More

    ವಿದ್ಯಾರ್ಥಿಗಳಿಗೆ, ಸಿಬ್ಬಂದಿಗೆ ಕೋವಿಡ್ ಪರೀಕ್ಷೆ

    ಜಮಖಂಡಿ: ಪದವಿ ಕಾಲೇಜುಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ನಗರದ ಬಿಎಲ್‌ಡಿಇ ಕಾಲೇಜಿನ ಐಕ್ಯೂಎಸಿ, ಎನ್‌ಎಸ್‌ಎಸ್, ಎನ್‌ಸಿಸಿ, ಯುತ್ ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಹಯೋಗದಲ್ಲಿ ಕಾಲೇಜಿನ ಆವರಣದಲ್ಲಿ ಬುಧವಾರ ಸಿಬ್ಬಂದಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್-19 ಪರೀಕ್ಷೆ ನಡೆಸಲಾಯಿತು.

    ರಾಜ್ಯ ಸರ್ಕಾರ ಹಾಗೂ ರಾಣಿ ಚನಮ್ಮ ವಿವಿಯ ಆದೇಶದನ್ವಯ ತರಗತಿಗಳನ್ನು ಪ್ರಾರಂಭಿಸುತ್ತಿರುವುದರಿಂದ ಕೋವಿಡ್-19 ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಒಟ್ಟು 91 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಯಿತು ಎಂದು ಪ್ರಾಚಾರ್ಯ ಪ್ರೊ.ಬಿ.ಐ. ಕರಲಟ್ಟಿ ತಿಳಿಸಿದರು.

    ಬಿಎಲ್‌ಡಿಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್.ಎಚ್.ಲಗಳಿ, ತಾಲೂಕು ಆರೋಗ್ಯ ಕೇಂದ್ರದ ಡಾ. ಪ್ರಕಾಶ ಹುಗ್ಗಿ, ಗೋವಿಂದ ದಾಸರ, ಎಂ.ಎಲ್. ಅಬಾಲೆ, ರಮೇಶ ಪಾಟೀಲ, ಅಮೋಲ ಕೋರೆ, ಪ್ರೊ.ಎಸ್.ಬಿ. ಕಮತಿ, ಎನ್‌ಸಿಸಿ ಅಧಿಕಾರಿ ಡಾ.ಆರ್.ಬಿ. ಪತ್ತಾರ, ಎನ್‌ಎಸ್‌ಎಸ್ ಅಧಿಕಾರಿ ಡಾ.ವಿ.ಎಸ್. ನಿಟ್ಟೂರ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ಪ್ರೊ.ಜಿ.ವಿ. ಜೋಶಿ, ಪ್ರೊ ಆರ್.ಎಸ್. ವರ್ಣೇಕರ, ಪ್ರೊ.ಎಸ್.ಪಿ.ಗದ್ಯಾಳ, ಎಸ್.ಕೆ. ಬಾದರದಿನ್ನಿ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts