More

    ಜನಮತ | ಕೇಂದ್ರ ಇಂಧನ ಬೆಲೆಯನ್ನು ನಿಯಂತ್ರಿಸಲಿ…

    ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿನಂಪ್ರತಿ ತೈಲ ಬೆಲೆ ಏರುತ್ತಿದೆ ಎಂದು ನಮ್ಮ ದೇಶದಲ್ಲಿ ತೈಲ ಕಂಪನಿಗಳು ಕಳೆದ ಹಲವು ದಿನಗಳಿಂದ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರಗಳನ್ನು ವಿಪರೀತ ಏರಿಕೆ ಮಾಡಿ ಜನಸಾಮಾನ್ಯರು ಪರದಾಡುವಂತೆ ಮಾಡಿವೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್- ‘ಇದೊಂದು ಧರ್ಮಸಂಕಟದ ಪರಿಸ್ಥಿತಿಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ರ್ಚಚಿಸಿ ಪರಿಹಾರ ಕಂಡುಕೊಳ್ಳಬೇಕು’ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ‘ಹಿಂದಿನ ಸರ್ಕಾರಗಳು ಇಂಧನದ ಆಮದಿನ ಅವಲಂಬನೆಗೆ ಕಡಿವಾಣ ಹಾಕದಿರುವುದೇ ಈಗ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಲು ಕಾರಣ’ ಎಂದಿದ್ದಾರೆ.

    ಆದರೆ, ಲಾಕ್​ಡೌನ್ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿದರೂ ಅದರ ಲಾಭವನ್ನು ಗ್ರಾಹಕರಿಗೆ ಏಕೆ ವರ್ಗಾಯಿಸಲಿಲ್ಲ? ಪೆಟ್ರೋಲ್ ಮತ್ತು ಡೀಸೆಲ್​ನ್ನು ಶ್ರೀಮಂತರಿಂದ ಹಿಡಿದು ಸಾಮಾನ್ಯ ಬಡವರ್ಗದ ಜನರು ಕೂಡ ದೈನಂದಿನ ಅಗತ್ಯವಸ್ತುವಾಗಿ ಬಳಸುತ್ತಿದ್ದಾರೆ. ಸರ್ಕಾರ ಇದನ್ನು ಐಷಾರಾಮಿ ವಸ್ತುವಿನಂತೆ ಕಾಣಬಾರದು. ಕರೊನಾದಿಂದಾಗಿ ಈಗಾಗಲೇ ಜನರು ಸಾಕಷ್ಟು ಆರ್ಥಿಕ ಹೊಡೆತ ತಿಂದಿದ್ದಾರೆ. ಗಾಯದ ಮೇಲೆ ಬರೆ ಎಳೆಯುವ ಕೆಲಸ ಬೇಡ.

    ಪೆಟ್ರೋಲ್ ಹಾಗೂ ಡೀಸೆಲ್​ನ್ನು ಜಿಎಸ್​ಟಿ ವ್ಯಾಪ್ತಿಗೆ ತಂದು ಬೆಲೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ರಾಜಕೀಯ ಇಚ್ಛಾಶಕ್ತಿ ಇದ್ದರೆ ಇದು ಅಸಾಧ್ಯವೇನಲ್ಲ.

    | ಎನ್. ರಾಜೇಶ್ ಅಡಿಗ ವಕೀಲರು, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts