More

    ನಗ್ರೋಟಾ ಉಗ್ರರ ಉಸ್ತುವಾರಿ ನೋಡ್ಕೊಳ್ತಿದ್ದುದು ಜೆಇಎಂ ಮುಖ್ಯಸ್ಥ ಮಸೂದ್ ಅಜರ್​ನ ಸಹೋದರ!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಪ್ರದೇಶದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಬಲಿಯಾದ ನಾಲ್ವರು ಜೈಷ್ ಏ ಮೊಹಮ್ಮದ್ ಉಗ್ರರ ಕಾರ್ಯಚಟುವಟಿಕೆ ನಿರ್ವಹಿಸ್ತಾ ಇದ್ದುದು ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್​ನ ಸಹೋದರ ಅಬ್ದುಲ್ ರೌಫ್ ಅಸ್ಗರ್ ಎಂಬ ಅಂಶ ಬೆಳಕಿಗೆ ಬಂದಿದೆ.

    ಗಡಿ ನುಸುಳಿದ್ದು ಹೀಗೆ..

    ಸಾಂಬಾ ಸೆಕ್ಟರ್​ನಲ್ಲಿ ಗಡಿ ನುಸುಳುವುದಕ್ಕೆ ಉಗ್ರರು ನುಲ್ಲಾಹ್​ಗಳ ನೆರವು ಪಡೆದುಕೊಂಡಿದ್ದಾರೆ. ಅವರು ಈ ಉಗ್ರರನ್ನು ಜಟ್ವಾಲ್​ ಸಮೀಪ ಟ್ರಕ್​ನಲ್ಲಿ ಹತ್ತಿಸಿಕೊಂಡಿದ್ದಾರೆ. ಜಮ್ಮುವಿನ ಕಥುವಾ ಕಡೆಯಿಂದ ಆರು ಕಿ.ಮೀ. ಅಂತರದಲ್ಲಿದೆ ಈ ಪ್ರದೇಶ. ನಸುಕಿನ 3 ರಿಂದ 4 ಗಂಟೆ ಸಮಯದಲ್ಲಿ ನುಸುಳುವಿಕೆ ನಡೆಯುತ್ತದೆ. ಬೆಳಗ್ಗೆ 4.45ರ ಸಮಯದಲ್ಲಿ ಟ್ರಕ್​ ಬಾನ್ ಟೋಲ್ ಪ್ಲಾಜಾ ಬಳಿ ಬಂದಾಗ ಭದ್ರತಾ ಪಡೆ ಟ್ರಕ್​ ಸುತ್ತುವರಿದಿದೆ. ಕೂಡಲೇ ಟ್ರಕ್​ ಚಾಲಕ ಗಾಡಿ ಬಿಟ್ಟು ಪರಾರಿಯಾಗಿದ ಬೆನ್ನಿಗೆ ಕಾರ್ಯಾಚರಣೆ ನಡೆದಿದೆ.

    ಅನುಷ್ಠಾನಗೊಳಿಸುವ ಮುನ್ನ ಬಹವಾಲ್​ಪುರದಲ್ಲಿರುವ ಜೆಇಎಂ ಕೇಂದ್ರ ಕಚೇರಿಯಲ್ಲಿ ಸಭೆ ನಡೆದಿದೆ. ಅಲ್ಲಿ ಮೌಲಾನಾ ಅಬು ಜುಂದಾಲ್​, ಮುಫ್ತಿ ತೌಸೀರ್ಫ್ ಮತ್ತು ಇನ್ನಿಬ್ಬರು ಹಿರಿಯ ಜೈಷ್ ಕಮಾಂಡರ್​ಗಳು ಹಾಗೂ ಐಎಸ್​ಐ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಶಂಕಿಸಲಾಗಿದೆ. ಇದಾಗಿ ಭಾರತದ ಗಡಿ ಭಾಗದಲ್ಲಿರುವ ಶಕರ್​ಗಢ ಜೆಇಎಂ ಕ್ಯಾಂಪ್​ನಲ್ಲಿ ಸಿದ್ಧರಾಗಿದ್ದ ಉಗ್ರರನ್ನು ಆಯ್ಕೆ ಮಾಡುವ ಕೆಲಸವನ್ನು ಅಸ್ಗರ್ ಮಾಡಿದ್ದು, ಭಾರತದೊಳಕ್ಕೆ ಕಳುಹಿಸುವ ಕೆಲಸವನ್ನು ಐಎಸ್​ಐ ನೆರವೇರಿಸಿದೆ. ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ಇನ್ನೊಬ್ಬ ಉಗ್ರ ಖಾಝಿ ತರಾರ್​ ಎಂಬಾತನು ಪಾಲ್ಗೊಂಡಿದ್ದ.

    ಇದನ್ನೂ ಓದಿ : ಮತಾಂತರ ತಂದಿಟ್ಟ ಅವಾಂತರ – ತಾಯಿಯ ಅಂತ್ಯಸಂಸ್ಕಾರದ ವೇಳೆ ನಡೆಯಿತು ಫೈಟಿಂಗ್ !

    ಈ ಉಗ್ರರು ನವೆಂಬರ್ 18-19ರಂದು ಸಾಂಬಾ ಸೆಕ್ಟರ್ ಮೂಲಕ ಭಾರತದೊಳಕ್ಕೆ ನುಸುಳಿದ್ದರು. ಪುಲ್ವಾಮಾ ಉಗ್ರ ದಾಳಿಯಂತೆ ದೊಡ್ಡ ಪ್ರಮಾಣದಲ್ಲಿ ಉಗ್ರ ದಾಳಿ ಸಂಘಟಿಸುವ ಹೊಣೆ ಹೊತ್ತು ಅವರು ಭಾರತದೊಳಕ್ಕೆ ಪ್ರವೇಶಿಸಿದ್ದರು. ಅವರ ಕಾರ್ಯಚಟುವಟಿಕೆಗಳನ್ನು ಅಜರ್​ನ ಸಹೋದರ ಅಬ್ದುಲ್ ಅಸ್ಗರ್​ ನೋಡಿಕೊಳ್ತಿದ್ದ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಈ ಉಗ್ರರನ್ನು ಕೆಲಸಕ್ಕೆ ಸಾಕಷ್ಟು ತರಬೇತಿ ನೀಡಿ ನಿಯೋಜಿಸಿತ್ತು ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಸರ್ಕಾರಿ ಅನುದಾನಿತ ಗೋಶಾಲೆಯಲ್ಲಿ 78 ಹಸುಗಳ ನಿಗೂಢ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts