More

    ಬಿಜೆಪಿಯ ಮೂವರು ಆಕಾಂಕ್ಷಿಗಳು

    ಲೋಕೇಶ್‌ಎಂ.ಐಹೊಳೆ ಜಗಳೂರು
    ಚುನಾವಣೆಯಾಗಿ ಎರಡು ವರ್ಷಗಳ ನಂತರ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪ್ರಕಟವಾಗಿದ್ದು, ಸದಸ್ಯರಲ್ಲಿ ಅಧಿಕಾರದ ಆಸೆ ಚಿಗುರೊಡೆದಿದೆ.

    18 ಸದಸ್ಯ ಬಲವಿರುವ ಪಪಂನಲ್ಲಿ ಬಿಜೆಪಿಯ 11, ಕಾಂಗ್ರೆಸ್ 5, ಜೆಡಿಎಸ್‌ನ ಇಬ್ಬರು ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಅಧಿಕ ಸದಸ್ಯರಿರುವ ಬಿಜೆಪಿಯಲ್ಲಿ ಅಧಿಕಾರದ ಗದ್ದುಗೆ ಏರುವ ಉತ್ಸಾಹ ಕಾಣುತ್ತಿದೆ. ಅದರಲ್ಲೂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಎಟಕಿರುವುದು ತೀವ್ರ ಪೈಪೋಟಿಗೆ ಕಾರಣವಾಗಿದೆ.

    ಸೋಲಿಲ್ಲದ ಸರದಾರನಂತೆ ಸತತ ಮೂರು ಬಾರಿ ಆಯ್ಕೆಯಾದ ಎಂಎಲ್‌ಎ ತಿಪ್ಪೇಸ್ವಾಮಿ, 5ನೇ ವಾರ್ಡ್‌ನ ಎಸ್ಟಿ ಮೀಸಲಲ್ಲಿ ಈ ಬಾರಿಯೂ ಗೆಲುವು ಸಾಧಿಸಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದಾರೆ.

    17ನೇ ವಾರ್ಡ್‌ನ ಲಿಂಗಾಯತ ಸಮುದಾಯದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತೆ ಲಲಿತಮ್ಮ ಶಿವಣ್ಣ ಸಹ ಅಪೇಕ್ಷಿಯಾಗಿದ್ದು, ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 3ನೇ ವಾರ್ಡ್‌ನ ಸದಸ್ಯ ರೇವಣಸಿದ್ದಪ್ಪ ಆಕಾಂಕ್ಷಿಯಾಗಿದ್ದು, ವಿಜಯಲಕ್ಷ್ಮಿ ಯಾರಿಗೆ ಫಲ ನೀಡುವಳೋ ಕಾಯ್ದು ನೋಡಬೇಕಿದೆ.

    ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲು ಪ್ರಕಟವಾಗಿರುವುದು ಸ್ವಾಗತಾರ್ಹ. ಜಗಳೂರಿನ ಪಟ್ಟಣ ಪಂಚಾಯಿತಿಯ ಅಧಿಕಾರ ಹಿಡಿಯುವುದು ಖಚಿತ. ಆದರೆ ಮೊದಲ ಅವಧಿಗೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದರ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
    ಎಸ್.ವಿ.ರಾಮಚಂದ್ರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts