More

    ಶ್ರಮಜೀವಿಗಳ ತೊಂದರೆ ನಿವಾರಿಸಿ

    ಜಮಖಂಡಿ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ರಾಜ್ಯ ಯುವ ಘಟಕದ ಪದಾಧಿಕಾರಿಗಳು ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.

    ಕೇಂದ್ರ ಸರ್ಕಾರದ ನೀತಿಯಿಂದಾಗಿ ಶ್ರಮ ಜೀವಿಗಳಾದ ಕಾರ್ಮಿಕರು ಹಾಗೂ ರೈತರಿಗೆ ನಿರಂತರ ತೊಂದರೆ ಆಗುತ್ತಿದೆ. ಅವರ ವೇತನ ಹಾಗೂ ಆದಾಯ ಕಡಿತವಾಗಿ ಆರ್ಥಿಕ ಸಂಕಷ್ಟಕ್ಕೆ ಈಡಾಗುತಿದ್ದು ಕೇಂದ್ರ ಸರ್ಕಾರ ಅವರ ತೊಂದರೆ ನಿವಾರಿಸಬೇಕು. ದೇಶದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಹೆಚ್ಚಿಸಲು ಕೇಂದ್ರದ ಬಿಜೆಪಿ ಸರ್ಕಾರ ವಿಲವಾಗಿದೆ. ಆಡಳಿತ ಮಂಡಳಿ ಭರಿಸುತ್ತಿದ್ದ ಶೇ.12 ರಷ್ಟು ಮಾಲೀಕರ ವಂತಿಕೆಯನ್ನು ಕಡಿಮೆ ಮಾಡದೆ ಕಾರ್ಮಿಕರ ವಂತಿಕೆಯನ್ನು ಕಡಿಮೆ ಮಾಡುತ್ತಿದೆ. ಇದರಿಂದ ಕಾರ್ಮಿಕರ ನಿವೃತ್ತ ಜೀವನಕ್ಕೆ ತೊಂದರೆ ಆಗುತ್ತಿದೆ. ಎಪಿಎಂಸಿಗಳನ್ನು ಖಾಸಗಿಯವರಿಗೆ ಒಪ್ಪಿಸಿ ರೈತರನ್ನು ಅವರ ಜೀತದಾಳುಗಳಾಗಿ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ಹುನ್ನಾರಗಳನ್ನು ರೈತರು ಅರಿತುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನಗರಸಭೆ ಸದಸ್ಯರಾದ ದಾನೇಶ ಘಾಟಗೆ, ದಿಲಾವರ ಶಿರೋಳ, ಆಜಂ ಅವಟಿ, ರಾಜೇಸಾಬ ಕಡಕೋಳ, ಮೀರಾ ಒಂಟಮೂರಿ, ಅಬುಬಕರ ಕುಡಚಿ, ತಮ್ಮಣ್ಣ ಮಾಂಗ, ಕುಮಾರ ಆಲಗೂರ, ಉದಯ ಕಡಕೋಳ, ರಾಮಣ್ಣ ಕಡಕೋಳ, ಶಂಕರ ಚಿನಗುಂಡಿ, ರೋಹಿತ ಸೂರ್ಯವಂಶಿ, ಮಲ್ಲು ಶಿರಹಟ್ಟಿ, ರಾಜು ಲೊಕಂಡೆ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts