More

    ಸ್ವಾಮಿ ವಿವೇಕಾನಂದ ಯೂನಿವರ್ಸಿಟಿ ಆಗಲಿ ಜೆಎನ್​ಯು – ಚರ್ಚೆಗೆ ಕಿಚ್ಚು ಹಚ್ಚಿದ್ರು ಸಿ.ಟಿ.ರವಿ

    ಬೆಂಗಳೂರು: ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಜೆಎನ್​ಯು ಮರುನಾಮಕರಣದ ಚರ್ಚೆಗೆ ಕಿಚ್ಚು ಹಚ್ಚಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸ್ವಾಮಿ ವಿವೇಕಾನಂದ ಯೂನಿವರ್ಸಿಟಿ ಎಂದು ಜೆಎನ್​ಯು ಮರುನಾಮಕರಣವಾಗಲಿ ಎಂಬ ಸಲಹೆಯನ್ನು ದೇಶದ ಜನರ ಮುಂದೆ ಇರಿಸಿದ್ದಾರೆ.

    ಭಾರತ ಎಂಬ ಪರಿಕಲ್ಪನೆಯ ಹಿಂದಿರುವ ಮಹಾಪುರುಷ ಸ್ವಾಮಿ ವಿವೇಕಾನಂದ. ಅವರ ತತ್ತ್ವಶಾಸ್ತ್ರ ಮತ್ತು ಮೌಲ್ಯಾದರ್ಶನಗಳೇ ಭಾರತದ ಬಲ, ಶಕ್ತಿ. ಹೀಗಾಗಿ ಜವಹರಲಾಲ್ ನೆಹರೂ ಯೂನಿವರ್ಸಿಟಿಯನ್ನು ಸ್ವಾಮಿ ವಿವೇಕಾನಂದ ಯೂನಿವರ್ಸಿಟಿ ಎಂದು ನಾಮಕರಣಮಾಡುವುದೇ ಸರಿಯಾದ ವಿಚಾರ. ರಾಷ್ಟ್ರಪ್ರೇಮಿ ಸಂತನ ಜೀವನ ತಲೆಮಾರುಗಳ ತನಕ ಪ್ರೇರಣೆ ನೀಡಲಿ ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: VIDEO| ಪೂಜೆ ಮಾಡುತ್ತಿರುವಾಗಲೇ ಪ್ರಾಣ ಬಿಟ್ಟ ಕಾಂಗ್ರೆಸ್ ಮಾಜಿ ​ಶಾಸಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

    ಅವರ ಈ ಟ್ವೀಟ್​ ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೇವಲ ಮರುನಾಮಕರಣದಿಂದ ಪ್ರಯೋಜನವಾಗುವುದಿಲ್ಲ. ಅಲ್ಲಿನ ಮೂಲ ವ್ಯವಸ್ಥೆಯನ್ನೇ ಪರಿಷ್ಕರಿಸಬೇಕು. ಆ ಯೂನಿವರ್ಸಿಟಿಯ ಪುನರುತ್ಥಾನವಾಗಬೇಕು. ಪಠ್ಯದಿಂದ ಹಿಡಿದು ಪ್ರತಿಯೊಂದೂ ಬದಲಾಗಬೇಕು. ಇಲ್ಲದೇ ಇದ್ದರೆ ಮರುನಾಮಕರಣ ಮಾಡಿದರೂ ಅದು ಸಂತರಿಗೆ ಮಾಡಿದ ಅವಮಾನವಾದೀತು ಎಂದು ಕೆ.ಸೆಂಥಿಲ್ ಕುಮಾರ್ ಎಂಬುವರು ಪ್ರತಿಕ್ರಿಯಿಸಿದ್ದಾರೆ.

    ಬಿಹಾರಕ್ಕೆ ಹೊಸ ಸರ್ಕಾರ: ನಿತೀಶ್ ಸಿಎಂ, ತಾರಕಿಶೋರ್, ರೇಣುದೇವಿ ಡಿಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts