More

    ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಶ್ರಮಿಸೋಣ

    ಜೇವರ್ಗಿ: ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವದ ನಿಮಿತ್ತ ನಾಡಿನಾದ್ಯಂತ ಸಂಚರಿಸುತ್ತಿರುವ ಕರ್ನಾಟಕ ಸಂಭ್ರಮ-೫೦ರ ಜ್ಯೋತಿ ರಥಯಾತ್ರೆಗೆ ಪಟ್ಟಣದಲ್ಲಿ ಶುಕ್ರವಾರ ಅದ್ದೂರಿ ಸ್ವಾಗತ ನೀಡಲಾಯಿತು.

    ರಿಲಾಯನ್ಸ್ ಪೆಟ್ರೋಲ್ ಬಂಕ್‌ನಿಂದ ಮಿನಿ ವಿಧಾನಸೌಧವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ವಿವಿಧ ವಾದ್ಯ ಮೇಳಗಳು ಗಮನಸೆಳೆದವು. ಆಶಾ ಕಾರ್ಯಕರ್ತೆಯರು, ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

    ತಹಸೀಲ್ದಾರ್ ಮಲ್ಲಣ್ಣ ಯಲಗೋಡ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಇಂದಿನ ಯುವಜನತೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸಿ- ಬೆಳೆಸುವ ಕಾರ್ಯ ಮಾಡಬೇಕಿದೆ. ಕನ್ನಡ ನಾಡು- ನುಡಿ ರಕ್ಷಣೆಗೆ ಪ್ರತಿ ಕನ್ನಡಿಗರು ಮುಂದಾಗಬೇಕು. ಆ ನಿಟ್ಟಿನಲ್ಲಿ ಯುವಕರು ಸಂಘಟಿತ ಹೋರಾಟ ನಡೆಸಬೇಕು ಎಂದು ಹೇಳಿದರು.

    ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ತಾಪಂ ಇಒ ಅಬ್ದುಲ್ ನಬೀ, ಟಿಎಚ್‌ಒ ಡಾ.ಸಿದ್ದು ಪಾಟೀಲ್, ಸಿಪಿಐ ರಾಜೇಸಾಹೇಬ್ ನದಾಫ್, ಪಿಎಸ್‌ಐ ಸುರೇಶಕುಮಾರ ಚವ್ಹಾಣ್, ಅಧಿಕಾರಿಗಳಾದ ಅಬ್ದುಲ್ ಮಾಜೀದ್, ಶರಣಗೌಡ ಪಾಟೀಲ್, ಸುಮಂಗಲಾ ದೇವಿ, ಮಹಾದೇವಿ, ಡಾ.ಶೋಭಾ ಸಜ್ಜನ, ಕಸಾಪ ತಾಲೂಕು ಅಧ್ಯಕ್ಷ ಎಸ್.ಕೆ.ಬಿರಾದಾರ, ಪ್ರಮುಖರಾದ ರಮೇಶಬಾಬು ವಕೀಲ, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕಮಾರ ಸಂಗಾವಿ, ಚಂದ್ರಶೇಖರ ಹರನಾಳ, ಭೀಮರಾಯ ನಗನೂರ, ಡಾ.ಅಮರೇಶ ಕೋಳಕೂರ, ಶಾಂತಲಿಂಗ ಪಾಟೀಲ್ ಕೋಳಕೂರ, ಶ್ರೀಹರಿ ಕರಕಿಹಳ್ಳಿ, ಡಾ.ಧರ್ಮಣ್ಣ ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts