More

    ಜೆಇಇ, ನಿಟ್ ಪರೀಕ್ಷೆ ಮುಂದೂಡಿಕೆ, ಹೊಸ ದಿನಾಂಕ ನಿರ್ಧಾರ ಪ್ರಕಟಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

    ನವದೆಹಲಿ: ಜೆಇಇ ಮತ್ತು ನೀಟ್ 2020ರ ಪರೀಕ್ಷೆಗಳನ್ನು ಮುಂದೂಡುವ ನಿರ್ಧಾರವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಶುಕ್ರವಾರ ಪ್ರಕಟಿಸಿದ್ದಾರೆ. ಅವರು ರಚಿಸಿದ ತಜ್ಞರ ಸಮಿತಿ ಗುರುವಾರ ನೀಡಿದ ಶಿಫಾರಸಿನ ಆಧಾರದ ಮೇಲೆ ಈ ಘೋಷಣೆ ಮಾಡಲಾಗಿದೆ.
    ಜೆಇಇ ಮುಖ್ಯ ಪರೀಕ್ಷೆ ಸೆಪ್ಟೆಂಬರ್ 1 ರಿಂದ 6 ರವರೆಗೆ, ಜೆಇಇ ಅಡ್ವಾನ್ಸಡ್ ಪರೀಕ್ಷೆ ಸೆಪ್ಟೆಂಬರ್ 27 ರಂದು ಮತ್ತು ನೀಟ್ ಪರೀಕ್ಷೆ ಸೆಪ್ಟೆಂಬರ್ 13 ರಂದು ನಡೆಯಲಿದೆ.
    ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಹಾನಿರ್ದೇಶಕ ವಿನೀತ್ ಜೋಶಿ ನೇತೃತ್ವದ ತಜ್ಞರ ಸಮಿತಿಯಿಂದ ಎಚ್‌ಆರ್‌ಡಿ ಸಚಿವರು ಶುಕ್ರವಾರದೊಳಗೆ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆ ಕುರಿತು ವರದಿ ಕೋರಿದ್ದರು.

    ಇದನ್ನೂ ಓದಿ: ನಟ ಧ್ರುವ ಸರ್ಜಾ ಆರೋಗ್ಯದಲ್ಲಿ ಏರುಪೇರು: ಅಣ್ಣನ ಕೊರಗಲ್ಲೇ ಆಸ್ಪತ್ರೆ ಸೇರಿದ್ರಾ ಧ್ರುವ?

    ಈ ಹಿಂದೆ ಜೆಇಇ ಮುಖ್ಯ ಪರೀಕ್ಷೆಯನ್ನು ಜುಲೈ 18 ರಿಂದ 23 ರವರೆಗೆ ನಡೆಸಲು ನಿರ್ಧರಿಸಲಾಗಿದ್ದರೆ, ನೀಟ್ 2020 ಜುಲೈ 26 ಕ್ಕೆ ನಿಗದಿಯಾಗಿತ್ತು.
    ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಜೆಇಇ ಮುಖ್ಯ ಮತ್ತು ನೀಟ್ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇದನ್ನು ಮುಂದೂಡಬೇಕೆಂದು ಒತ್ತಾಯಿಸುತ್ತಿದ್ದರು.
    ಪರೀಕ್ಷೆಗಳನ್ನು ನಡೆಸುವಲ್ಲಿ “ಕೋವಿಡ್ -19 ಒಂದು ಸವಾಲನ್ನು ಸೃಷ್ಟಿಸಿದೆ ಮತ್ತು ಭಾರತದಲ್ಲಿ, ಇದರ ಪ್ರಮಾಣವು ಹೆಚ್ಚಾಗಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳು ತಮ್ಮ ಮನೆಯಿಂದಲೇ ಪರೀಕ್ಷೆ ಬರೆಯಲು ಸಾಧ್ಯವಾಗಬಹುದಾದ ಆನ್‌ಲೈನ್ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆಗಳನ್ನು ಎನ್‌ಟಿಎ ನೋಡುತ್ತಿದೆ ಎಂದು ಅಧಿಕಾರಿಯೊಬ್ಬರು ಈ ಹಿಂದೆ ಹೇಳಿದ್ದರು. ಆದರೆ ಎನ್‌ಟಿಎ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸುವ ಸಾಮರ್ಥ್ಯವನ್ನು ಹೊಂದಲು ಸಾಕಷ್ಟು ಸಮಯ ಬೇಕಿದೆ ಎಂದೂ ಅಧಿಕಾರಿ ಹೇಳಿದ್ದಾರೆ.

    ದೇವರ ದರ್ಶನ ಮುಗಿಸಿ ಮರಳುತ್ತಿದ್ದ 19 ಸಿಖ್ ಯಾತ್ರಾರ್ಥಿಗಳು ಅಪಘಾತದಲ್ಲಿ ದಾರುಣ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts