More

    ಹಾನಿಗೀಡಾದ ಶ್ರೀಗಂಧದ ಮರಗಳ ವೀಕ್ಷಣೆ

    ಜಮಖಂಡಿ: ತಾಲೂಕಿನ ಮೈಗೂರ ಗ್ರಾಮದಲ್ಲಿ ಮರಗಳ್ಳರ ಹಾವಳಿಗೆ ತುತ್ತಾಗುತ್ತಿರುವ ಶ್ರೀಗಂಧದ ಮರಗಳ ಸಂರಕ್ಷಣೆ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿ ಮರಗಳ ಪರಿಶೀಲನೆ ನಡೆಸಿತು.

    ಶ್ರೀಗಂಧದ ಮರಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಮಾ. 17 ರಂದು ವಿಜಯವಾಣಿ ಪತ್ರಿಕೆ ‘ಶ್ರೀಗಂಧದ ಮರಗಳ ಮಾರಣಹೋಮ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು, ತಾಲೂಕಿನ ಮೈಗೂರ ಗ್ರಾಮದಲ್ಲಿ ಅರ್ಧ ಕೊರೆದು ಹೋಗಿದ್ದ ಶ್ರೀಗಂಧದ ಮರವನ್ನು ವೀಕ್ಷಣೆ ಮಾಡಿದರು.
    ರೈತರ ಜಮಿನುಗಳಲ್ಲಿ ಸೇರಿ ನದಿ ಹಳ್ಳಗಳ ದಂಡೆಯಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಶ್ರೀಗಂಧದ ಮರಗಳ ಇರುವಿಕೆ ಬಗ್ಗೆ ಹಾಗೂ ಶ್ರೀಗಂಧದ ಮರಗಳಿಗೆ ಧಕ್ಕೆ ಮಾಡಿರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದರೆ ಕ್ರಮ ಜರುಗಿಸುತ್ತೇವೆ. ಶ್ರೀಗಂಧದ ಮರಕ್ಕೆ ಯಾವುದೇ ತರಹದ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಈ ಕುರಿತು ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು. ಎಂದು ಅಧಿಕಾರಿಗಳು ತಿಳಿಸಿದರು.

    ಸಿದ್ದಾಪುರ ಶಾಖೆಯ ಉಪವಲಯದ ಕಲ್ಲೊಳ್ಳಿ ಗಸ್ತು ಅರಣ್ಯ ರಕ್ಷಕ ಸುಭಾಸ ವಾರದ, ಪಿ.ಎಸ್. ಪಾಟೀಲ, ವಿ.ಎಸ್.ಕುಬಕಡ್ಡಿ ಇದ್ದರು.



    ಹಾನಿಗೀಡಾದ ಶ್ರೀಗಂಧದ ಮರಗಳ ವೀಕ್ಷಣೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts