More

    ಮೇ 4ರಂದು ಚಿಣ್ಣರಿಗಾಗಿ ಜನಪದ ಸಾಹಿತ್ಯ ಕಮ್ಮಟ


    ಮೈಸೂರು: ಅದಮ್ಯ ರಂಗಶಾಲೆ ಹಾಗೂ ಸ್ಪಂದನ ಸಾಂಸ್ಕೃತಿಕ ಪರಿಷತ್‌ನ ಸಹಯೋಗದಲ್ಲಿ ನಗರದ ವಿ.ವಿ.ಮೊಹಲ್ಲಾದ ಮಾತೃ ಮಂಡಳಿ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮೇ 4ರಂದು ಬೆಳಗ್ಗೆ 10.30 ಗಂಟೆಗೆ ‘ಚಿಣ್ಣರಿಗಾಗಿ ಜನಪದ ಸಾಹಿತ್ಯ ಕಮ್ಮಟ’ ನಡೆಯಲಿದೆ ಎಂದು ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ.

    ಜನಪದ ಸಾಹಿತ್ಯವನ್ನು ಚಿಣ್ಣರಿಗಾಗಿ ಪರಿಚಯಾತ್ಮಕವಾಗಿ ತಿಳಿಸಿಕೊಡಲಿರುವ ಈ ಕಮ್ಮಟವನ್ನು ಜನಪರ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಎಂ.ಮಹೇಶ್ ಚಿಕ್ಕಲೂರು ಉದ್ಘಾಟಿಸಲಿದ್ದು, ಮಾತೃ ಮಂಡಳಿ ವಿದ್ಯಾಸಂಸ್ಥೆ ಗೌರವಾಧ್ಯಕ್ಷೆ ಎಂ. ವಿಜಯಲಕ್ಷ್ಮಿ ಅರಸ್ ಅಧ್ಯಕ್ಷತೆ ವಹಿಸುವರು. ಸ್ಪಂದನ ಸಾಂಸ್ಕೃತಿಕ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡುವರು.

    ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಕವಯಿತ್ರಿ ಕೆರೋಡಿ ಎಂ.ಲೋಲಾಕ್ಷಿ ‘ಮಕ್ಕಳ ಜನಪದ ಕತೆಗಳು’ ಕುರಿತು, ಕನ್ನಡ ಉಪನ್ಯಾಸಕ ಮತ್ತು ಗಾಯಕ ಪರಮೇಶ್ ಕೆ. ಉತ್ತನಹಳ್ಳಿ ‘ಜನಪದ ಗೀತೆಗಳು’ ಕುರಿತು, ಕವಿ ಟಿ. ಸತೀಶ್ ಜವರೇಗೌಡ ’ಮಕ್ಕಳ ಜನಪದ ಶಿಶುಪ್ರಾಸಗಳ’ ಕುರಿತು, ಲೇಖಕ ಡಾ.ಎಂ.ಮಹೇಶ್ ಚಿಕ್ಕಲೂರು ‘ಜನಪದ ಗಾದೆ ಮಾತು ಒಗಟು’ಗಳ ಕುರಿತು ಮಾತನಾಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts