More

    ಒಗ್ಗಟ್ಟಾಗಿ ಕರೊನಾ ಓಡಿಸೋಣ

    ಯಾದಗಿರಿ: ಆರೋಗ್ಯವಂತ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು ಎಂದು ಜೆಡಿಎಸ್ ಯುವ ನಾಯಕ ಶರಣಗೌಡ ಕಂದಕೂರ ಸಲಹೆ ನೀಡಿದರು.

    ನಗರದಲ್ಲಿರುವ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಜನಸಂಪರ್ಕ ಕಚೇರಿಯಲ್ಲಿ ಸೋಮವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ 88ನೇ ಜನ್ಮದಿನ ನಿಮಿತ್ತ ಕಂದಕೂರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಅವರು, ಆಧುನಿಕ ಜಗತ್ತಿನಲ್ಲಿ ಮನುಷ್ಯ ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಾಗಿಲ್ಲ ಎಂದರು.

    ಕೋವಿಡ್-19 ವೇಳೆ ದೇಶದಲ್ಲಿ ಸಾಕಷ್ಟು ಜನರಿಗೆ ರಕ್ತದ ಅಗತ್ಯವಿದ್ದು, ಮಣ್ಣಿನ ಮಗ ದೇವೇಗೌಡ ಜನ್ಮದಿನ ನಿಮಿತ್ತ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಶ್ಲಾಘನೀಯ. ಸದ್ಯ ದೇಶ ಸಂಕಷ್ಟದ ಸ್ಥಿತಿಯಲ್ಲಿದ್ದು, ಪ್ರತಿಯೊಬ್ಬರೂ ಪರಸ್ಪರ ಅಂತರ ಕಾಪಾಡಿಕೊಳ್ಳುವ ಮೂಲಕ ಹೆಮ್ಮಾರಿ ಕರೊನಾವನ್ನು ಹೊಡೆದೋಡಿಸಬೇಕಿದೆ. ನಮ್ಮ ಮಾರ್ಗದರ್ಶಕರಾದ ದೇವೇಗೌಡರ ಆಶಯವೂ ಇದೇ ಆಗಿದ್ದು, ಎಲ್ಲರೂ ಒಗ್ಗಟ್ಟಾಗಿ ದೇಶಕ್ಕೆ ಅಂಟಿರುವ ಈ ಪಿಡುಗು ದೂರ ಮಾಡೋಣ ಎಂದು ಕರೆ ನೀಡಿದರು.

    ಪ್ರಮುಖರಾದ ಮಲ್ಲಣ್ಣಗೌಡ ಕೌಳೂರು, ಪಾಪಣ್ಣ ಮನ್ನೆ, ಬಾಲರಾಜ ದಾಸರ್, ಶರಣಪ್ಪ ಲಿಕ್ಕಿ, ನರಸಪ್ಪ ಕವಡೆ ಬದ್ದೇಪಲ್ಲಿ, ಡಿ.ತಾಯಪ್ಪ ಬದ್ದೇಪಲ್ಲಿ, ಮಲ್ಲಿಕಾಜರ್ುನ ಅರುಣಿ, ಶಿವುಗೌಡ ಕೌಳೂರು, ಮಲ್ಲು ಮಾಳಿಕೇರಿ, ಅಯ್ಯಪ್ಪ ಹೆಡಗಿಮದ್ರಿ, ಮಾರ್ಥಂಡ ಮಾನೇಗಾರ, ದೊಡ್ಡಣ್ಣಗೌಡ ಅರಿಕೇರಾ(ಬಿ), ವಿಜಯಕುಮಾರ ಡಿಬ್ಬಾ ಯರಗೋಳ, ಸಿದ್ರಾಮರೆಡ್ಡಿ ವಡ್ನಳ್ಳಿ, ಶಿವುಗೌಡ ಸೈದಾಪುರ, ಎಸ್.ಬಿ.ಟೀಮ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವೈದ್ಯಾಧಿಕಾರಿ ಅನಿತಾ, ಚೇತನಕುಮಾರ, ಶ್ರೀನಿವಾಸ, ಲಕ್ಷ್ಮೀ, ನಿಂಗಮ್ಮ, ಮರೆಪ್ಪ ಇದ್ದರು.

    ಪರಸ್ಪರ ಅಂತರ ಕಾಪಾಡುವ ಮೂಲಕ 88 ಜನರು ರಕ್ತದಾನ ಮಾಡಿದರು. ಶಾಸಕರ ಕಚೇರಿ ಆವರಣ ಪ್ರವೇಶಿಸುವ ಪ್ರತಿಯೊಬ್ಬರಿಗೂ ಮಾಸ್ಕ್, ಹ್ಯಾಂಡ್ ಗ್ಲೌಸ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.

    ಜನರ ಯೋಗಕ್ಷೇಮ ವಿಚಾರಿಸಿದ ಕುಮಾರಣ್ಣ
    ಸೋಮವಾರ ಜಿಲ್ಲೆಯ ಐವರಲ್ಲಿ ಕರೊನಾ ಸೋಂಕು ತಗುಲಿದ್ದು, ಇವರೆಲ್ಲರೂ ಗುರುಮಠಕಲ್ ಕ್ಷೇತ್ರದವರು ಎಂದು ತಿಳಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಶರಣಗೌಡ ಕಂದಕೂರಗೆ ಕರೆ ಮಾಡಿ ಕ್ಷೇತ್ರದ ಜನರ ಆರೋಗ್ಯದ ಬಗ್ಗೆ ವಿಚಾರಿಸಿದರು. ಪಾಸಿಟಿವ್ ಇದ್ದ ಐವರು ಗುರುಮಠಕಲ್ ಕ್ಷೇತ್ರದವರು. ಆದರೆ ಅವರು ಮಹಾರಾಷ್ಟ್ರದಿಂದ ವಲಸೆ ಬಂದಿದ್ದಾರೆ ಎಂದು ಶರಣಗೌಡ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕರೊನಾ ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ಜನತೆ ಮುನ್ನೆಚ್ಚರಿಕೆ ವಹಿಸುವಂತೆ ಕುಮಾರಣ್ಣ ಮೊಬೈಲ್ನಲ್ಲಿ ಮನವಿ ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts