More

    ಸಾವಿತ್ರಿಬಾಯಿ ಆದರ್ಶ ಪಾಲಿಸಿ

    ಜಮಖಂಡಿ: ಮಹಿಳೆಯಾಗಿ ರಾಷ್ಟ್ರವ್ಯಾಪಿ ಶೈಕ್ಷಣಿಕ ಕ್ರಾಂತಿ ಮಾಡಿದ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರನ್ನು ಒಂದು ಜಾತಿಗೆ ಸೀಮಿತ ಮಾಡದೆ ಎಲ್ಲ ವರ್ಗದವರು ಅವರ ಆದರ್ಶ ಪಾಲಿಸಬೇಕು ಎಂದು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

    ನಗರದ ಎಸ್.ಆರ್.ಎ ಕ್ಲಬ್‌ನಲ್ಲಿ ಸುಶೀಲ ಪ್ರಕಾಶನ ತೇರದಾಳ ಆಶ್ರಯದಲ್ಲಿ ಹಿರಿಯ ಸಾಹಿತಿ ಡಾ.ಜೆ.ಪಿ. ದೊಡಮನಿ ಅವರು ರಚಿಸಿದ ‘ಭಾರತ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ’ ಅವರ ಗ್ರಂಥ ಲೋಕಾರ್ಪಣೆ ಸಮಾರಂಭ ಹಾಗೂ ಸಾವಿತ್ರಿಬಾಯಿ ಫುಲೆ ಅವರ 190ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ, ಸಾಹಿತಿ ಡಾ.ಸತೀಶಕುಮಾರ ಹೊಸಮನಿ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅಕ್ಷರ ಕ್ರಾಂತಿ ಮಾಡಿ ಶಿಕ್ಷಕಿಯಾಗಿ ಕಾರ್ಯ ಆರಂಭಿಸಿದರು. ಎಲ್ಲಿ ಹೆಚ್ಚು ಗ್ರಂಥಾಲಯಗಳು, ಶಿಕ್ಷಣ ಸಂಸ್ಥೆಗಳು ಇರುತ್ತವೆಯೋ ಆ ದೇಶ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದರು.

    ಮಹಾಲಿಂಗಪುರ ಕೆಎಲ್‌ಇ ಕಾಲೇಜಿನ ಪ್ರಾಧ್ಯಾಪಕ, ಹಿರಿಯ ಸಾಹಿತಿ ಅಶೋಕ ನರೋಡೆ ಪುಸ್ತಕ ಪರಿಚಯಿಸಿದರು. ಡಾ.ಜೆ.ಪಿ. ದೊಡಮನಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ಪ್ರಾಂಶುಪಾಲ ಪ್ರೊ.ಎಸ್.ಎಂ. ಹಾದಿಮನಿ ಇದ್ದರು. ಸುಶೀಲ್ ಪ್ರಕಾಶನ ಸಂಸ್ಥಾಪಕ, ಹಿರಿಯ ನ್ಯಾಯವಾದಿ ಎಸ್.ಪಿ. ದೊಡಮನಿ ಸ್ವಾಗತಿಸಿ ಪರಿಚಯಿಸಿದರು. ಪ್ರೊ.ಎಸ್.ಆರ್. ಹಂದಿಗುಂದ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts