More

    ಕ್ಲೈಮ್ಯಾಕ್ಸ್ ತಲುಪಿದ ಜೆಡಿಎಸ್ ಬಿಕ್ಕಟ್ಟು: ಇಂದು ನಿರ್ಧಾರ ಘೋಷಣೆ ಅನಿವಾರ್ಯ

    ಮಂಡ್ಯ: ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರುಗೆ ಮಂಡ್ಯ ಜೆಡಿಎಸ್‌ನಿಂದ ಸ್ಪರ್ಧಿಸಲು ಅವಕಾಶ ಕೊಟ್ಟಿರುವ ಕಾರಣಕ್ಕೆ ವರಿಷ್ಠರ ವಿರುದ್ಧ ಎದ್ದಿರುವ ಬಂಡಾಯ ಕ್ಲೈಮ್ಯಾಕ್ಸ್ ತಲುಪಿದೆ. ಅಂತೆಯೇ ಅಸಮಾಧಾನಗೊಂಡಿರುವವರ ಮನವೊಲಿಕೆ ಯತ್ನವೂ ನಡೆದಿದ್ದು, ಏ.24ರಂದು ಅವರ ಅಂತಿಮ ನಿರ್ಧಾರ ಹೊರಬೀಳಲಿದೆ.
    ದಳಪತಿಗಳ ನಿರೀಕ್ಷೆಯನ್ನು ಮಿರಿ ಅಸಮಾಧಾನ ಸ್ಪೋಟಗೊಂಡಿದೆ. ಇದು ಜೆಡಿಎಸ್‌ಗೆ ಕಗ್ಗಂಟಾಗಿ ಪರಿಣಮಿಸಿದೆ. ಮಾತ್ರವಲ್ಲದೆ ಟಿಕೆಟ್ ವಿಚಾರದಲ್ಲಿ ನಡೆದಿರುವ ತೀರ್ಮಾನದ ಬಿಸಿ ಬೇರೆ ಕ್ಷೇತ್ರದಲ್ಲಿಯೂ ತಟ್ಟಲಾರಂಭಿಸುವ ಮುನ್ಸೂಚನೆ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಂಡಾಯಗಾರರ ಕಾಲು ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಂತೆ ಜೆಡಿಎಸ್‌ನ ನಾಯಕರು, ಮುಖಂಡರು ಬಂಡಾಯದ ನೇತೃತ್ವ ವಹಿಸಿರುವ ಶಾಸಕ ಎಂ.ಶ್ರೀನಿವಾಸ್, ನಿತ್ಯಸಚಿವ ಕೆ.ವಿ.ಶಂಕರೇಗೌಡ ಅವರ ಮೊಮ್ಮಗ ಕೆ.ಎಸ್.ವಿಜಯಾನಂದ ಅವರ ನಿವಾಸಕ್ಕೆ ಭಾನುವಾರ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜ್ರುಲ್ಲಾ ಖಾನ್, ಎಚ್.ಡಿ.ರಮೇಶ್ ನೇತೃತ್ವದಲ್ಲಿ ತೆರಳಿ ಮನವೊಲಿಕೆ ಮಾಡಿದರಾದರೂ ಲಪ್ರದವಾಗಿಲ್ಲ. ಈ ಬೆಳವಣಿಗೆ ಜೆಡಿಎಸ್ ನಿದ್ರೆಗೆಡಿಸಿರುವುದಂತು ಸುಳ್ಳಲ್ಲ.
    ಯುವರಾಜನ ಎಡವಟ್ಟು, ದಳಪತಿಗಳಿಗೆ ಇಕ್ಕಟ್ಟು: ರಾಮಚಂದ್ರು ಅವರಿಗೆ ಟಿಕೆಟ್ ಸಿಕ್ಕಿರುವ ವಿಚಾರದಲ್ಲಿ ಜೆಡಿಎಸ್ ಯುವರಾಜ ನಿಖಿಲ್‌ಕುಮಾರಸ್ವಾಮಿ ಪಾತ್ರವಿರುವುದು ಹೊಸವಿಷಯವೇನಲ್ಲ. ಆದರೆ ಏಕಾಏಕಿ ತೆಗೆದುಕೊಂಡ ನಿರ್ಧಾರ ದಳಪತಿಗಳಿಗೆ ಇಕ್ಕಟ್ಟನ್ನು ಸೃಷ್ಟಿಸಿದೆ. ಎಂ.ಶ್ರೀನಿವಾಸ್ ಸೇರಿದಂತೆ ಐವರು ಆಕಾಂಕ್ಷಿತರಿದ್ದರೂ, ನಾಮಪತ್ರ ಸಲ್ಲಿಸುವ ದಿನ ಪ್ರಾರಂಭವಾಗುವವರೆಗೂ ಅಭ್ಯರ್ಥಿ ಯಾರೆನ್ನುವುದನ್ನು ೋಷಣೆ ಮಾಡಿರಲಿಲ್ಲ. ಜತೆಗೆ ಐವರನ್ನು ಕರೆಸಿ ಕಾಟಾಚಾರದ ಸಭೆ ಮಾಡಿದರೆ ಹೊರತು ಮುಂದೆ ಎದುರಾಗಬಹುದಾದ ಬಂಡಾಯದ ಬಗ್ಗೆ ಗಮನಹರಿಸಲಿಲ್ಲ.
    ಇನ್ನು ಕ್ಷೇತ್ರದಲ್ಲಿ ತನ್ನದೇ ಆದ ಮತಬ್ಯಾಂಕ್ ಹೊಂದಿರುವ ಎಂ.ಶ್ರೀನಿವಾಸ್ ಕಡೆಗಣಿಸಿದ್ದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾದರೆ, ಅತ್ತ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಮೊಮ್ಮಗ ಕೆ.ಎಸ್.ವಿಜಯಾನಂದ ಅವರಿಗೆ ಟಿಕೆಟ್ ತಪ್ಪುವಂತೆ ಮಾಡಿದ್ದು ಕೆವಿಎಸ್ ಕುಟುಂಬದ ಹಿತೈಷಿಗಳ ಕೆಂಗಣ್ಣಿಗೆ ತುತ್ತಾಗುವಂತೆ ಮಾಡಿದೆ. ಮಾತ್ರವಲ್ಲದೆ ಎಚ್‌ಡಿಡಿ ಕುಟುಂಬದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನದ ಮಾತುಗಳನ್ನಾಡುತ್ತಿದ್ದಾರೆ. ಈ ನಡುವೆ ಬಿ ಾರ್ಮ್ ಗಿಟ್ಟಿಸಿಕೊಂಡಿರುವ ರಾಮಚಂದ್ರು ಬಂಡಾಯಗಾರರ ನಿವಾಸಕ್ಕೆ ತೆರಳಿ ಮನವೊಲಿಕೆ ಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ.
    ಈ ನಡುವೆ ರಾಮಚಂದ್ರು ಬೆನ್ನಿಗೆ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ನಿಂತಿರುವುದು ಹೊರಗೆ ತಿಳಿಯದ ವಿಷಯವೇನಲ್ಲ. ಆದ್ದರಿಂದ ಈಗಾಗಲೇ ಮೇಲುಕೋಟೆ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಎರಡು ದಿನದ ಹಿಂದೆ ವಿಜಯಾನಂದ ಅವರ ನಿವಾಸಕ್ಕೆ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆ ದಳಪತಿಗಳಿಗೆ ಇರಿಸುಮುರಿಸು ತರಿಸುತ್ತಿದೆ. ಇದರಿಂದಾಗಿ ಬಂಡಾಯಗಾರರ ನಿವಾಸಕ್ಕೆ ಒಬ್ಬರ ನಂತರ ಮತ್ತೊಬ್ಬರಂತೆ ಭೇಟಿ ನೀಡುತ್ತಿದ್ದಾರೆ.
    ಹಿತೈಷಿಗಳ ಸಭೆ ಇಂದು: ನಾಮಪತ್ರ ವಾಪಸ್ ಪಡೆಯಲು ಏ.24 ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಬಂಡಾಯಗಾರರು 24ರಂದು ನಗರದ ಕರ್ನಾಟಕ ಸಂಘದಲ್ಲಿ ಬೆಳಗ್ಗೆ 10ಗಂಟೆಗೆ ಹಿತೈಷಿಗಳು, ಬೆಂಬಲಿಗರ ಸಭೆ ಕರೆದಿದ್ದಾರೆ. ಅಲ್ಲಿ ಅಭಿಪ್ರಾಯ ಪಡೆದು ನಿರ್ಧಾರ ೋಷಣೆ ಮಾಡುವುದಾಗಿ ಬಂಡಾಯ ಶಮನಕ್ಕೆ ಬಂದಿದ್ದವರಿಗೆ ಹೇಳಿ ಕಳಿಸಿದ್ದಾರೆ.
    ಆದರೆ ಅತೃಪ್ತಿ ಶಮನಕ್ಕೆ ಬಂದ ವೇಳೆ ನಡೆದ ಬೆಳವಣಿಗೆ ಬಂಡಾಯಗಾರರಿಗೆ ವರಿಷ್ಠರ ಮೇಲಿರುವ ಕೋಪ ಕಡಿಮೆಯಾಗಿಲ್ಲ ಎನ್ನುವುದನ್ನು ತೋರಿಸಿದೆ. ಜತೆಗೆ ಸ್ವಾಭಿಮಾನಿ ಪಡೆ ಹೆಸರಿನಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಮಾತ್ರವಲ್ಲದೆ ಕೆ.ವಿ.ಶಂಕರೇಗೌಡ ಅವರ ಹೆಸರನ್ನು ಮುನ್ನೆಲೆಗೆ ತಂದಿರುವುದರಿಂದ ಬಂಡಾಯಗಾರರು ಹಿಂದೆ ಸರಿಯುವ ನಿರ್ಧಾರಕ್ಕೆ ಬರುವುದಿಲ್ಲ ಎನ್ನುವ ಮಾತು ಆಪ್ತಬಳಗದಿಂದ ಕೇಳಿಬರುತ್ತಿದೆ. ಒಂದು ವೇಳೆ ಸ್ಪರ್ಧೆ ಖಚಿತವಾದರೆ ಮತ್ತೊಂದು ಪ್ರತಿಷ್ಠೆಯ ಚುನಾವಣೆ ನಡೆಯುವುದರಲ್ಲಿ ಅನುಮಾನವಿಲ್ಲ. ಈ ಎಲ್ಲದಕ್ಕೂ ಸೋಮವಾರ ಉತ್ತರ ಸಿಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts