More

    ಶಿಕ್ಷಣ ಕ್ಷೇತ್ರಕ್ಕೆ ಜಯಚಾಮರಾಜ ಒಡೆಯರ್ ಕೊಡುಗೆ ಅಪಾರ

    ಜಯಚಾಮರಾಜ ಒಡೆಯರ್ ಅವರು ಶಿಕ್ಷಣ, ಸಂಗೀತ, ಕಲೆ, ಸಾಹಿತ್ಯ ಸೇರಿದಂತೆ ಇತರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಬಣ್ಣಿಸಿದರು.

    ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ವತಿಯಿಂದ ಶಿವರಾಮಪೇಟೆಯಲ್ಲಿರುವ ಸಂಘದ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಯಚಾಮರಾಜ ಒಡೆಯರ್ ಅವರ 104ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

    ತಮ್ಮ ಆಳ್ವಿಕೆಯಲ್ಲಿ ಮಾದರಿಯಾಗುವಂತೆ ಪಂಚವಾರ್ಷಿಕ ಯೋಜನೆಯನ್ನು ಜಾರಿಗೊಳಿಸಿದ್ದರು. ಅದನ್ನು ಈಗ ಮಾದರಿಯನ್ನಾಗಿ ಮಾಡಿಕೊಳ್ಳಲಾಗಿದೆ. ಜತೆಗೆ ಜನಪರ ಕಾರ್ಯಕ್ರಮಗಳನ್ನು ಒಡೆಯರ್ ಕೈಗೊಂಡಿದ್ದರು ಎಂದರು.

    ಸಮಾಜ ಸೇವಕ ಡಾ.ಕೆ.ರಘುರಾಮ್ ವಾಜಪೇಯಿ ಮಾತನಾಡಿ, ಜಯಚಾಮರಾಜ ಒಡೆಯರ್ ಅವರು ಪ್ರಜಾವಾತ್ಸಲ್ಯ, ಪ್ರಜಾ ಸೂಕ್ಷ್ಮಗಳನ್ನು ಅರಿತ ಮಹಾರಾಜರಾಗಿದ್ದರು. ಕಲೆ, ಸಂಸ್ಕೃತಿ, ಶಿಕ್ಷಣ ಪ್ರೇಮಿಗಳಾಗಿದ್ದ ಮಹಾರಾಜರು, ಸ್ವಾತಂತ್ರ್ಯೋತ್ತರ ಭಾರತಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಆಶಯದಂತೆ ಮೈಸೂರು ಸಂಸ್ಥಾನವನ್ನು ಯಾವುದೇ ಪ್ರತಿಭಟನೆ ಮಾಡದೆ ಒಕ್ಕೂಟ ವ್ಯವಸ್ಥೆಗೆ ವಿಲೀನಗೊಳಿಸಿದ ರೀತಿ ಅತ್ಯಂತ ಶ್ಲಾಘನೀಯ ಎಂದರು.

    ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಅಧ್ಯಕ್ಷ ಬೆಟ್ಟೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮುಡಾ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಮುಖಂಡರಾದ ಪಡುವಾರಹಳ್ಳಿ ರಾಮಕೃಷ್ಣ, ಮಾ.ವೆಂಕಟೇಶ್, ವಿಕ್ರಂ ಅಯ್ಯಂಗಾರ್, ಅಜಯ್‌ಶಾಸ್ತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts