರ್ಣ ಜಯಿಸಿದ್ದಾರೆ. ‘ದೆಹಲಿಯ ಜವಾಹರ್‌ಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ 65.71 ಮೀಟರ್ ಎಸೆಯುವ ಮೂಲಕ ನೂತನ ವಿಶ್ವದಾಖಲೆ ನಿರ್ಮಿಸಿರುವೆ, 63.97 ಮೀಟರ್ ಎಸೆದಿದ್ದು ನನ್ನ ಹಿಂದಿನ ದಾಖಲೆಯಾಗಿತ್ತು’ ಎಂದು ದೇವೇಂದ್ರ ಜಜಾರಿಯಾ ತಿಳಿಸಿದ್ದಾರೆ.

    ಇದನ್ನೂ ಓದಿ: ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರ ಕುರಿತು ಬಿಸಿಸಿಐ ಮುಖ್ಯಸ್ಥ ಗಂಗೂಲಿ ಹೇಳಿದ್ದೇನು?

    ಆಗಸ್ಟ್ 24 ರಿಂದ ಟೋಕಿಯೊ ಪ್ಯಾರಾಲಿಂಪಿಕ್ ಆರಂಭಗೊಳ್ಳಲಿದೆ. ಇದುವರೆಗೂ ಭಾರತದಿಂದ ಮೂರು ಮಂದಿ ಪ್ಯಾರಾಥ್ಲೀಟ್‌ಗಳು ಆಯ್ಕೆಯಾಗಿದ್ದಾರೆ. 2012ರ ಅಥೆನ್ಸ್ ಪ್ಯಾರಾಲಿಂಪಿಕ್ಸ್‌ನಲ್ಲೂ 62.15 ಮೀಟರ್ ಎಸೆದು ವಿಶ್ವ ದಾಖಲೆಯೊಂದಿಗೆ ಸ್ವರ್ಣ ಗೆದ್ದಿದ್ದರು.

    ಗಂಡನೇ ನನಗೆ ಸ್ಫೂರ್ತಿ … ಡಾಕ್ಟರ್ಸ್ ಡೇಗೆ ಪತಿಯ ಜೊತೆಗಿನ ಫೋಟೋ ಶೇರ್ ಮಾಡಿದ ಸಂಜನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts