More

    ನೋಡ ನೋಡುತ್ತಲೇ ಕ್ಯಾಮೆರಾ ಮುಂದೆ ಮಾಯವಾದ ಮಹಿಳೆ! ಈ ವಿಡಿಯೋ ನೋಡಿದ್ರೆ ಹುಬ್ಬೇರೋದು ಗ್ಯಾರೆಂಟಿ

    ಟೊಕಿಯೋ: ಜಗತ್ತೇ ಬೆರಗಾಗಿ ನೋಡುವಂತಹ ಸಾಧನವೊಂದನ್ನು ಜಪಾನ್​ ದೇಶದ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಕ್ಯಾಮೆರಾ ಮುಂದೆ ಮಾಯವಾಗುವಂತ ಇನ್ವಿಸಿಬಲ್​ ಸಾಧನವನ್ನು ಕಂಡುಹಿಡಿದ್ದಾರೆ. ಬಟ್ಟೆಯ ಸಹಾಯದಿಂದ ಮಹಿಳೆಯೊಬ್ಬಳು ಕ್ಯಾಮೆರಾ ಮುಂದೆ ಮಾಯವಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಗ್ರೇಟ್​ ವಿಡಿಯೋಸ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದೆ. ಜಪಾನ್ ವಿಜ್ಞಾನಿಗಳು ಇನ್ವಿಸಿಬಲ್​ ಸಾಧನ ಕಂಡುಹಿಡಿದಿದ್ದಾರೆ ಎಂದು ಅಡಿಬರಹ ನೀಡಲಾಗಿದೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಇದುವರೆಗೂ 12 ಮಿಲಿಯನ್​ಗೂ ಅಧಿಕ ವೀಕ್ಷಕೆ ಮತ್ತು 24 ಸಾವಿರಕ್ಕೂ ಹೆಚ್ಚು ರೀಟ್ವೀಟ್​ ಪಡೆದುಕೊಂಡಿದೆ. ಅಲ್ಲದೆ, ಕೆಲವೇ ಸಮಯದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದಿದೆ.

    ವಿಡಿಯೋದಲ್ಲಿ ಏನಿದೆ? ಮಹಿಳೆಯೊಬ್ಬಳು ಕಚೇರಿಯ ಒಳಗೆ ಇರುವುದನ್ನು ನೀವು ಗಮನಿಸಬಹುದು. ಕ್ಯಾಮೆರಾ ಮುಂದೆ ನಿಂತಿರುವ ಮಹಿಳೆ ಒಂದು ಬಟ್ಟೆ ತುಣುಕಿನಿಂದ ತನ್ನನ್ನು ಮರೆ ಮಾಚಿಕೊಂಡಾಗ ಆಕೆ ಸಂಪೂರ್ಣ ಮಾಯವಾಗುತ್ತಾಳೆ. ಅಂದರೆ ಆಕೆ ಹಿನ್ನೆಲೆಯಲ್ಲಿ ಕಚೇರಿಯ ಸ್ಪಷ್ಟ ಚಿತ್ರಣ ಕಾಣುತ್ತದೆ. ಕ್ಯಾಮೆರಾ ಮುಂದೆ ಯಾರೂ ಕೂಡ ನಿಂತೇ ಇಲ್ಲ ಎಂಬಂತೆ ಗೋಚವಾಗುತ್ತದೆ.

    ಆದರೆ, ಈ ವಿಡಿಯೋ ಬಗ್ಗೆ ಕೆಲ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಜಪಾನ್​ ವಿಜ್ಞಾನಿಗಳು ಇನ್ವಿಸಿಬಲ್​ ಸಾಧನ ಕಂಡುಹಿಡಿದಿಲ್ಲ, ಬದಲಾಗಿ ಒಳ್ಳೆಯ ಎಡಿಟಿಂಗ್​ ಸಂಶೋಧಿಸಿದ್ದಾರೆ ಎಂದು ನೆಟ್ಟಿಗನೊಬ್ಬ ಕಿಚಾಯಿಸಿದ್ದಾರೆ. ಈ ವಿಡಿಯೋದಲ್ಲಿ ಒಂದು ತಂತ್ರವಿದೆ. ಗ್ರೀನ್​ ಸ್ಕ್ರೀನ್​ ಬಳಸಿದ್ದಾರೆ ಎಂದು ವೈರಲ್​ ವಿಡಿಯೋ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸುವುದನ್ನು ಮರೆಯಬೇಡಿ. (ಏಜೆನ್ಸೀಸ್​)

    https://twitter.com/Enezator/status/1592978211423805445?s=20&t=s3Ghay9PIoLkl3AOvAbEHA

    ತೆನೆ ಇಳಿಸಿ ಕೈ ಹಿಡಿಯಲು ಒಪ್ಪಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ!?

    ನಿಶ್ಚಿತಾರ್ಥದ ವೇಳೆ ಧರಿಸಿದ್ದ ಡ್ರೆಸ್​ನಿಂದ ಮತ್ತೆ ಟ್ರೋಲ್​ ಆದ ಆಮೀರ್​ ಪುತ್ರಿ​! ಬಿಕಿನಿ ಬರ್ತಡೇ ನೆನಪಿಸಿದ ನೆಟ್ಟಿಗರು

    ಸ್ಥಳೀಯ ಸಂಸ್ಥೆಗಳ ಆಸ್ತಿ ದಾಖಲೆಗೆ ಹೈಟೆಕ್ ಸ್ಪರ್ಶ: ಡಿಜಿಟಲೀಕರಣಕ್ಕೆ ‘ಇ-ಆಸ್ತಿ ತಂತ್ರಾಂಶ’ ಜಾರಿ; ಆನ್​ಲೈನ್​ನಲ್ಲೇ ಸಕಲ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts