More

    ಜಲ್ ಜೀವನ್ ಮಿಷನ್ ಅನುಷ್ಠಾನಕ್ಕೆ ಸಿದ್ಧತೆ

    ಬೆಳಗಾವಿ: ಮನೆ ಮನೆಗೆ ನಳಗಳ ಮೂಲಕ ನೀರು ಒದಗಿಸುವ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯು (ಘ್ಕೆಈ) 2020-21ನೇ ಸಾಲಿನಿಂದ ‘ಜಲ್ ಜೀವನ್ ಮಿಷನ್ (ಒಒ)’ ಆಗಿ ಪರಿವರ್ತನೆಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

    ನಗರದ ಜಿಪಂ ಕಚೇರಿಯಲ್ಲಿ ತಾಪಂ ಇಒ, ಪಿಡಿಒಗಳೊಂದಿಗೆ ಶನಿವಾರ ವಿಡಿಯೋ ಸಂವಾದ ನಡೆಸಿ, ಜಲ್ ಜೀವನ ಮಿಷನ್ ಯೋಜನೆ ಅನುಷ್ಠಾನಗೊಳಿಸಿ ಯಶಸ್ವಿಗೊಳಿಸಲು ಶ್ರಮಿಸಬೇಕು. ಈ ಯೋಜನೆಯಡಿ ಒಬ್ಬ ವ್ಯಕ್ತಿಗೆ ದಿನಕ್ಕೆ 55 ಲೀಟರ್ ನೀರು ಪೂರೈಸಲಾಗುವುದು ಎಂದರು.

    ಯೋಜನೆಗೆ ಕೇಂದ್ರ ಸರ್ಕಾರದಿಂದ ಶೇ. 45, ರಾಜ್ಯ ಸರ್ಕಾರದಿಂದ ಶೇ. 45ರಷ್ಟು ಅನುದಾನ ನೀಡಲಾಗುತ್ತಿದ್ದು, ಉಳಿದ ಶೇ. 10ರಷ್ಟನ್ನು ಸಮುದಾಯ ವಂತಿಕೆ ರೂಪದಲ್ಲಿ ಗ್ರಾಮಸ್ಥರು ನೀಡಬೇಕಾಗುತ್ತದೆ. ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಯೋಜನೆಯನ್ನು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯಿಂದ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ತಾಂತ್ರಿಕ ಸಿಬ್ಬಂದಿ ಸಹಾಯದಿಂದ ರೂಪಿಸಲಾಗುತ್ತದೆ.

    ಕ್ರಿಯಾ ಯೋಜನೆಗೆ ಜಿಲ್ಲಾ ಮಟ್ಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯ (ಈಖ) ಜಿಲ್ಲಾ ನೀರು ಮತ್ತು ಮಿಷನ್ ಸಮಿತಿಯಲ್ಲಿ ಅನುಮೋದಿಸಿ, ರಾಜ್ಯ ಮಟ್ಟದ ಅನುಮೋದನೆಗಾಗಿ ಕಳುಹಿಸಲಾಗುತ್ತದೆ ಎಂದರು.

    ರಾಜ್ಯದ (ಖಖ) ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿಯಿಂದ ಅನುಮೋದಿಸಲ್ಪಟ್ಟ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ, ಮನೆ ಮನೆಗೆ ನಳಗಳ ಮೂಲಕ ನೀರು ಒದಗಿಸಲಾಗುವುದು. 2020-21ರಿಂದ 2023-24ರ ವರೆಗೆ ಗ್ರಾಮೀಣ ಭಾಗದ ಎಲ್ಲ ಮನೆಗಳಿಗೆ ನಳದ ಮೂಲಕ ನೀರು ಒದಗಿಸುವ ಗುರಿ ಹೊಂದಿದೆ ಎಂದರು.

    ವಿಡಿಯೋ ಸಂವಾದ ಸಭೆಯಲ್ಲಿ ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ, ಯೋಜನಾ ನಿರ್ದೇಶಕ ಎಂ.ಎನ್. ಪಾಟೀಲ, ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗಗಳ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಅಸೂಟಿ ಹಾಗೂ ಎಂ.ಬಿ. ಹುಲಕುಂದ ಸೇರಿದಂತೆ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts