More

    ಸಮೃದ್ಧ ಕೃಷಿಗಾಗಿ ಗೋವು ಅವಶ್ಯ

    ಜಮಖಂಡಿ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು ರೈತರು ಹಾಗೂ ಗ್ರಾಮಗಳ ಉದ್ಧಾರ ಮತ್ತು ಸಮೃದ್ಧ ಕೃಷಿಗಾಗಿ ಗೋವು ಅತ್ಯವಶ್ಯವಾಗಿದೆ. ಗೋವು ರೈತನ ಜೀವನಾಡಿಯಾಗಿದೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.

    ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2020 ಸದನದಲ್ಲಿ ಮಂಡನೆಯಾಗಿ ಅಂಗೀಕಾರವಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ನಗರದ ಹನುಮಾನ ವೃತ್ತದಲ್ಲಿ ಗೋವು ಪೂಜೆಗೈದು ಸಿಹಿ ಹಂಚಿ ಸಂಭ್ರಮಿಸಿದ ವೇಳೆ ಮಾತನಾಡಿದರು.

    ಗೋವುಗಳ ರಕ್ಷಣೆ ಕಾಯ್ದೆ ಬಹುದಿನಗಳ ಬೇಡಿಕೆಯಾಗಿತ್ತು. ಆ ನಿಟ್ಟಿನಲ್ಲಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿ ಅಂಗೀಕಾರಗೊಳಿಸಿರುವುದು ರಾಜ್ಯದ ಜನತೆಯಲ್ಲಿ ಸಂತೋಷವನ್ನುಂಟು ಮಾಡಿದೆ. ಕಾಂಗ್ರೆಸ್ಸಿಗರು ಜಾತಿ ಹೆಸರಿನಲ್ಲಿ ಆಡಳಿತ ನಡೆಸಿ ಈ ಕಾಯ್ದೆಯನ್ನು ವಿರೋಧಿಸಿರುವುದು ನಾಚಿಕೆಗೇಡಿನ ಸಂಗತಿ. 70 ಸ್ವದೇಶಿ ತಳೀಯ ಗೋವುಗಳ ಪೈಕಿ 30 ಗೋವು ಸಂತತಿ ಉಳಿದಿವೆ. ಉಪಕಾರ ಜೀವಿಯಾದ ಗೋವು ಅವುಗಳನ್ನು ರಕ್ಷಿಸುವ ಕಾನೂನು ಜಾರಿ ಮಾಡಿರುವ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ ಎಂದರು.

    ಬಿಜೆಪಿ ಹಿರಿಯ ಮುಖಂಡ, ಉದ್ಯಮಿ ಜಗದೀಶ ಗುಡಗುಂಟಿಮಠ ಮಾತನಾಡಿ, ಗೋಹತ್ಯೆ ಮಾಡುವವರಿಗೆ ಮತ್ತು ನಿಯಮ ಮೀರಿ ಅಕ್ರಮವಾಗಿ ಗೋವು ಸಾಗಣೆ ಮಾಡುವವರಿಗೆ 7 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಕಾನೂನು ಜಾರಿಗೆ ತಂದಿರುವುದನ್ನು ಸ್ವಾಗತಿಸುತ್ತೇವೆ ಎಂದರು.
    ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ತುಂಗಳ ಮಾತನಾಡಿ, ಬಿಜೆಪಿ ತತ್ವ ಸಿದ್ಧಾಂತದ ರಾಜಕಾರಣ ಮಾಡುತ್ತದೆ. ನುಡಿದಂತೆ ನಡೆಯುವ ಬಿಜೆಪಿ ಸರ್ಕಾರ ಜಾತಿ ಬೇಧ ಎನ್ನದೆ ಎಲ್ಲ ವರ್ಗಗಳನ್ನು ಒಗ್ಗೂಡಿಸುತ್ತದೆ. ಕಾಂಗ್ರೆಸ್ ಪಕ್ಷ ವ್ಯಾಪಾರೀಕರಣ, ವಿಂಗಡಣೆ ಮಾಡಿ ಜನರಲ್ಲಿ ವಿಷ ಬೀಜಗಳನ್ನು ಬಿತ್ತುತ್ತಿದೆ ಎಂದು ಆರೋಪಿಸಿದರು.

    ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ, ಬಿಜೆಪಿ ಮುಖಂಡರಾದ ಅಜಯ ಕಡಪಟ್ಟಿ, ಎಂ.ಬಿ. ನ್ಯಾಮಗೌಡ, ವಿಜಯಲಕ್ಷ್ಮೀ ಉಕುಮನಾಳ, ಬಸವರಾಜ ಕಲೂತಿ, ಈರಣ್ಣ ಕಲೂತಿ, ಶ್ರೀಶೈಲ ಗಡಾದ, ಮಲ್ಲೇಶಿ ಹೊಸಮನಿ, ಪಂಚಾಕ್ಷರಯ್ಯ ಗೆಣ್ಣೂರಮಠ, ರಾಜು ಚಿಕನಾಳ, ಗೀತಾ ಸೂರ್ಯವಂಶಿ, ಲೊಕೇಶ ಪೂಜಾರಿ, ಸ್ವಾಗತ ಪಾಟೀಲ, ಶಿವಯ್ಯ ಕಾರಾಡಗಿಮಠ, ಶಿವು ನಾಯಕ, ಪ್ರಶಾಂತ ಶಂಕ್ರಪ್ಪಗೋಳ, ಶ್ರೀಧರ ಕಂಬಿ, ಸಚಿನ್ ಪಟ್ಟಣಶೆಟ್ಟಿ, ಸಂತೋಷ ಚನಾಳ, ಪ್ರಕಾಶ ಅರಕೇರಿ, ರಾಯಬಾ ಜಾಧವ, ಮಹೇಶ ರೈನಾಪುರ, ದಿನೇಶ ಕೊಠಾರಿ, ಪವಾಡೆಪ್ಪ ರಾಮತಾಳ, ಸಂದೀಪ ಹುಲ್ಯಾಳಕರ, ರಾಜು ಇಂಗಳಗಾಂವಿಮಠ, ಅನೀಲ ಬಾಗಿಮನಿ, ವಿನಾಯಕ ಪವಾರ ಇತರರು ಇದ್ದರು. ಗಣೇಶ ಶಿರಗಣ್ಣವರ ನಿರೂಪಿಸಿದರು. ಶಂಕರ ಕಾಳೆ ವಂದಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts