More

    ಸಿನಿಮಾ ಕ್ಷೇತ್ರದ ಚಟುವಟಿಕೆ ಪುನರಾರಂಭಕ್ಕೆ ಶೀಘ್ರದಲ್ಲೇ ಎಸ್​ಒಪಿ

    ನವದೆಹಲಿ: ಕರೊನಾ ಬಿಕ್ಕಟ್ಟಿನ ಕಾರಣದಿಂದಾಗಿ ಸಂಕಷ್ಟದಲ್ಲಿರುವ ಚಲನಚಿತ್ರ ನಿರ್ಮಾಣ ಕ್ಷೇತ್ರದ ಚಟುವಟಿಕೆಗಳನ್ನು ಪುನಾರಾರಂಭಿಸಲು ಸರ್ಕಾರ ಸದ್ಯದಲ್ಲೇ ನಿರ್ದಿಷ್ಟ (ಎಸ್​ಒಪಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

    ಎಫ್​ಐಸಿಸಿಐ ಫ್ರೇಮ್ಸ್​ 2020 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಜಾವಡೇಕರ್​, ಕೋವಿಡ್ ಕಾರಣಕ್ಕೆ ನಿಂತ ನೀರಾಗಿದ್ದ ಸಿನಿಮಾ ಕ್ಷೇತ್ರದಲ್ಲಿ ಮತ್ತೆ ಚಟುವಟಿಕೆ ಆರಂಭಿಸುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಟಿವಿ ಧಾರಾವಾಹಿಗಳ ಪ್ರೊಡಕ್ಷನ್​ ಕೂಡ ಮತ್ತೆ ಶುರುವಾಗಬೇಕು. ಜತೆಗೆ ಚಲನಚಿತ್ರ ನಿರ್ಮಾಣ, ಧಾರಾವಾಹಿ, ಅನಿಮೇಷನ್ ಮತ್ತು ಗೇಮಿಂಗ್​ಗಳಿಗೆ ಸ್ವಲ್ಪ ಮಟ್ಟಿನ ಪೋ›ತ್ಸಾಹಧನ ನೀಡುವಂತಹ ಕ್ರಮಗಳನ್ನೂ ಪ್ರಕಟಿಸಲಿದ್ದೇವೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಸಂಸದೀಯ ಸಮಿತಿ ಸಭೆಗೆ 8 ಅಂಶಗಳ ಪ್ರೊಟೊಕಾಲ್

    ಫಿಲಂ ಫೆಸಿಲಿಟೇಷನ್ ಆಫೀಸಿನ ಪ್ರಯೋಜನವನ್ನು 80ಕ್ಕೂ ಹೆಚ್ಚು ವಿದೇಶಿ ಸಿನಿಮಾ ನಿರ್ಮಾಪಕರು ಪಡೆದುಕೊಂಡಿದ್ದಾರೆ. ಈ ಕಚೇರಿಯು ಏಕಗವಾಕ್ಷಿ ಅನುಮತಿಯ ವ್ಯವಸ್ಥೆಯನ್ನು ಮಾಡಿದ್ದು, ಭಾರತದಲ್ಲಿ ವಿದೇಶಿ ಸಿನಿಮಾ ಶೂಟಿಂಗ್ ಪ್ರಕ್ರಿಯೆ ಸರಳವಾಗಿದೆ. ಅವರಿಂದಲೂ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಚಿವ ಜಾವಡೇಕರ್ ತಿಳಿಸಿದ್ದಾರೆ. (ಏಜೆನ್ಸೀಸ್)

    ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್​ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts