More

    ಜಯ ಕರ್ನಾಟಕ ಸಂಘಟನೆ ವತಿಯಿಂದ ಪುಟ್ಟರಾಜ ಕವಿ ಗವಾಯಿಗಳ ಜಯಂತೋತ್ಸವ

    ಗದಗ: ಜಯ ಕರ್ನಾಟಕ ಸಂಘಟನೆ ವತಿಯಿಂದ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಮತ್ತು ಜಗದ್ಗುರು ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಜಯಂತೋತ್ಸವವನ್ನು ಗದಗ ನಗರದ ಬಸವೇಶ್ವರ ಸರ್ಕಲ್ ವೃತ್ತದಲ್ಲಿ ಆಚರಣೆ ಮಾಡಲಾಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ಹೆಚ್ ಕೆ ಪಾಟೀಲ್ ರವರು ಜಯ ಕರ್ನಾಟಕ ಸಂಘಟನೆಯ ಕಾರ್ಯ ತುಂಬಾ ಶ್ಲಾಘನೀಯ ಪೂಜ್ಯದ್ವೈರ ಜಯಂತೋತ್ಸವವನ್ನು ಯಾವುದೇ ಜಾತಿ ಮತ ಪಂಥ ಭೇದವಿಲ್ಲದೆ ಆಚರಣೆ ಮಾಡಿದ್ದು ಮಾದರಿಯ ವಿಷಯ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ರವರಿಗೆ ಯಾವುದಾದರೂ ಸಂಗೀತ ವಾದ್ಯವನ್ನು ಕೊಟ್ಟರೆ ಅತಿ ಸಲೀಸಾಗಿ ನುಡಿಸುತ್ತಿದ್ದರು ಸಂಗೀತ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ್ದವರು ಗದಗ ಜಿಲ್ಲೆಯಲ್ಲಿ ಅಂದ ಅನಾಥರಿಗೆ ಬೆಳಕಾಗಿರುವಂತ ಕಾರ್ಯಗಳನ್ನು ಮಾಡಿದ್ದಾರೆ. ತೋಂಟದ ಸಿದ್ದಲಿಂಗ ಶ್ರೀಗಳು ಅವರ ಮಠದಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಜನರಿಗೆ ಪ್ರವೇಶವಿದೆ ಮತ್ತು ತೋಂಟದಾರ್ಯ ಜಾತ್ರೆಯ ಸಮಯದಲ್ಲಿ ಎಲ್ಲಾ ಸಮುದಾಯದವರಿಗೆ ಜಾತ್ರಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವುದು ಉದಾಹರಣೆ. ತೋಂಟದಾರ್ಯ ಮಠದ ಆಡಳಿತ ಅಧಿಕಾರಿಗಳಾದ ಶಿವಾನಂದ್ ಪಟ್ಟಣ ಶೆಟ್ಟರು ಮಾತನಾಡಿ ತೋಂಟದ ಶ್ರೀಗಳು ಎಂದು ಯಾವುದೇ ಪ್ರಶಸ್ತಿಯನ್ನು ಪಡೆಯಲಿಕ್ಕೆ ಅರ್ಜಿಯನ್ನ ಹಾಕಿಲ್ಲ ಪ್ರಶಸ್ತಿಗಳನ್ನು ಅವರು ಕೊಟ್ಟಂತ ಸಂದರ್ಭದಲ್ಲಿ ನಮಗೆ ಯಾವುದು ಪ್ರಶಸ್ತಿಯನ್ನು ಬೇಡ ಅಂತ ಹೇಳಿದರು, ಬೆಂಗಳೂರಿಗೆ ಹೋಗದೆ ಇದ್ದರೂ ಮುಂದೆ ಸರ್ಕಾರದಿಂದ ಜಿಲ್ಲಾಧಿಕಾರಿಗಳು ಬಂದು ಪ್ರಶಸ್ತಿಗಳನ್ನು ಕೊಟ್ಟಿರುವಂತಹ ಉದಾಹರಣೆ ಇದೆ. ಜಯ ಕರ್ನಾಟಕ ಸಂಘಟನೆ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಜನರಿಗೆ ಅನ್ಯಾಯವಾದಾಗ ಅವರ ಪರವಾಗಿ ನಿಂತು ಹೋರಾಟ ಮಾಡಿ ಅವರಿಗೆ ನ್ಯಾಯ ಕೊಡಿಸಿದ್ದಾರೆ ಸರ್ವ ಸಮುದಾಯವನ್ನು ಕೂಡಿಕೊಂಡು ಸಂಘಟನೆಯನ್ನು ಮಾಡುತ್ತಿದ್ದಾರೆ ಎಂದರು,

    ಈ ಸಂದರ್ಭದಲ್ಲಿ ಚಂದ್ರಕಾಂತ ಚವ್ಹಾಣ, ಭಾಷುಸಾಬ ಮಲಸಮುದ್ರ ರಫೀಕ್ ತೊರ್ಗಲ್, ಇಸ್ಮಾಯಿಲ್ ಆಡೂರ್, ರಾಜು ಮಲ್ನಾಡ ಅಕ್ಬರ್ ಸಾಬ್ ಬಬ್ಬರ್ಚಿ, ಅಬ್ಬು ಹುಯಿಲಗೋಳ, ಮಕ್ತುಮ್ ಸಾಬ್ ನಾಲಬಂದ, ಪ್ರಕಾಶ್ ಖೋಡೆ, ಇರ್ಫಾನ್ ಡಂಬಲ್, ಜಾವೂರ್ ರಿಟೈರ್ಡ್ ಪಿ ಎಸ್ ಐ, ರಮೇಶ್ ರಾಥೋಡ್ ಷರೀಫ್ ಬೆನ್ಕಲ್ ಅಬ್ಬು ರಾಟಿ ನಾಗರಾಜ್ ಕ್ಷತ್ರಿಯ ಕಳಕಪ್ಪ ಶರಣಪ್ಪ ಚಳಗೇರಿ ರಮೇಶ್ ಹಂಗನಕಟ್ಟಿ ಖತಿಜ ಬೇಗಂ ಗೀತಾ ಚಿತ್ರಗಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts