More

    ವಸ್ತುಸ್ಥಿತಿ ಅಧ್ಯಯನಕ್ಕೆ ವಿದೇಶಿ ತಂಡ: ಜಮ್ಮು-ಕಾಶ್ಮೀರಕ್ಕೆ ಇಂದು ಭೇಟಿ

    ನವದೆಹಲಿ: ಭಾರತದಲ್ಲಿರುವ ವಿವಿಧ ದೇಶಗಳ ರಾಜತಾಂತ್ರಿಕರ ತಂಡವೊಂದು ಜಮ್ಮು- ಕಾಶ್ಮೀರಕ್ಕೆ ಜ.9 ಮತ್ತು 10ರಂದು ಭೇಟಿ ನೀಡಲಿದ್ದು, ಅಲ್ಲಿನ ವಸ್ತುಸ್ಥಿತಿ ಅಧ್ಯಯನ ಮಾಡಲಿದೆ. ಈ ತಂಡದಲ್ಲಿ 18 ರಾಜತಾಂತ್ರಿಕ ಅಧಿಕಾರಿಗಳು ಇರಲಿದ್ದಾರೆ. ಜಮ್ಮು- ಕಾಶ್ಮೀರಕ್ಕೆ 370ನೇ ವಿಧಿ ಅನ್ವಯ ಇದ್ದ ವಿಶೇಷ ಸ್ಥಾನಮಾನವನ್ನು ಕಳೆದ ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸಂಪರ್ಕ, ಸಂವಹನ ಕಡಿತ ಮತ್ತು ರಾಜಕೀಯ ನಾಯಕರ ಬಂಧನದ ಬಗ್ಗೆ ವಿಶ್ವಸಮುದಾಯದಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

    ಜಮ್ಮು- ಕಾಶ್ಮಿರ ಕೇಂದ್ರಾಡಳಿತ ಪ್ರದೇಶ (ಶಾಸನಸಭೆ ಸಹಿತ) ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶ (ಶಾಸನಸಭೆ ರಹಿತ) ಎಂದು ಪುನರ್ ರಚಿಸಿದೆ. ಈ ಬೆಳವಣಿಗೆಯ ನಂತರ ಅಲ್ಲಿನ ವಸ್ತುಸ್ಥಿತಿ ಅಧ್ಯಯನಕ್ಕೆ ಕೇಂದ್ರ ಕಳುಹಿಸುತ್ತಿರುವ ಮೊದಲ ಅಧಿಕೃತ ವಿದೇಶಿ ರಾಜತಾಂತ್ರಿಕರ ತಂಡ ಇದಾಗಿದೆ. ಕಳೆದ ಅಕ್ಟೋಬರ್​ನಲ್ಲಿ ಐರೋಪ್ಯ ಸಂಸತ್ತಿನ 23 ಸದಸ್ಯರನ್ನು ಸ್ವಯಂಸೇವಾ ಸಂಸ್ಥೆಯೊಂದು ಕಾಶ್ಮೀರಕ್ಕೆ ಕರೆದೊಯ್ದಿತ್ತು. ವಿದೇಶಿ ಸಂಸದರು ಕಾಶ್ಮೀರಕ್ಕೆ ಭೇಟಿ ನೀಡಬಹುದು, ಭಾರತದ ಸಂಸದರು ಭೇಟಿ ನೀಡಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲವೆಂದು ವಿರೋಧ ಪಕ್ಷಗಳು ಕಿಡಿಕಾರಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts