More

    ಜಲ್ಲಿಕಟ್ಟು: ಹೋರಿ ದಾಳಿಯಿಂದ 42 ಮಂದಿಗೆ ಗಾಯ

    ಮಧುರೈ: ವರ್ಷದ ಮೊದಲ ದೊಡ್ಡ ಹಬ್ಬವಾದ ಪೊಂಗಲ್ ಚಳಿಗಾಲದ ಅಂತ್ಯವನ್ನು ಮತ್ತು ಹೊಸ ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುತ್ತದೆ. ತಮಿಳುನಾಡಿನ ಸಾಂಸ್ಕೃತಿಕ ಪರಂಪರೆ ಕ್ರೀಡೆಯಾದ ಜಲ್ಲಿಕಟ್ಟು ಪಂದ್ಯದ ವೇಳೆ 42 ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ:ಮದುವೆ ನಂತರ ಸ್ಯಾಂಡಲ್​ವುಡ್​ಗೆ ರೀ ಎಂಟ್ರಿ ಕೊಡಲಿದ್ದಾರೆ ಈ ನಟಿ

    14 ಮಂದಿ ಹೋರಿಯನ್ನು ಪಳಗಿಸುವವರು ಮತ್ತು 16 ಮಂದಿ ಪ್ರೇಕ್ಷಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಸೋಮವಾರದಂದು ಜಲ್ಲಿಕಟ್ಟು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಪಂದ್ಯವನ್ನು ಪಾಲೆಮೆಡುವಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಅತಿ ಹೆಚ್ಚು ಹೋರಿಗಳನ್ನು ಪಳಗಿಸುವವರು ಮತ್ತು ಯಾರ ಕೈಗೂ ಸಿಗದೆ ತಪ್ಪಿಸಿಕೊಂಡ ಎತ್ತಿನ ಮಾಲೀಕರಿಗೆ ಕಾರನ್ನು ಉಡುಗೊರೆಯಾಗಿ ಘೋಷಣೆ ಮಾಡಲಾಗಿದೆ.

    ಅತಿ ಹೆಚ್ಚು 14 ಹೋರಿಗಳನ್ನು ತಡೆದ ಮಧುರೈ ಮೂಲದ ಪಿ. ಪ್ರಭಾಕರನ್‌ ಅವರು ಕಾರನ್ನು ಬಹುಮಾನವಾಗಿ ಗೆದ್ದರು. ಈ ಬಾರಿ ಒಟ್ಟು 840 ಹೋರಿಯನ್ನು ಹಾಗೂ ಸಾವಿರಕ್ಕೂ ಹೆಚ್ಚು ಹೋರಿಯನ್ನು ಪಳಗಿಸುವವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

    ನಾನು ನನ್ನ ಗೆಲುವಿನ ಓಟವನ್ನು ಮುಂದುವರಿಸುತ್ತೇನೆ ಎಂದು ನಿರೀಕ್ಷಿಸಿದ್ದೆ ಆದರೆ ನಾನು ಈ ಬಾರಿ ಎರಡನೇ ಸ್ಥಾನ ಗಳಿಸಿದೆ ಎಂದು 11 ಹೋರಿಗಳನ್ನು ಪಳಗಿಸಿದ ಚಿನ್ನಪಟ್ಟಿ ತಮಿಳರಸನ್ ಹೇಳಿದರು. 2023ರ ಪೊಂಗಲ್ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಈ ಯುವಕ ಪ್ರಥಮ ಬಹುಮಾನ ಪಡೆದಿದ್ದಾನೆ.

    ಆಧುನಿಕ ಕಾಲದಲ್ಲಿ ಅನೇಕ ವರ್ಗಗಳಿಂದ ವಿರೋಧಗಳು ವ್ಯಕ್ತವಾಗಿದ್ದವು. ಇದು ಪ್ರಾಣಿ ಹಿಂಸೆಯ ಕ್ರೀಡೆ. ಅಲ್ಲದೆ ಘಟನೆ ವೇಳೆ ಜಗಳಗಳು ಕೂಡ ನಡೆಯುತ್ತವೆ. ಹಿಂಸಾಚಾರ, ಗೂಳಿ ತಿವಿತಗಳಿಂದ ಜನರು ಬಲಿಯಾದ ಉದಾಹರಣೆಗಳಿವೆ. ಪ್ರಾಣಿಗಳು ಕೂಡ ಮೃತಪಟ್ಟಿವೆ ಎಂದು ಪ್ರಾಣಿದಯಾ ಸಂಘಟನೆಗಳು ಆರೋಪಿಸಿದ್ದವು.

    ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡುವ ತಮಿಳುನಾಡು ಸರ್ಕಾರದ ಕಾನೂನನ್ನು ಸುಪ್ರೀಂಕೋರ್ಟ್ ಗುರುವಾರ ಎತ್ತಿಹಿಡಿದಿದೆ. ಜಲ್ಲಿಕಟ್ಟು ತಮಿಳುನಾಡಿನ ಸಾಂಸ್ಕೃತಿಕ ಪರಂಪರೆ ಎಂದು ಶಾಸಕಾಂಗವೇ ಘೋಷಣೆ ಮಾಡಿರುವಾಗ, ನ್ಯಾಯಾಂಗವು ವಿಭಿನ್ನ ಅಭಿಪ್ರಾಯ ಪ್ರಕಟಿಸುವುದು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಹೇಳಿತ್ತು.

    ಮೈ ಕೊರಿಯುವ ಚಳಿಯಿಂದ ರಕ್ಷಿಸಲು ಅಯೋಧ್ಯೆಯಲ್ಲಿ ವಿಶೇಷ ವ್ಯವಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts